ದಾವಣಗೆರೆ: ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಬೈಕ್ ಸವಾರನೊಬ್ಬ ಅವಾಜ್ ಹಾಕಿದಂತ ಘಟನೆ ನಡೆದಿದೆ. ಒನ್ ವೇನಲ್ಲಿ ಬಂದಂತ ಬೈಕ್ ಸವಾರನನ್ನು ಪ್ರಶ್ನಿಸಿದ್ದಕ್ಕೆ ಡಿಸಿಗೆ ಅವಾಜ್ ಹಾಕಿರೋದಾಗಿ ತಿಳಿದು ಬಂದಿದೆ.
ಇಂದು ಬೆಳಗ್ಗೆ ಸೈಕಲ್ಲಿನಲ್ಲಿ ದಾವಣಗೆರೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಅವರು ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಬೈಕ್ ಸವಾರನೊಬ್ಬ ಒನ್ ವೇನಲ್ಲಿ ವೇಗವಾಗಿ ಬಂದಿದ್ದನು. ಇದನ್ನು ಡಿಸಿ ಗಂಗಾಧರಸ್ವಾಮಿ ಪ್ರಶ್ನೆ ಮಾಡಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಗಂಗಾಧರಸ್ವಾಮಿಗೆ ಬೈಕ್ ಸವಾರ ಅವಾಜ್ ಹಾಕಿದ್ದಾನೆ. ತಕ್ಷಣವೇ ಪೊಲೀಸರಿಗೆ ಪೋನ್ ಮಾಡಿ ಜಿಲ್ಲಾಧಿಕಾರಿ ಬೈಕ್ ಸವಾರನ ವಿರುದ್ಧ ಕ್ರಮಕ್ಕೆ ಸೂಚಿಸಿದ್ದಾರೆ. ಪೊಲೀಸರು ಜಿಲ್ಲಾಧಿಕಾರಿಗಳಿಂದ ಬೈಕ್ ನಂಬರ್ ಪಡೆದು ಇದೀಗ ಕಾನೂನು ಕ್ರಮ ಕೈಗೊಂಡಿರೋದಾಗಿ ಹೇಳಲಾಗುತ್ತಿದೆ.
ಜೂ.22ರಂದು ಬೆಂಗಳೂರಲ್ಲಿ ಪರಮ ಭಾಗವತ ಭದ್ರಾಚಲ ರಾಮದಾಸು ನೃತ್ಯ ಪ್ರದರ್ಶನ
BREAKING : ಮೇ ತಿಂಗಳ `ಗೃಹಲಕ್ಷ್ಮಿ’ ಹಣ ಬಿಡುಗಡೆ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಹತ್ವದ ಮಾಹಿತಿ