ಕೋಲಾರ : ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನೇ ಪಾಪಿ ಪತಿ ಒಬ್ಬ ಭೀಕರವಾಗಿ ಕೊಲೆ ಮಾಡಿರುವ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿಂಡಹಳ್ಳಿ ಕೆರೆ ಬಳಿ ಒಂದು ಕೊಲೆ ನಡೆದಿದೆ. ಕತ್ತು ಕೊಯ್ದು ಪತ್ನಿ ಯೋಗಿನಿ (21)ಳನ್ನು ಪತಿ ಗಣೇಶ್ ಭೀಕರವಾಗಿ ಕೊಲೆ ಮಾಡಿದ್ದಾನೆ,
ಕೊಲೆಯಾದ ಯೋಗಿನಿ, ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಮೂಲದ ನಿವಾಸಿಯಾಗಿದ್ದು, ಇನ್ನೂ ಕೊಲೆ ಮಾಡಿರುವ ಗಣೇಶ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅವಳಹಳ್ಳಿ ತಾಲೂಕಿನವನಾಗಿದ್ದಾನೆ. ಕಳೆದ ಎರಡು ವರ್ಷಗಳ ಹಿಂದೆ ಇಬ್ಬರೂ ಪ್ರೀತಿಸಿ ಮದುವೆ ಆಗಿದ್ದರು.
ಇತ್ತೀಚಿಗೆ ಪತ್ನಿಯ ಮೇಲೆ ಗಣೇಶ ಅನುಮಾನ ಪಟ್ಟು ಗಲಾಟೆ ಮಾಡುತ್ತಿದ್ದ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಯೋಗಿನಿ ಕೆಲಸಕ್ಕೆ ಬರುತ್ತಿದ್ದಳು. ಈ ವೇಳೆ ಮಿಂಡಹಳ್ಳಿ ಕೆರೆಯ ಬಳಿ ಪತ್ನಿ ಕತ್ತು ಕೊಯ್ದು ಪತಿ ಕೊಂದಿದ್ದಾನೆ.ಈ ಕುರಿತು ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








