ಕಲಬುರಗಿ: ಜಿಲ್ಲೆಯ ಅಫಜಲಪುರ ತಾಲ್ಲೂಕಿನ ದೇವಲ ಗಾಣಗಾಪುರದ ಭೀಮಾ ನದಿಯಲ್ಲಿ ಶ್ರೀ ದತ್ತಾತ್ರೇಯ ದೇವರ ಭಕ್ತನೊಬ್ಬ ಕೊಚ್ಚಿ ಹೋಗಿರುವ ಘಟನೆ ನಡೆದಿದೆ.
BIGG BREAKING NEWS: ಕೊಡಗಿನ ಹರಪಳ್ಳಿ ಗ್ರಾಮದಲ್ಲಿ ಭೂಕುಸಿತ; ಆತಂಕದಲ್ಲಿ ಜನರು
20 ವರ್ಷದ ಗೋಪಾಲ್ ತಂದೆ ಪ್ರಕಾಶ್ ರಾಠೋಡ್ ಎಂಬಾತ ನದಿಯಲ್ಲಿ ಕೊಚ್ಚಿ ಹೊದ ಯುವಕ.
ಮಹಾರಾಷ್ಟ್ರ ರಾಜ್ಯದ ಲಾತೂರ್ ನಿವಾಸಿಯಾದ ಗೋಪಾಲ್ ರಾಠೋಡ್. ನಿನ್ನೆ ಪುಣ್ಯ ಸ್ನಾನ ಮಾಡಲು ಸಂಗಮದಲ್ಲಿ ಇಳಿದಾಗ ದುರ್ಘಟನೆ ಸಂಭವಿಸಿದೆ.
ಕುಟುಂಬ ದತ್ತಾತ್ರೇಯ ದೇವರ ದರ್ಶನಕ್ಕೆ ಆಗಮಿಸಿದ್ದರು.ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿ ದೇವರ ದರ್ಶನ ಮಾಡುವ ವಾಡಿಕೆ ಇದೆ. ಅದರಂತೆ ಪುಣ್ಯ ಸ್ನಾನಕ್ಕೆ ನದಿಗೆ ಇಳಿದಾಗ ಗೋಪಾಲ್ ಕೊಚ್ಚಿ ಹೋಗಿದ್ದಾನೆ.
ತುಂಬಿ ಹರಿಯುತ್ತಿರುವ ಭೀಮಾ ನದಿ ನೀರಿನ ಸೆಳೆತಕ್ಕೆ ಕೊಚ್ಚಿದ ಭಕ್ತ. ನಾಪತ್ತೆಯಾಗಿರುವ ಗೋಪಾಲ್ ರಾಠೋಡ್ ಗಾಗಿ ಹುಡುಕಾಟ ನಡೆಸಿದ್ದಾರೆ.
BIGG BREAKING NEWS: ಕೊಡಗಿನ ಹರಪಳ್ಳಿ ಗ್ರಾಮದಲ್ಲಿ ಭೂಕುಸಿತ; ಆತಂಕದಲ್ಲಿ ಜನರು
ಸ್ಥಳೀಯ ಪೊಲೀಸ್, ಎಸ್ ಡಿಆರ್ ಎಫ್, ಅಗ್ನಿಶಾಮಕ ಸಿಬ್ಬಂದಿ ಯಿಂದ ಶೋಧ ಕಾರ್ಯ ಮುಂದುವರೆದಿದೆ.
1 ಕ್ಕೂ ಅಧಿಕ ರಕ್ಷಣಾ ಸಿಬ್ಬಂದಿ ಯಿಂದ ಬೋಟ್ ಮುಲಕ ಕಾರ್ಯಾಚರಣೆ ನಡೆಯುತ್ತಿದೆ. ದೇವಲ ಗಾಣಗಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.