ಇಸ್ರೇಲ್: ಇಸ್ರೇಲ್ ಪ್ರವಾಸದಲ್ಲಿರುವ ದಕ್ಷಿಣ ಭಾರತ ಪತ್ರಕರ್ತರ ನಿಯೋಗ ಇಸ್ರೇಲ್ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ಈಡನ್‌ಬಾರ್ ಟಾಲ್ ಅವರ ಜೊತೆಗೆ ಸಂವಾದ ನಡೆಸಿತು.
ಇದೇ ಸಂದರ್ಭದಲ್ಲಿ ಯುದ್ದ ಕೊನೆಗಾಣಿಸುವಂತೆ ಪತ್ರಕರ್ತರ ತಂಡ ಆಶಯ ವ್ಯಕ್ತಪಡಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಕೆಲ ಘಟನೆಗಳು ಅನಿವಾರ್ಯವಾಗಿ ಯುದ್ಧದ ಪರಿಸ್ಥಿತಿ ತಂದೊಡ್ಡಿದ್ದವು. ಇಸ್ರೇಲ್ ಶಾಂತಿಗೆ ಆದ್ಯತೆ ನೀಡುತ್ತಾ ಬಂದಿದೆ. ಈಗಲೂ ಶಾಂತಿ ಮರುಸ್ಥಾಪನೆ ನಿಟ್ಟಿನಲ್ಲಿ ಪ್ರಯತ್ನದಲ್ಲಿದ್ದೇವೆ ಎಂದು ತಿಳಿಸಿದರು. ಭಾರತದ ಜೊತೆಗೆ ಉತ್ತಮ ಸಂಬಂಧ ಹೊಂದಿರುವುದು ನಮಗೆ ಹೆಮ್ಮೆಯ ಸಂಗತಿ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಭಾರತೀಯ ಪತ್ರಕರ್ತರ ನಿಯೋಗದ ಪರವಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು ಭಾರತೀಯ ಸಂಪ್ರದಾಯದ ಶಲ್ಯ ಹಾಕಿ, ಕೆಯುಡಬ್ಲ್ಯೂಜೆ ಹೊರತಂದಿರುವ ಪತ್ರಕರ್ತ ಸಂಚಿಕೆ ಮತ್ತು ಅಮೃತಬೀಜ
ಪುಸ್ತಕಗಳನ್ನು ನೀಡಿ ಗೌರವಿಸಿತು.
ಹಿರಿಯ ಪತ್ರಕರ್ತರಾದ ಪ್ರಶಾಂತ ನಾತು, ಚೀ.ಜ.ರಾಜೀವ್, ರಮೇಶ್ ಕುಮಾರ್ ನಾಯಕ್, ಬಸವರಾಜು, ಮಧು ನಾಯಕ್ , ತಮಿಳುನಾಡು, ಕೇರಳ ಪತ್ರಕರ್ತರು ಜೊತೆಯಲ್ಲಿದ್ದರು.
ಶಿವಮೊಗ್ಗ: ಸಾಗರದ ಸಂಪಿಗೆಸರ ಬಳಿಯಲ್ಲಿ ಆಟೋ-ಬೈಕ್ ನಡುವೆ ಅಪಘಾತ, ಓರ್ವನಿಗೆ ಗಂಭೀರ ಗಾಯ
ನಿಮ್ಮ ಮೊಬೈಲ್ ನಲ್ಲೇ `ಚಂದ್ರಗ್ರಹಣ’ ಲೈವ್ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ