ಬೆಳಗಾವಿ : ಬೊಗಳುವ ನಾಯಿ ಕಚ್ಚೋದಿಲ್ಲ, ಕಚ್ಚೋ ನಾಯಿ ಬೊಗಳುವುದಿಲ್ಲ ಎಂದು ಕಂದಾಯ ಸಚಿವ ಅಶೋಕ್ ಶಿವಸೇನೆ ನಾಯಕ ಸಂಜಯ್ ರಾವುತ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಸುವರ್ಣಸೌಧದಲ್ಲಿ ಮಾತನಾಡಿದ ಸಚಿವ ಅಶೋಕ್ ರಾವತ್ ನುಗ್ಗುವುದಿಲ್ಲ, ನಾವು ಒಂದಿಂಚೂ ಜಾಗ ಬಿಡಲ್ಲ, ಇವರು ನಮಗೆ ಲೆಕ್ಕಕ್ಕೆ ಇಲ್ಲ ಎಂದು ಕಿಡಿಕಾರಿದರು. ಅಶೋಕ್ ರಾವತ್ ನುಗ್ಗುವುದಿಲ್ಲ, ನಾವು ಒಂದಿಂಚೂ ಜಾಗ ಸಹ ಬಿಟ್ಟು ಕೊಡೋಲ್ಲ, ಬೊಗಳುವ ನಾಯಿ ಕಚ್ಚೋದಿಲ್ಲ, ಕಚ್ಚೋ ನಾಯಿ ಬೊಗಳುವುದಿಲ್ಲ, ಒಂದು ಹಳ್ಳಿಯನ್ನು ಸಹ ಬಿಟ್ಟು ಕೊಡುವ ಮಾತೇ ಇಲ್ಲ ಎಂದು ಅಶೋಕ್ ರಾವತ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಭಾರತಕ್ಕೆ ಚೀನಾ ನುಗ್ಗಿದಂತೆ ಕರ್ನಾಟಕಕ್ಕೆ ನಾವು ನುಗ್ಗುತ್ತೇವೆ ಎಂದು ಶಿವಸೇನಾ ನಾಯಕ ಸಂಜಯ್ ರಾವುತ್ ಉದ್ಧಟತನದ ಹೇಳಿಕೆ ನೀಡಿದ್ದಾರೆ. ಮಹಾರಾಷ್ಟ್ರ-ಕರ್ನಾಟಕ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ, ನಮಗೆ ಯಾರ ಅನುಮತಿ ಬೇಕಾಗಿಲ್ಲ , ಭಾರತಕ್ಕೆ ಚೀನಾ ನುಗ್ಗಿದಂತೆ ಬೆಳಗಾವಿಗೆ ನಾವು ನುಗ್ಗುತ್ತೇವೆ ಎಂದು ಶಿವಸೇನಾ ನಾಯಕ ಸಂಜಯ್ ರಾವತ್ ಉದ್ಧಟತನದ ಹೇಳಿಕೆ ನೀಡಿದ್ದಾರೆ.
ಕರ್ನಾಟಕದ ಸಿಎಂ ವಿವಾದದ ಕಿಡಿ ಹೊತ್ತಿಸುತ್ತಿದ್ದಾರೆ, ಮಹಾರಾಷ್ಟ್ರ-ಕರ್ನಾಟಕ ಯಾವುದೇ ಕ್ರ,ಮ ಕೈಗೊಂಡಿಲ್ಲ, ಬೆಳಗಾವಿಗೆ ನುಗ್ಗಲು ನಮಗೆ ಯಾರ ಅನುಮತಿ ಬೇಕಾಗಿಲ್ಲ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಉದ್ಧಟತನ ಮೆರೆದಿದ್ದಾರೆ. ಈ ವಿಚಾರವಾಗಿ ತಮಗೆ ಯಾರದ್ದೇ ‘ಅನುಮತಿ’ ಅಗತ್ಯವಿಲ್ಲ ಎಂದು ರಾಜ್ಯಸಭೆ ಸಂಸದ ಸಂಜಯ್ ರಾವತ್, ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ. ನಾವು ಮಾತುಕತೆ ಮೂಲಕ ಬಗೆಹರಿಸಲು ಬಯಸಿದ್ದೇವೆ. ಆದರೆ ಕರ್ನಾಟಕ ಮುಖ್ಯಮಂತ್ರಿ ಬೆಂಕಿ ಹಚ್ಚುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ದುರ್ಬಲ ಸರ್ಕಾರವಿದೆ. ಅದು ಈ ವಿಚಾರವಾಗಿ ಯಾವುದೇ ನಿಲುವು ತೆಗೆದುಕೊಳ್ಳುತ್ತಿಲ್ಲ” ಎಂದು ರಾವತ್ ವಾಗ್ದಾಳಿ ನಡೆಸಿದ್ದಾರೆ.
BIGG NEWS : ‘ಅಧಿಕ ಬಡ್ಡಿ ವಿಧಿಸುವವರ ವಿರುದ್ಧ ಪೊಲೀಸರು ದಾಳಿ ನಡೆಸುವಂತಿಲ್ಲ’ : ಹೈಕೋರ್ಟ್ ಆದೇಶ
ವಿಧಾನಸಭೆಯಲ್ಲಿ ಹುಬ್ಬಳ್ಳಿ ‘ದರ್ಗಾ ತೆರವು’ ವಿಚಾರ ಪ್ರಸ್ತಾಪ : ನನ್ನದು 19 ಗುಂಟೆ ಜಾಗ ಹೋಗಿದೆ ಎಂದ ಸಿಎಂ ಬೊಮ್ಮಾಯಿ