ಕೊಪ್ಪಳ : ಕೊಪ್ಪಳ ಜಿಲ್ಲೆಯಲ್ಲಿ 5 ತಿಂಗಳ ಬಳಿಕ ಮೊದಲ ಕೊರೊನಾ ಕೇಸ್ ಪತ್ತೆಯಾಗಿದ್ದು, 26 ವರ್ಷದ ಯುವತಿಗೆ ಕೊರೊನಾ ಸೋಂಕು ಧೃಡವಾಗಿದೆ.
ಅಮೆರಿಕದಿಂದ ಬಂದಿದ್ದ 26 ವರ್ಷದ ಯುವತಿಗೆ ಕೊರೊನಾ ಸೋಂಕು ಧೃಡವಾಗಿದ್ದು, ಜಿಲ್ಲೆಯಲ್ಲಿ ಆತಂಕ ಶುರುವಾಗಿದೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕೋವಿಡ್ ಟೆಸ್ಟ್ ವೇಳೆ ಸೋಂಕು ಧೃಡವಾಗಿದೆ. ಯುವತಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ನಿವಾಸಿಯಾಗಿದ್ದು, ಸದ್ಯ ಈಕೆಯನ್ನು ಹೋಮ್ ಐಸೋಲೇಷನ್ ನಲ್ಲಿಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ರಾಜ್ಯದ ಒಂದು ಹಳ್ಳಿಯನ್ನೂ ನಾವು ಬಿಟ್ಟುಕೊಡುವುದಿಲ್ಲ : ‘ಮಹಾ’ ಸರ್ಕಾರದ ವಿರುದ್ಧ ಡಿಕೆಶಿ ಗುಡುಗು