ಬೆಂಗಳೂರು: ರಾಜ್ಯದ ಹಿರಿಯ ಮುಖಂಡರು, ಸಾರಿಗೆ ಹಾಗೂ ಮುಜರಾಯಿ ಸಚಿವರಾದ ರಾಮಲಿಂಗಾ ರೆಡ್ಡಿ ಅವರ ದಕ್ಷ ಕಾರ್ಯವೈಖರಿ ಮತ್ತು ಜನಸ್ನೇಹಿ ರಾಜಕಾರಣಕ್ಕೆ ಇದೀಗ ಮತ್ತೊಂದು ಹೊಸ ದಾಖಲೆ ಸೇರ್ಪಡೆಯಾಗಿದೆ. ಅಧಿಕಾರದ ಅವಧಿಯಲ್ಲಿ ಕೇವಲ ಕಚೇರಿಗಷ್ಟೇ ಸೀಮಿತವಾಗದೆ, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಲು ಅವರು ಕೈಗೊಂಡಿರುವ ಅಧಿಕೃತ ಪ್ರವಾಸಗಳ ಅಂಕಿ-ಅಂಶಗಳು ಇವರ ಕಾರ್ಯದಕ್ಷತೆಗೆ ಕೈಗನ್ನಡಿಯಾಗಿವೆ.
ಉಸ್ತುವಾರಿ ಜಿಲ್ಲೆಯಲ್ಲಿ ಸಕ್ರಿಯ: 54 ಬಾರಿ ಅಧಿಕೃತ ಪ್ರವಾಸ
ರಾಮಲಿಂಗಾ ರೆಡ್ಡಿ ಅವರು ತಮ್ಮ ಉಸ್ತುವಾರಿ ಜಿಲ್ಲೆಯಾದ ಬೆಂಗಳೂರು ದಕ್ಷಿಣ ಜಿಲ್ಲೆಗೆ ದಿನಾಂಕ: 20.05.2023 ರಿಂದ 22.05.2026ರ ವರೆಗಿನ ಅವಧಿಯಲ್ಲಿ ಒಟ್ಟು 54 ಬಾರಿ ಅಧಿಕೃತ ಕಾರ್ಯ ನಿಮಿತ್ತ ಪ್ರವಾಸ ಕೈಗೊಂಡಿದ್ದಾರೆ. ಈ ಪ್ರವಾಸಗಳ ಸಂದರ್ಭದಲ್ಲಿ ಜಿಲ್ಲೆಯ ವಿವಿಧೆಡೆ ಪ್ರಗತಿ ಪರಿಶೀಲನಾ ಸಭೆಗಳು, ಸಾರ್ವಜನಿಕ ಸಮಾರಂಭಗಳು, ಇಲಾಖಾ ಕಾರ್ಯಕ್ರಮಗಳು ಹಾಗೂ ಖುದ್ದು ಸ್ಥಳ ಪರಿವೀಕ್ಷಣೆಗಳನ್ನು ನಡೆಸುವ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ವೇಗ ನೀಡಿದ್ದಾರೆ.
ರಾಜ್ಯಾದ್ಯಂತ 141 ಬಾರಿ ಪ್ರವಾಸ: ಜನಸಾಮಾನ್ಯರ ಮೆಚ್ಚುಗೆ
ತಮ್ಮ ಉಸ್ತುವಾರಿ ಜಿಲ್ಲೆಯಷ್ಟೇ ಅಲ್ಲದೆ, ಮಾನ್ಯ ಸಚಿವರು ಬೆಂಗಳೂರಿನಿಂದ ರಾಜ್ಯದ ಇತರೆ ಜಿಲ್ಲೆಗಳಿಗೂ ಸಾರಿಗೆ ಮತ್ತು ಮುಜರಾಯಿ ಇಲಾಖೆಯ ಕೆಲಸ ಕಾರ್ಯಗಳ ನಿಮಿತ್ತ ದಿನಾಂಕ: 20.05.2023 ರಿಂದ 22.05.2026ರ ಅವಧಿಯಲ್ಲಿ ಒಟ್ಟು 141 ಬಾರಿ ಪ್ರವಾಸ ಕೈಗೊಂಡಿದ್ದಾರೆ. ಈ ಅಂಕಿ-ಅಂಶಗಳನ್ನು ಗಮನಿಸಿದರೆ, ಹಿರಿಯ ಸಚಿವರಾಗಿದ್ದರೂ ಸಹ ರಾಜ್ಯಾದ್ಯಂತ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಅಧಿಕೃತ ಪ್ರವಾಸ ಕೈಗೊಂಡಿರುವ ಬೆರಳೆಣಿಕೆಯ ಸಚಿವರಲ್ಲಿ ರಾಮಲಿಂಗಾ ರೆಡ್ಡಿ ಅವರು ಮುಂಚೂಣಿಯಲ್ಲಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮಾತುಗಳು ಕೇಳಿಬರುತ್ತಿವೆ.
ಪ್ರತಿದಿನ ಬೆಳಗ್ಗೆ 8:30ಕ್ಕೆ ಕಚೇರಿಯಲ್ಲಿ ಲಭ್ಯ: ಅಪ್ಪಟ ಜನಸ್ನೇಹಿ ನಾಯಕ
ಇತ್ತೀಚಿನ ದಿನಗಳಲ್ಲಿ ಹಲವು ಸಚಿವರು ಹಾಗೂ ಜನಪ್ರತಿನಿಧಿಗಳು ಸ್ವಂತ ಕ್ಷೇತ್ರದ ಜನಸಾಮಾನ್ಯರಿಗೆ ಸಿಗುವುದೇ ಅಪರೂಪ ಎನ್ನುವಂತಹ ಕಾಲಘಟ್ಟವಿದೆ. ಆದರೆ, ಇದಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುವ ರಾಮಲಿಂಗಾ ರೆಡ್ಡಿ ಅವರು ಬೆಂಗಳೂರಿನಲ್ಲಿದ್ದರೆ ಸಾಕು, ಪ್ರತಿದಿನ ಬೆಳಗ್ಗೆ ಸರಿಯಾಗಿ 8:30 ಗಂಟೆಗೆ ಕೋರಮಂಗಲದಲ್ಲಿರುವ ತಮ್ಮ ಶಾಸಕರ ಕಚೇರಿಗೆ ಹಾಜರಿರುತ್ತಾರೆ. ಕ್ಷೇತ್ರ ಹಾಗೂ ರಾಜ್ಯದ ಯಾವುದೇ ಭಾಗದ ಸಾರ್ವಜನಿಕರು ಅತ್ಯಂತ ಸುಲಭವಾಗಿ ಭೇಟಿ ಮಾಡಿ ಅಹವಾಲು ಸಲ್ಲಿಸಬಹುದಾದ ಏಕೈಕ ಜನಸ್ನೇಹಿ ಸಚಿವ ಎಂದರೆ ಅದು ರಾಮಲಿಂಗಾ ರೆಡ್ಡಿ ಮಾತ್ರ ಎಂದು ಕ್ಷೇತ್ರದ ಮತದಾರರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ತಮ್ಮ ಉಸ್ತುವಾರಿ ಜಿಲ್ಲೆಯ ಜವಾಬ್ದಾರಿಯ ಜೊತೆಗೆ ರಾಜ್ಯಾದ್ಯಂತ ನಿರಂತರ ಪ್ರವಾಸ ಕೈಗೊಂಡು, ಇಲಾಖೆಯ ಅಭಿವೃದ್ಧಿಗೆ ಶ್ರಮಿಸುತ್ತಿರುವ ಇವರ ಕಾರ್ಯವೈಖರಿ ಮತ್ತು ಕರ್ತವ್ಯ ನಿಷ್ಠೆ ಇಂದಿನ ರಾಜಕಾರಣಿಗಳಿಗೆ ನಿಜಕ್ಕೂ ಮಾದರಿ ಹಾಗೂ ಅನುಕರಣೀಯ ಎಂದು ಸಾರ್ವಜನಿಕರು ಶ್ಲಾಘಿಸಿದ್ದಾರೆ.
‘ಸಾಗರ ತಹಶೀಲ್ದಾರ್ ಡಾ.ಪ್ರತಿಭಾ’ಗೆ ಗ್ರೇಡ್-2 ಹುದ್ದೆಯಿಂದ ಗ್ರೇಡ್-1 ಹುದ್ದೆಗೆ ಮುಂಬಡ್ತಿ ನೀಡಿ ಸರ್ಕಾರ ಆದೇಶ
ರಾಜ್ಯದ ‘232 ತಹಶೀಲ್ದಾರ್’ಗಳಿಗೆ ಗ್ರೇಡ್-1 ಹುದ್ದೆಗೆ ಬಡ್ತಿ ನೀಡಿ ಸರ್ಕಾರ ಆದೇಶ








