ಮಂಡ್ಯ: ಜಿಲ್ಲೆಯ ಮದ್ದೂರು ಬಳಿಯಲ್ಲಿ ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯಲ್ಲಿ ಕಾರೊಂದು ಹೊತ್ತಿ ಉರಿದಿರುವಂತ ಘಟನೆ ನಡೆದಿದೆ.
ಮೈ- ಬೆಂ ದಶಪಥ ಹೆದ್ದಾರಿಯಲ್ಲಿ ಕಾರು ಹೊತ್ತಿ ಉರಿದಿದೆ. ಮದ್ದೂರು ತಾಲೂಕಿನ ನಿಡಘಟ್ಟ ಬಳಿಯ ಮೈ- ಬೆಂ ಹೆದ್ದಾರಿಯಲ್ಲಿ ಘಟನೆ ನಡೆದಿದೆ. ಕಾರಿನಲ್ಲಿದ್ದ ದಂಪತಿ ಆಶ್ಚರ್ಯಕರ ರೀತಿ ಪಾರಾಗಿದ್ದಾರೆ.
ಶ್ರೀರಂಗಪಟ್ಟಣ ತಾಲೂಕಿನ ಪಿ. ಹೊಸಹಳ್ಳಿ ಗ್ರಾಮದ ಕಿರಣ್ ಹಾಗು ರಂಜಿತ ಅಪಾಯದಿಂದ ಪಾರಾದ ದಂಪತಿ ಆಗಿದ್ದಾರೆ. ಬೆಂಗಳೂರಿಗೆ ಹೋಗಿ ವಾಪಸ್ಸು ಬರುವ ವೇಳೆ ಹೆದ್ದಾರಿಯಲ್ಲಿ ಏಕಾಏಕಿ ಕಾರು ಹೊತ್ತಿ ಉರಿದಿದೆ. ಕಾರಿನಲ್ಲಿ ಹೊಗೆ ಬರುತ್ತಿದ್ದಂತೆ ಕಾರಿನಿಂದ ಇಳಿದು ದಂಪತಿಗಳು ಪಾರಾಗಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಮದ್ದೂರು ಅಗ್ನಿಶಾಮಕ ಸಿಬ್ಬಂದಿಗಳಿಂದ ಬೆಂಕಿ ಶಮನ ಕಾರ್ಯಾಚರಣೆ ನಡೆಸಿದರು. ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
BREAKING : ಪಕ್ಕದ ಮನೆಯವರ ಮೇಲೆ ವರದಕ್ಷಿಣೆ ಕಿರುಕುಳ ಕೇಸ್ ದಾಖಲಿಸುವಂತಿಲ್ಲ : ಹೈಕೋರ್ಟ್ ಮಹತ್ವದ ತೀರ್ಪು
BREAKING: ನ್ಯೂಜಿಲೆಂಡ್ ವಿರುದ್ಧದ ಮೊದಲ ಮೂರು ಟಿ20 ಪಂದ್ಯಗಳಿಂದ ತಿಲಕ್ ವರ್ಮಾ ಔಟ್ | Tilak Varma








