ದಕ್ಷಿಣಕನ್ನಡ : ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದೇನೆ ಎಂದು ಅನಾಮಿಕ ವ್ಯಕ್ತಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪ್ರಕರಣದ ತನಿಖೆ ಎಸ್ಐಟಿಗೆ ವಹಿಸಿತು ಕಳೆದ ಹಲವು ದಿನಗಳಿಂದ ಎಸ್ಐಟಿ ಧರ್ಮಸ್ಥಳದಲ್ಲಿ ದೂರುದಾರ ತೋರಿಸಿದ ಎಲ್ಲಾ ಸ್ಥಳಗಳಲ್ಲೂ ನೆಲ ಆಗಿದ್ದರು ಯಾವುದೇ ಕುರುಹು ದೊರೆತಿಲ್ಲ ಇದೀಗ ಎಸ್ಐಟಿ ತನಿಖೆ ಸ್ಥಗಿತಗೊಳಿಸಿದ್ದು ಈ ವಿಚಾರವಾಗಿ ಗಿರೀಶ್ ಮಟ್ಟಣ್ಣನವರ್ ಇದರ ಹಿಂದೆ ಷಡ್ಯಂತರ ಇದೆ ಎಂದು ಸ್ಪೋಟಕವಾದ ಹೇಳಿಕೆ ನೀಡಿದ್ದಾರೆ.
ಈಗ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಗಿರೀಶ್ ಮಟ್ಟಣ್ಣನವರ್ ಉಜಿರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಧರ್ಮಸ್ಥಳದಲ್ಲಿ ಎಸ್ಐಟಿ ತನಿಖೆ ನಿಲ್ಲಿಸಲು ಷಡ್ಯಂತರ ನಡೆದಿದೆ ಎಂದು ಹೇಳಿಕೆ ನೀಡಿದ್ದಾರೆ. ಇನ್ನು ಸಾಕಷ್ಟು ಜನರು ಸಾಕ್ಷಿ ಹೇಳುವುದಕ್ಕೆ ಬರುತ್ತಾರೆ ತನಿಖೆ ಇಲ್ಲಿಗೆ ನಿಲ್ಲಬಾರದು, ಇನ್ನೂ ಸಾಕಷ್ಟು ಸಾಕ್ಷಿಗಳು ಸಿಗುತ್ತವೆ ಆರಂಭದಲ್ಲೇ ನಿಲ್ಲಿಸುವ ಯತ್ನ ಮಾಡಬೇಡಿ ಸರ್ಕಾರಕ್ಕೆ ಹೋರಾಟಗಾರ ಗಿರೀಶ್ ಮಟ್ಟಣ್ಣವರ್ ಮನವಿ ಮಾಡಿದ್ದಾರೆ.