ಬಿಹಾರ : ಬಿಹಾರದ ಗಯಾದ ಎಂಬಲ್ಲಿ ತನ್ನ ಅನಾರೋಗ್ಯಗೊಂಡ ತಾಯಿ ಆಸೆ ಇಡೇರಿಸಿದ ಮಗಳ ಹೃದಯಸ್ಪರ್ಶಿ ವಿಡಿಯೋ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ
ಚಳಿಗಾಲದ ಚಂಡಮಾರುತಕ್ಕೆ ತತ್ತರಿಸಿದ ಅಮೇರಿಕಾ: ಮೃತರ ಸಂಖ್ಯೆ 48ಕ್ಕೆ ಏರಿಕೆ | US Winter Storm
ತಾಯಿ ಗಯಾದ ಮ್ಯಾಜಿಸ್ಟ್ರೇಟ್ ಕಾಲೋನಿಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಕೆಯ ಸ್ಥಿತಿ ಚಿಂತಾಜನಕವಾಗಿದೆ . ಯಾವುದೇ ಪರಿಸ್ಥಿತಿ ಎದುರಿಸಲು ಸಿದ್ಧರಾಗಿರಬೇಕು ಎಂದು ವೈದ್ಯರು ಕುಟುಂಬ ಸದಸ್ಯರಿಗೆ ಸೂಚನೆ ನೀಡಿದ್ದರು.
ಈ ಗಂಭೀರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಪೂನಂ ತನ್ನ ಕೊನೆಯ ಆಸೆಯನ್ನು ತನ್ನ ಕುಟುಂಬಕ್ಕೆ ವಿನಂತಿಸಿದಳು, ಸುಮಾರು 26 ವರ್ಷ ವಯಸ್ಸಿನ ತನ್ನ ಮಗಳು ಚಾಂದಿನಿ ಮದುವೆಯನ್ನು ನೋಡಬೇಕೆಂದು ಕೇಳಿಕೊಂಡರು. ಬಳಿಕ ತರತುರಿಯಲ್ಲಿ ಗುರುವಾ ಪೊಲೀಸ್ ಠಾಣೆ ವ್ಯಾಪ್ತಿಯ ಸೇಲಂಪುರ ಗ್ರಾಮದ ನಿವಾಸಿ ಸುಮಿತ್ ಗೌರವ್ (ಸುಮಾರು 28 ವರ್ಷ) ನೊಂದಿಗೆ ಚಾಂದಿನಿಯ ವಿವಾಹವನ್ನು ನಿಗದಿಪಡಿಸಿ, ಇಬ್ಬರ ನಿಶ್ಚಿತಾರ್ಥ ಸಮಾರಂಭಕ್ಕೆ ಡಿಸೆಂಬರ್ 26 ರಂದು ದಿನಾಂಕ ನಿಗದಿಯಾಗಿತ್ತು.
ಚಳಿಗಾಲದ ಚಂಡಮಾರುತಕ್ಕೆ ತತ್ತರಿಸಿದ ಅಮೇರಿಕಾ: ಮೃತರ ಸಂಖ್ಯೆ 48ಕ್ಕೆ ಏರಿಕೆ | US Winter Storm
ಸುಮಿತ್ ಗೌರವ್ ಮತ್ತು ಚಾಂದಿನಿ ಆಸ್ಪತ್ರೆಯಲ್ಲಿಯೇ ICU ನ ಹೊರಗೆ ವಿವಾಹವಾದರು. ಯಾವುದೇ ಅಲಂಕಾರಗಳಿಲ್ಲದೆ ವಧು-ವರರು ಪರಸ್ಪರ ಹಾರ ಹಾಕಿದರು ಎಂದು ಹೇಳಲಾಗಿದೆ. ಈ ವೇಳೆ ಎರಡೂ ಕಡೆಯಿಂದ ಎರಡರಿಂದ ನಾಲ್ಕು ಮಂದಿ ಭಾಗಿಯಾಗಿದ್ದರು.
ಈ ಮೂಲಕ ಅನಾರೋಗ್ಯದಿಂದ ಖಾಸಗಿ ಆಸ್ಪತ್ರೆಯೊಂದರ ಐಸಿಯುನಲ್ಲೇ ಮದುವೆ ಆಗುವ ಮೂಲಕ ತಾಯಿಯ ಕೊನೆಯ ಆಸೆ ಈಡೇರಿಸಿದ್ದಾರೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದು.ಇದೀಗ ನೆಟ್ಟಿಗರಿಂದ ಭಾರೀ ಪ್ರಶಂಸೆ ಗಳಿಸುತ್ತಿದ್ದಾರೆ. ಈ ವಿಡಿಯೋ ಇಲ್ಲಿದೆ ನೋಡಿ
मरती मां की ख्वाहिश देख ICU में हुई बेटी की शादी #Bihar #ICU pic.twitter.com/vpxDbcJbnr
— Aman Kumar Dube (@Aman_Journo) December 26, 2022
ವಿಶಿಷ್ಟ ವಿವಾಹದ ಕಾರ್ಯಕ್ರಮಗಳನ್ನು ಮುಗಿದ ನಂತರ, ವಧು-ವರರು ಗುರಾರು ಬ್ಲಾಕ್ನ ಬಾಳಿ ಗ್ರಾಮದ ನಿವಾಸಿ ಅಸ್ವಸ್ಥ ತಾಯಿ ಪೂನಂ ಕುಮಾರಿ ವರ್ಮಾ ಅವರಿಂದ ಆಶೀರ್ವಾದ ಪಡೆದರು. ಆದರೆ, ಮದುವೆಯಾದ ಕೆಲವೇ ಗಂಟೆಗಳಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿ ಕೊನೆಯುಸಿರೆಳೆದಿದ್ದಾರೆ.