Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬೀದಿ ನಾಯಿಗಳಿಗೆ ಆಹಾರ ನೀಡುವ ವ್ಯಕ್ತಿಗಳಿಗೆ ತೊಂದರೆ ಕೊಡಬೇಡಿ : ಸಾರ್ವಜನಿಕರಿಗೆ ಮನವಿ

SHOCKING : ಪೊಲೀಸ್ ಜೀಪ್‌ ನಲ್ಲೇ ಬಂದು ಉದ್ಯಮಿಗಳಿಂದ 20 ಲಕ್ಷ ರೂ. ದೋಚಿದ ಇನ್ಸ್‌ ಪೆಕ್ಟರ್.!

BREAKING : `NEET UG’ ಮರುಪರೀಕ್ಷೆ : ವೈದ್ಯಕೀಯ ಕಾಲೇಜುಗಳಿಗೆ `NMC’ ಕಟ್ಟುನಿಟ್ಟಿನ ಮಾರ್ಗಸೂಚಿ ಪ್ರಕಟ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SHOCKING : ಪೊಲೀಸ್ ಜೀಪ್‌ ನಲ್ಲೇ ಬಂದು ಉದ್ಯಮಿಗಳಿಂದ 20 ಲಕ್ಷ ರೂ. ದೋಚಿದ ಇನ್ಸ್‌ ಪೆಕ್ಟರ್.!
KARNATAKA

SHOCKING : ಪೊಲೀಸ್ ಜೀಪ್‌ ನಲ್ಲೇ ಬಂದು ಉದ್ಯಮಿಗಳಿಂದ 20 ಲಕ್ಷ ರೂ. ದೋಚಿದ ಇನ್ಸ್‌ ಪೆಕ್ಟರ್.!

By kannadanewsnow57

ಬೆಂಗಳೂರು: ಪೊಲೀಸ್ ಅಧಿಕಾರಿಯೊಬ್ಬರು ದರೋಡೆಕೋರರ ಗ್ಯಾಂಗ್ ಕಟ್ಟಿಕೊಂಡು ಉದ್ಯಮಿಗಳನ್ನು ಹೆದರಿಸಿ ಲಕ್ಷಾಂತರ ರೂಪಾಯಿ ಲೂಟಿ ಮಾಡಿರುವ ಆಘಾತಕಾರಿ ಘಟನೆಯೊಂದು ಸಿಲಿಕಾನ್ ಸಿಟಿಯಲ್ಲಿ ಬೆಳಕಿಗೆ ಬಂದಿದೆ.

ಬೆಂಗಳೂರಿನ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ದರೋಡೆ ಪ್ರಕರಣದಲ್ಲಿ ಸಿಐಡಿ ವಿಭಾಗದ ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ ಮುಖ್ಯ ಸೂತ್ರಧಾರಿಯಾಗಿದ್ದು, ಸದ್ಯ ಪೊಲೀಸರು ದರೋಡೆಗೆ ಬಳಸಿದ್ದ ಅಧಿಕೃತ ಸಿಐಡಿ ಜೀಪನ್ನು ಜಪ್ತಿ ಮಾಡಿದ್ದಾರೆ.

ಕೇರಳ ಮೂಲದ ಉದ್ಯಮಿಗಳು ವ್ಯಾಪಾರ ಮತ್ತು ಟ್ರೇಡಿಂಗ್ ಉದ್ದೇಶಗಳಿಗಾಗಿ ಭಾರಿ ನಗದಿನೊಂದಿಗೆ ಬೆಂಗಳೂರಿಗೆ ಬಂದು ಮಡಿವಾಳದ ಖಾಸಗಿ ಹೋಟೆಲ್‌ ಒಂದರಲ್ಲಿ ತಂಗಿದ್ದರು. ಉದ್ಯಮಿಗಳ ಬಳಿ ದೊಡ್ಡ ಮೊತ್ತದ ಹಣವಿರುವ ಬಗ್ಗೆ ನಿಖರ ಮಾಹಿತಿ ಪಡೆದಿದ್ದ ಸಿಐಡಿ ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ, ಹಣ ಸುಲಿಗೆ ಮಾಡಲು ಸ್ಕೆಚ್ ಹಾಕಿದ್ದರು. ಇದಕ್ಕಾಗಿ ಹ್ಯಾರಿಸ್, ಕುಪೇಂದ್ರ, ಶಪಿ ಮತ್ತು ಶಾನಿ ಎಂಬ ನಾಲ್ವರೊಂದಿಗೆ ಸೇರಿ ದರೋಡೆಗೆ ಸಂಚು ರೂಪಿಸಿದ್ದರು.

ದಾಳಿಯ ದಿನದಂದು ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ ನೇತೃತ್ವದ ತಂಡವು ಹೋಟೆಲ್ ಮುಂಭಾಗದಲ್ಲಿ ಇಲಾಖೆಯ ಅಧಿಕೃತ ಸಿಐಡಿ ಜೀಪನ್ನು ತಂದು ನಿಲ್ಲಿಸಿತ್ತು. ಜೀಪ್ ಒಳಗಡೆ ಇನ್ಸ್‌ಪೆಕ್ಟರ್ ಮಹೇಶ್ ಕಾಯುತ್ತಿದ್ದರೆ, ಇತ್ತ ಗ್ಯಾಂಗ್‌ನ ಇಬ್ಬರು ಸದಸ್ಯರು ಹೋಟೆಲ್ ಕೋಣೆಯೊಳಗೆ ನುಗ್ಗಿದ್ದಾರೆ. ತಾವು ಕ್ರೈಮ್ ವಿಭಾಗದ ಪೊಲೀಸರೆಂದು ಹೇಳಿಕೊಂಡು ನಕಲಿ ಗುರುತಿನ ಚೀಟಿ ತೋರಿಸಿದ ಆರೋಪಿಗಳು, “ನೀವು ಅಕ್ರಮವಾಗಿ ಟ್ರೇಡಿಂಗ್ ಮಾಡಲು ಹಣ ತಂದಿದ್ದೀರಿ” ಎಂದು ಉದ್ಯಮಿಗಳನ್ನು ಬ್ಲ್ಯಾಕ್‌ ಮೇಲ್ ಮಾಡಿದ್ದಾರೆ.

ಇದರಿಂದ ತೀವ್ರ ಭಯಭೀತರಾದ ಉದ್ಯಮಿಗಳಿಂದ 20 ಲಕ್ಷ ರೂಪಾಯಿ ಹಣವನ್ನು ದೋಚಿದ ದರೋಡೆಕೋರರು, ಹೊರಗೆ ಕಾಯುತ್ತಿದ್ದ ಅದೇ ಸಿಐಡಿ ಜೀಪ್ ಹತ್ತಿ ಪರಾರಿಯಾಗಿದ್ದಾರೆ.

ಸಿಸಿಟಿವಿಯಲ್ಲಿ ಸಿಕ್ಕಿಬಿದ್ದ ಜೀಪ್, ಓರ್ವನ ಬಂಧನ

ವಂಚಕರ ಜಾಲಕ್ಕೆ ಬಿದ್ದಿರುವುದು ತಡವಾಗಿ ಅರಿವಾದ ತಕ್ಷಣ ಸಂತ್ರಸ್ತ ಉದ್ಯಮಿಗಳು ಮಡಿವಾಳ ಪೊಲೀಸ್ ಠಾಣೆಗೆ ಧಾವಿಸಿ ದೂರು ನೀಡಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಹೋಟೆಲ್‌ ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ದರೋಡೆಗೆ ಇಲಾಖೆಯ ಜೀಪ್ ಬಳಸಿರುವುದು ಪತ್ತೆಯಾಗಿದೆ.

ತಕ್ಷಣವೇ ಕಾರ್ಯಾಚರಣೆ ನಡೆಸಿದ ಮಡಿವಾಳ ಪೊಲೀಸರು ದರೋಡೆ ಗ್ಯಾಂಗ್‌ ನ ಸದಸ್ಯನಾದ ಕುಪೇಂದ್ರ ಎಂಬಾತನನ್ನು ಬಂಧಿಸಿದ್ದಾರೆ. ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ಈ ಇಡೀ ದರೋಡೆಯ ಮಾಸ್ಟರ್ ಮೈಂಡ್ ಸ್ವತಃ ಸಿಐಡಿ ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ ಎಂಬ ಆಘಾತಕಾರಿ ಸತ್ಯ ಬಯಲಾಗಿದೆ.

ಇನ್ಸ್‌ಪೆಕ್ಟರ್ ನಾಪತ್ತೆ, ತೀವ್ರ ಶೋಧ

ತಮ್ಮ ತಂಡದ ಸಹಚರ ಸಿಕ್ಕಿಬೀಳುತ್ತಿದ್ದಂತೆ ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ ಸೇರಿದಂತೆ ಉಳಿದ ನಾಲ್ವರು ಆರೋಪಿಗಳು ರಾತ್ರೋರಾತ್ರಿ ತಲೆಮರೆಸಿಕೊಂಡಿದ್ದಾರೆ. ಸದ್ಯ ಪೊಲೀಸರು ದರೋಡೆಗೆ ಬಳಸಿದ್ದ ಸಿಐಡಿ ಜೀಪನ್ನು ವಶಕ್ಕೆ ಪಡೆದಿದ್ದು, ತಲೆಮರೆಸಿಕೊಂಡಿರುವ ಪೊಲೀಸ್ ಅಧಿಕಾರಿ ಮತ್ತು ಆತನ ಇತರೆ ಸಹಚರರ ಪತ್ತೆಗಾಗಿ ಬೆಂಗಳೂರು ಹಾಗೂ ನೆರೆ ಜಿಲ್ಲೆಗಳಲ್ಲಿ ವ್ಯಾಪಕ ಜಾಲ ಬೀಸಿದ್ದಾರೆ.

SHOCKING: Inspector robs businessman of Rs. 20 lakhs in police jeep!
Share. Facebook Twitter LinkedIn WhatsApp Email

Related Posts

ಬೀದಿ ನಾಯಿಗಳಿಗೆ ಆಹಾರ ನೀಡುವ ವ್ಯಕ್ತಿಗಳಿಗೆ ತೊಂದರೆ ಕೊಡಬೇಡಿ : ಸಾರ್ವಜನಿಕರಿಗೆ ಮನವಿ

2 Mins Read

ಬೆಂಗಳೂರಿನಲ್ಲಿ ಕೂತರೆ ಸಾಗರದ ಜನರ ಕಷ್ಟ ತಿಳಿಯುವುದೇಗೆ?: ಶಾಸಕರ ವಿರುದ್ಧ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ದೇವೇಂದ್ರಪ್ಪ ವಾಗ್ದಾಳಿ

3 Mins Read

BREAKING : ಮೇಕೆದಾಟು ಯೋಜನೆ ವಿರುದ್ಧ ತಮಿಳುನಾಡು ವಿಧಾನಸಭೆಯಲ್ಲಿ ಸರ್ವಾನುಮತದ ನಿರ್ಣಯ ಅಂಗೀಕಾರ

1 Min Read
Recent News

ಬೀದಿ ನಾಯಿಗಳಿಗೆ ಆಹಾರ ನೀಡುವ ವ್ಯಕ್ತಿಗಳಿಗೆ ತೊಂದರೆ ಕೊಡಬೇಡಿ : ಸಾರ್ವಜನಿಕರಿಗೆ ಮನವಿ

SHOCKING : ಪೊಲೀಸ್ ಜೀಪ್‌ ನಲ್ಲೇ ಬಂದು ಉದ್ಯಮಿಗಳಿಂದ 20 ಲಕ್ಷ ರೂ. ದೋಚಿದ ಇನ್ಸ್‌ ಪೆಕ್ಟರ್.!

BREAKING : `NEET UG’ ಮರುಪರೀಕ್ಷೆ : ವೈದ್ಯಕೀಯ ಕಾಲೇಜುಗಳಿಗೆ `NMC’ ಕಟ್ಟುನಿಟ್ಟಿನ ಮಾರ್ಗಸೂಚಿ ಪ್ರಕಟ!

ಬೆಂಗಳೂರಿನಲ್ಲಿ ಕೂತರೆ ಸಾಗರದ ಜನರ ಕಷ್ಟ ತಿಳಿಯುವುದೇಗೆ?: ಶಾಸಕರ ವಿರುದ್ಧ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ದೇವೇಂದ್ರಪ್ಪ ವಾಗ್ದಾಳಿ

State News
KARNATAKA

ಬೀದಿ ನಾಯಿಗಳಿಗೆ ಆಹಾರ ನೀಡುವ ವ್ಯಕ್ತಿಗಳಿಗೆ ತೊಂದರೆ ಕೊಡಬೇಡಿ : ಸಾರ್ವಜನಿಕರಿಗೆ ಮನವಿ

By kannadanewsnow57 KARNATAKA 2 Mins Read

ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೀದಿನಾಯಿಗಳ ವ್ಯವಸ್ಥಿತ ನಿರ್ವಹಣೆ, ಸುರಕ್ಷಿತ ಆಹಾರ ಕೇಂದ್ರಗಳ ಗುರುತಿಸುವಿಕೆ, ಸಾರ್ವಜನಿಕರ ಸಹಭಾಗಿತ್ವ ಹಾಗೂ…

SHOCKING : ಪೊಲೀಸ್ ಜೀಪ್‌ ನಲ್ಲೇ ಬಂದು ಉದ್ಯಮಿಗಳಿಂದ 20 ಲಕ್ಷ ರೂ. ದೋಚಿದ ಇನ್ಸ್‌ ಪೆಕ್ಟರ್.!

ಬೆಂಗಳೂರಿನಲ್ಲಿ ಕೂತರೆ ಸಾಗರದ ಜನರ ಕಷ್ಟ ತಿಳಿಯುವುದೇಗೆ?: ಶಾಸಕರ ವಿರುದ್ಧ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ದೇವೇಂದ್ರಪ್ಪ ವಾಗ್ದಾಳಿ

BREAKING : ಮೇಕೆದಾಟು ಯೋಜನೆ ವಿರುದ್ಧ ತಮಿಳುನಾಡು ವಿಧಾನಸಭೆಯಲ್ಲಿ ಸರ್ವಾನುಮತದ ನಿರ್ಣಯ ಅಂಗೀಕಾರ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.