ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಕಸಬಾ ಲಿಂಗಸಗೂರು ಗ್ರಾಮದಲ್ಲಿ ಆಕಳು ಕರುವಿನ ಮೇಲೆ ಯುವಕ ಅತ್ಯಾಚಾರ ಎಸಗಿ ವಿಕೃತಿ ಮೆರೆದಿದ್ದಾನೆ. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
BREAKING NEWS: ತಲೆಗೆ ಗುಂಡು ಹಾರಿಸಿಕೊಂಡು ಪ್ರದೀಪ್ ಆತ್ಮಹತ್ಯೆ ಪ್ರಕರಣ; ಶಾಸಕ ಅರವಿಂದ ಲಿಂಬಾಳಿ ವಿರುದ್ಧ FIR
24 ವರ್ಷದ ಇಮ್ತಿಯಾಜ್ ಬಂಧಿತ ಆರೋಪಿ. ಈತ ಆಟೋ ಓಡಿಸಿಕೊಂಡು ಇದ್ದ. ಯಾವಾಗಲು ತೋಟದ ಮನೆಯಲ್ಲೇ ಮಲಗುತ್ತಿದ್ದ. ನಿನ್ನೆ ಯಾರೂ ಇಲ್ಲದ ವೇಳೆ ಅಮರೇಶ ಎಂಬ ವ್ಯಕ್ತಿಗೆ ಸೇರಿದ್ದ ಆಕಳ ಕರುವಿನ ಕಾಲು ಕಟ್ಟಿ ಹಾಕಿ ಅತ್ಯಾಚಾರ ಎಸಗಿದ್ದಾನೆ. ಸುಮಾರು 7-8 ಆಕಳು ಸಾಕಾಣಿಕೆ ಮಾಡುತ್ತಿದ್ದ ಅಮರೇಶ ಕೊಟ್ಟಿಗೆಯಲ್ಲಿ ಆಕಳು ಕಟ್ಟಿ ಮನೆಗೆ ಹೋದಾಗ ಘಟನೆ ನಡೆದಿದೆ. ಇಮ್ತಿಯಾಜ್ ನ ಪೈಶಾಚಿಕ ಕೃತ್ಯ ಕಣ್ಣಾರೆ ಕಂಡಿದ್ದ ಅಮರೇಶ ಬಳಿಕ ಇಮ್ತಿಯಾಜ್ ನ ಪೊಲೀಸ್ ಠಾಣೆಗೆ ಒಪ್ಪಿಸಿ ದೂರು ನೀಡಿದ್ದಾರೆ. ಸೆಕ್ಷನ್ 377 ಅಡಿಯಲ್ಲಿ ಇಮ್ತಿಯಾಜ್ ವಿರುದ್ಧ ಎಫ್ಐಆರ್ ದಾಖಲಾಗಿದೆ.