ಬೆಂಗಳೂರು:ನಗರದಲ್ಲಿ ದಿನದಿಂದ ದಿನಕ್ಕೆ ದರೋಡೆ, ಸುಲಿಗೆ, ಅತ್ಯಾಚಾರ, ಗಲಾಟೆಗಳು ಹೆಚ್ಚಾಗುತ್ತಲೇ ಇದೆ. ಲಗ್ಗೆರೆಯಲ್ಲಿ ಮತ್ತೊಂದು ಘಟನೆ ನಡೆದಿದೆ.
BIGG NEWS : ಅಕ್ರಮವಾಗಿ ಪತ್ನಿ ಖಾತೆಗೆ 2.69 ಕೋಟಿ ರೂ. ವರ್ಗಾಯಿಸಿದ ಬ್ಯಾಂಕ್ ಸಿಬ್ಬಂದಿ!
ಬಾರ್ ನಲ್ಲಿ ಕುಡಿಯುತ್ತಿದ್ದ ವೇಳೆ ಗ್ಯಾಂಗ್ ವೊಂದು ಅಟ್ಯಾಕ್ ಮಾಡಿದೆ. ಅವರಿಗೆ ಲಾಂಗ್ ಮತ್ತು ಬಿಯರ್ ಬಾಟಲ್ ನಿಂದ ಹಲ್ಲೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಲಗ್ಗೆರೆಯ ಸನ್ ರೈಸ್ ಬಾರ್ ಗೆ ನುಗ್ಗಿದ ಇಬ್ಬರು ಪುಂಡರು ಚೀಲದಿಂದ ಲಾಂಗ್ ತೆಗೆದಿದ್ದಾರೆ. ಆ ಬಾರ್ ನಲ್ಲಿ ಕುಡಿಯುತ್ತಿದ್ದ ರೌಡಿಶೀಟರ್ ಐಕಾನ್ ರಾಜು ಮತ್ತು ಆತನ ಸ್ನೇಹಿತನ ಮೇಲೆ ಪುಂಡರು ದಾಳಿ ನಡೆಸಿದ್ದಾರೆ.ಐಕಾನ್ ರಾಜು, ಹಾಗು ಸ್ನೇಹಿತ ಬಿಯರ್ ಬಾಟ್ಲಿಯಿಂದ ಹೊಡೆದು ಎದುರಾಳಿ ಗ್ಯಾಂಗ್ ಹಿಮ್ಮೆಟ್ಟಿಸಿದ್ದಾರೆ.
BIGG NEWS : ಅಕ್ರಮವಾಗಿ ಪತ್ನಿ ಖಾತೆಗೆ 2.69 ಕೋಟಿ ರೂ. ವರ್ಗಾಯಿಸಿದ ಬ್ಯಾಂಕ್ ಸಿಬ್ಬಂದಿ!
ಕ್ರಿಕೆಟ್ ಬೆಟ್ಟಿಂಗ್ ಗೆ ಹಲ್ಲೆಗೆ ಕಾರಣವೆಂದು ಹೇಳಲಾಗಿದೆ. ಬೆಟ್ಟಿಂಗ್ ಡೀಲ್ ವಿಚಾರವಾಗಿ ಅರುಣ್ ಎನ್ನುವ ವ್ಯಕ್ತಿಯನ್ನ ಹುಡುಕಿಕೊಂಡು ಬಂದಿದ್ದ ಗ್ಯಾಂಗ್ ಗೆ ಅರುಣ್ ಸಹೋದರ ಐಕಾನ್ ರಾಜು ಕಂಡಿದ್ದಾನೆ. ಆಗ ಅಟ್ಯಾಕ್ ನಡೆಸಿದ್ದಾರೆ. ಈ ಸಂಬಂಧ ಲಗ್ಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.