Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಫಿಫಾ ವಿಶ್ವಕಪ್ 2026: ಎಂಬಪ್ಪೆ ಮ್ಯಾಜಿಕ್‌ಗೆ ಸೆನೆಗಲ್ ಧೂಳಿಪಟ; 3-1 ಅಂತರದಲ್ಲಿ ಫ್ರಾನ್ಸ್‌ಗೆ ಭರ್ಜರಿ ಗೆಲುವು!

ರಾಜ್ಯದಲ್ಲಿ `ಆಸ್ತಿ ನೊಂದಣಿ’ ಇನ್ನು ಸುಲಭ : ಕಾವೇರಿ 2.0 ಪೋರ್ಟಲ್ ಮೂಲಕ ‘ಕಾಗದರಹಿತ ದಸ್ತಾವೇಜು’ ಪ್ರಕ್ರಿಯೆ ಹೇಗೆ? ಇಲ್ಲಿದೆ ಸಂಪೂರ್ಣ ವಿವರ

​ಈ ಬಾರಿ ಮೋದಿಯಿಂದ ಬಿಗಿಯಾದ ಆಲಿಂಗನವಿಲ್ಲ, ಕೇವಲ ಹಸ್ತಲಾಘವ! 16 ತಿಂಗಳ ನಂತರದ ‘ಮೋದಿ-ಟ್ರಂಪ್’ ಭೇಟಿಯ ವೀಡಿಯೋ ವೈರಲ್!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದಲ್ಲಿ `ಆಸ್ತಿ ನೊಂದಣಿ’ ಇನ್ನು ಸುಲಭ : ಕಾವೇರಿ 2.0 ಪೋರ್ಟಲ್ ಮೂಲಕ ‘ಕಾಗದರಹಿತ ದಸ್ತಾವೇಜು’ ಪ್ರಕ್ರಿಯೆ ಹೇಗೆ? ಇಲ್ಲಿದೆ ಸಂಪೂರ್ಣ ವಿವರ
KARNATAKA

ರಾಜ್ಯದಲ್ಲಿ `ಆಸ್ತಿ ನೊಂದಣಿ’ ಇನ್ನು ಸುಲಭ : ಕಾವೇರಿ 2.0 ಪೋರ್ಟಲ್ ಮೂಲಕ ‘ಕಾಗದರಹಿತ ದಸ್ತಾವೇಜು’ ಪ್ರಕ್ರಿಯೆ ಹೇಗೆ? ಇಲ್ಲಿದೆ ಸಂಪೂರ್ಣ ವಿವರ

By kannadanewsnow57

ಬೆಂಗಳೂರು: ಕರ್ನಾಟಕ ಸರ್ಕಾರದ ನೊಂದಣಿ ಮತ್ತು ಮುದ್ರಾಂಕ ಇಲಾಖೆಯು ಸಾರ್ವಜನಿಕರ ಅನುಕೂಲಕ್ಕಾಗಿ ಜಾರಿಗೆ ತಂದಿರುವ ‘ಕಾವೇರಿ 2.0’ ತಂತ್ರಾಂಶದ ಮೂಲಕ ಆಸ್ತಿ ನೊಂದಣಿ ಪ್ರಕ್ರಿಯೆ ಈಗ ಸಂಪೂರ್ಣ ಡಿಜಿಟಲೀಕರಣಗೊಂಡಿದೆ. ಕಚೇರಿಗಳಿಗೆ ಅಲೆಯುವ ಮತ್ತು ಕಾಗದ ಪತ್ರಗಳ ರಾಶಿಯನ್ನು ಹೊತ್ತು ತಿರುಗುವ ಜಂಜಾಟವಿಲ್ಲದೆ, ಕಾಗದರಹಿತ (Paperless) ವ್ಯವಸ್ಥೆಯಡಿ ದಸ್ತಾವೇಜು ನೊಂದಣಿ ಮಾಡುವ ಹಂತ-ಹಂತದ ಸಂಪೂರ್ಣ ಮಾರ್ಗದರ್ಶನ ಇಲ್ಲಿದೆ.

ಹಂತ 1: ಲಾಗಿನ್ ಮತ್ತು ಆಸ್ತಿ ವಿವರಗಳ ಸಲ್ಲಿಕೆ
ಮೊದಲಿಗೆ ನಾಗರಿಕರು ಕಾವೇರಿ 2.0 ಪೋರ್ಟಲ್ಗೆ ಭೇಟಿ ನೀಡಿ ಲಾಗಿನ್ ಆಗಬೇಕು. ಲಾಗಿನ್ ಆದ ನಂತರ ‘ಸ್ಟಾರ್ಟ್ ನ್ಯೂ ಅಪ್ಲಿಕೇಶನ್’ (Start New Application) ಕ್ಲಿಕ್ ಮಾಡಿ, ‘ಡಾಕ್ಯುಮೆಂಟ್ ರಿಜಿಸ್ಟ್ರೇಷನ್’ (Document Registration) ವಿಭಾಗವನ್ನು ಆಯ್ಕೆ ಮಾಡಿಕೊಳ್ಳಬೇಕು.

ಆಸ್ತಿಯ ವಿಧಕ್ಕೆ ಅನುಗುಣವಾಗಿ ಇ-ಸ್ವತ್ತು (ಗ್ರಾಮ), ಇ-ಆಸ್ತಿ (ನಗರ), ಅಥವಾ ಯುಎಲ್ಎಂಎಸ್ (ನಗರ ಬಿಡಿ ಆಸ್ತಿ) ಅನ್ನು ಆಯ್ಕೆ ಮಾಡಿಕೊಳ್ಳಬೇಕು.
ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮದ ವಿವರಗಳನ್ನು ನೀಡಿ, ಪಿಐಡಿ (PID) ಸಂಖ್ಯೆಯನ್ನು ನಮೂದಿಸಿ ಸರ್ಚ್ ಮಾಡಿದಾಗ ಆಸ್ತಿಯ ಸಂಪೂರ್ಣ ವಿವರಗಳು ಲಭ್ಯವಾಗುತ್ತವೆ. ಪೂರ್ವ-ಪಶ್ಚಿಮ, ಉತ್ತರ-ದಕ್ಷಿಣದ ಶೆಡ್ಯೂಲ್ ವಿವರಗಳು ತಂತ್ರಾಂಶದಲ್ಲೇ ಸ್ವಯಂಚಾಲಿತವಾಗಿ ಲೆಕ್ಕಾಚಾರವಾಗುತ್ತವೆ .

ಹಂತ 2: ಆಧಾರ್ ಮತ್ತು ಡಿಎಸ್ಸಿ (DSC) ದೃಢೀಕರಣ

ಪಕ್ಷಗಾರರ (ಖರೀದಿದಾರ ಮತ್ತು ಮಾರಾಟಗಾರ) ವಿವರಗಳನ್ನು ನಮೂದಿಸುವಾಗ ಆಧಾರ್ ಕಾರ್ಡ್ ಅಥವಾ ಡಿಜಿಟಲ್ ಸಿಗ್ನೇಚರ್ ಸರ್ಟಿಫಿಕೇಟ್ (DSC) ಕಡ್ಡಾಯವಾಗಿದೆ.

ಆಧಾರ್ ವಿವರಗಳನ್ನು ನಮೂದಿಸಿ, ಮೊಬೈಲ್ಗೆ ಬರುವ ಒಟಿಪಿ (OTP) ಮೂಲಕ ದೃಢೀಕರಣ ಮಾಡಿಕೊಳ್ಳಬೇಕು. ಒಂದು ವೇಳೆ ಆಧಾರ್ ಇಲ್ಲದಿದ್ದರೆ ಪಾಸ್ಪೋರ್ಟ್ ವಿವರಗಳ ಜೊತೆಗೆ ಡಿಎಸ್ಸಿ (DSC) ಕೀ ಇರುವುದು ಕಡ್ಡಾಯವಾಗಿರುತ್ತದೆ.

ಸಾಕ್ಷಿದಾರರು (Witness) ಕಡ್ಡಾಯವಾಗಿ ಆಧಾರ್ ದೃಢೀಕರಣವನ್ನೇ ಮಾಡಬೇಕಾಗುತ್ತದೆ.

ಹಂತ 3: ಮಾರುಕಟ್ಟೆ ಮೌಲ್ಯ ಮತ್ತು ಶುಲ್ಕ ಪಾವತಿ
ಆಸ್ತಿಯ ವಿವರಗಳ ಆಧಾರದ ಮೇಲೆ ಸರ್ಕಾರಿ ಮಾರುಕಟ್ಟೆ ಮೌಲ್ಯವನ್ನು (Market Value) ಲೆಕ್ಕಹಾಕಲಾಗುತ್ತದೆ.

ಮಾರುಕಟ್ಟೆ ಮೌಲ್ಯ ಹಾಗೂ ಕನ್ಸಿಡರೇಷನ್ ಮೊತ್ತದಲ್ಲಿ ಯಾವುದು ಹೆಚ್ಚಿರುತ್ತದೆಯೋ, ಅದಕ್ಕೆ ಅನುಗುಣವಾಗಿ ಸರ್ಕಾರಕ್ಕೆ ಪಾವತಿಸಬೇಕಾದ ಮುದ್ರಾಂಕ ಶುಲ್ಕ ಮತ್ತು ನೊಂದಣಿ ವೆಚ್ಚವನ್ನು ತಂತ್ರಾಂಶವೇ ತೋರಿಸುತ್ತದೆ.ಇದನ್ನು ಪರಿಶೀಲಿಸಿದ ಉಪನೊಂದಣಾಧಿಕಾರಿಗಳು (Sub-Registrar) ಒಪ್ಪಿಗೆ ನೀಡಿದ ಬಳಿಕ, ನಾಗರಿಕರು ತಮ್ಮ ಲಾಗಿನ್ನಲ್ಲಿ ‘ಮೇಕ್ ಪೇಮೆಂಟ್’ (Make Payment) ಕ್ಲಿಕ್ ಮಾಡಿ, ಖಜಾನೆ-2 ಪೋರ್ಟಲ್ ಮೂಲಕ ನೆಟ್ ಬ್ಯಾಂಕಿಂಗ್, ಯುಪಿಐ ಅಥವಾ ಕಾರ್ಡ್ ಬಳಸಿ ಶುಲ್ಕ ಪಾವತಿಸಬಹುದು.

ಹಂತ 4: ಡಿಜಿಟಲ್ ಎಕ್ಸಿಕ್ಯೂಷನ್ ಮತ್ತು ಸ್ಲಾಟ್ ಬುಕಿಂಗ್

ಪಾವತಿ ಯಶಸ್ವಿಯಾದ ನಂತರ ಪಕ್ಷಗಾರರು ಮತ್ತು ಸಾಕ್ಷಿದಾರರು ಆಧಾರ್ ಆಧಾರಿತ ಇ-ಸೈನ್ (e-Sign) ಅಥವಾ ಡಿಎಸ್ಸಿ ಮೂಲಕ ಡಿಜಿಟಲ್ ಸಹಿ ಪ್ರಕ್ರಿಯೆಯನ್ನು (Digital Execution) ಪೂರ್ಣಗೊಳಿಸಬೇಕು.

ನಿಗದಿತ ಮೊತ್ತಕ್ಕಿಂತ ಹೆಚ್ಚಿನ ಕನ್ಸಿಡರೇಷನ್ ಇದ್ದಲ್ಲಿ ಪ್ಯಾನ್ (PAN) ವೆರಿಫಿಕೇಶನ್ ಮಾಡುವುದು ಕಡ್ಡಾಯ.

ಎಲ್ಲವೂ ಮುಗಿದ ನಂತರ ಆಸ್ತಿ ನೊಂದಣಿಗೆ ಬೇಕಾದ ದಿನಾಂಕವನ್ನು ನಿಗದಿಪಡಿಸಲು ‘ಬುಕ್ ಸ್ಲಾಟ್’ (Book Slot) ಕ್ಲಿಕ್ ಮಾಡಿ ಸಮಯ ನಿಗದಿ ಮಾಡಿಕೊಳ್ಳಬೇಕು.

ಹಂತ 5: ಉಪನೊಂದಣಾಧಿಕಾರಿಗಳ ಕಚೇರಿಯಲ್ಲಿ ಅಂತಿಮ ಪ್ರಕ್ರಿಯೆ

ನಿಗದಿತ ದಿನದಂದು ಪಕ್ಷಗಾರರು ಹಾಗೂ ಸಾಕ್ಷಿದಾರರು ಉಪನೊಂದಣಾಧಿಕಾರಿಗಳ (SR) ಕಚೇರಿಗೆ ಭೇಟಿ ನೀಡಬೇಕು. ಒಂದು ವೇಳೆ ಡಿಎಸ್ಸಿ ಬಳಸಿ ದೃಢೀಕರಿಸಿದ್ದರೆ, ತಪ್ಪದೇ ಡಿಎಸ್ಸಿ ಕೀಯನ್ನು ಜೊತೆಗೆ ಕೊಂಡೊಯ್ಯಬೇಕು.

ಕಚೇರಿಯಲ್ಲಿ ಡಿಜಿಟಲ್ ಆಪರೇಟರ್ ಮುಖಾಂತರ ಪಕ್ಷಗಾರರ ಫೋಟೋ, ಬೆರಳಚ್ಚು (Biometric) ಹಾಗೂ ಐರಿಸ್ (Iris) ಗುರುತುಗಳನ್ನು ಪಡೆದು ಆಧಾರ್ ಮೂಲಕ ಮರು-ದೃಢೀಕರಿಸಲಾಗುತ್ತದೆ.

ಅಂತಿಮವಾಗಿ ಉಪನೊಂದಣಾಧಿಕಾರಿಗಳು ತಮ್ಮ ಡಿಜಿಟಲ್ ಸಹಿಯನ್ನು ಹಾಕುವ ಮೂಲಕ ನೊಂದಣಿ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುತ್ತಾರೆ.

ನೇರವಾಗಿ ನಾಗರಿಕರ ಕೈಗೆ ಡಿಜಿಟಲ್ ದಾಖಲೆ!

ನೊಂದಣಿಯಾದ ತಕ್ಷಣವೇ ಅಂತಿಮ ದಸ್ತಾವೇಜು ಅರ್ಜಿದಾರರ ಕಾವೇರಿ ಪೋರ್ಟಲ್ ಲಾಗಿನ್ಗೆ ವರ್ಗಾವಣೆಯಾಗುತ್ತದೆ ಹಾಗೂ ಸಾರ್ವಜನಿಕರು ಇದನ್ನು ನೇರವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದು. ಜೊತೆಗೆ ಈ ನೊಂದಣಿ ಮಾಹಿತಿಯು ಖಾತಾ ಪ್ರಕ್ರಿಯೆಗಾಗಿ ಸ್ವಯಂಚಾಲಿತವಾಗಿ ಸಂಬಂಧಪಟ್ಟ ಇಲಾಖೆಗೆ ರವಾನೆಯಾಗುತ್ತದೆ.

ಸಂಪೂರ್ಣ ಸುರಕ್ಷಿತ ಹಾಗೂ ಕಾಗದರಹಿತವಾಗಿರುವ ಈ ನೂತನ ಕಾವೇರಿ 2.0 ವ್ಯವಸ್ಥೆಯು ಸಾರ್ವಜನಿಕರ ಸಮಯವನ್ನು ಉಳಿಸುವುದಲ್ಲದೆ, ನೊಂದಣಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯನ್ನು ತಂದಿದೆ ಎಂದು ನೊಂದಣಿ ಮತ್ತು ಮುದ್ರಾಂಕ ಇಲಾಖೆ ತಿಳಿಸಿದೆ.

'Property registration' in the state is now easier: How is the 'paperless document' process through the Cauvery 2.0 portal? Here are the complete details
Share. Facebook Twitter LinkedIn WhatsApp Email

Related Posts

ನೋಟಿಫಿಕೇಶನ್ ಇಲ್ಲದಿದ್ದರೂ ಪದೇ ಪದೇ ಫೋನ್ ನೋಡ್ತೀರಾ? ಇದರ ಹಿಂದಿದೆ ಮೆದುಳಿನ ‘ಮೈಂಡ್ ಗೇಮ್’!

2 Mins Read

ಉದ್ಯೋಗವಾರ್ತೆ: `ಕರ್ನಾಟಕ ಆರೋಗ್ಯ ಇಲಾಖೆ’ಯಲ್ಲಿ 800 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!

2 Mins Read

ಶಾಪಿಂಗ್ ಮಾಡುವ ಪ್ರತಿಯೊಬ್ಬರೂ ತಿಳಿಯಲೇಬೇಕಾದ S, M, L ಸೈಜ್ ಗಳ ಅಚ್ಚರಿಯ ಕಥೆ!

2 Mins Read
Recent News

ಫಿಫಾ ವಿಶ್ವಕಪ್ 2026: ಎಂಬಪ್ಪೆ ಮ್ಯಾಜಿಕ್‌ಗೆ ಸೆನೆಗಲ್ ಧೂಳಿಪಟ; 3-1 ಅಂತರದಲ್ಲಿ ಫ್ರಾನ್ಸ್‌ಗೆ ಭರ್ಜರಿ ಗೆಲುವು!

ರಾಜ್ಯದಲ್ಲಿ `ಆಸ್ತಿ ನೊಂದಣಿ’ ಇನ್ನು ಸುಲಭ : ಕಾವೇರಿ 2.0 ಪೋರ್ಟಲ್ ಮೂಲಕ ‘ಕಾಗದರಹಿತ ದಸ್ತಾವೇಜು’ ಪ್ರಕ್ರಿಯೆ ಹೇಗೆ? ಇಲ್ಲಿದೆ ಸಂಪೂರ್ಣ ವಿವರ

​ಈ ಬಾರಿ ಮೋದಿಯಿಂದ ಬಿಗಿಯಾದ ಆಲಿಂಗನವಿಲ್ಲ, ಕೇವಲ ಹಸ್ತಲಾಘವ! 16 ತಿಂಗಳ ನಂತರದ ‘ಮೋದಿ-ಟ್ರಂಪ್’ ಭೇಟಿಯ ವೀಡಿಯೋ ವೈರಲ್!

Shocking: ಮಹಿಳಾ ವೈದ್ಯೆಯ ಮನೆಯ ತೋಟದಲ್ಲಿ 34 ಮಾನವ ಭ್ರೂಣಗಳು ಪತ್ತೆ : ತನಿಖೆ ಆರಂಭ!

State News
KARNATAKA

ರಾಜ್ಯದಲ್ಲಿ `ಆಸ್ತಿ ನೊಂದಣಿ’ ಇನ್ನು ಸುಲಭ : ಕಾವೇರಿ 2.0 ಪೋರ್ಟಲ್ ಮೂಲಕ ‘ಕಾಗದರಹಿತ ದಸ್ತಾವೇಜು’ ಪ್ರಕ್ರಿಯೆ ಹೇಗೆ? ಇಲ್ಲಿದೆ ಸಂಪೂರ್ಣ ವಿವರ

By kannadanewsnow57 KARNATAKA 2 Mins Read

ಬೆಂಗಳೂರು: ಕರ್ನಾಟಕ ಸರ್ಕಾರದ ನೊಂದಣಿ ಮತ್ತು ಮುದ್ರಾಂಕ ಇಲಾಖೆಯು ಸಾರ್ವಜನಿಕರ ಅನುಕೂಲಕ್ಕಾಗಿ ಜಾರಿಗೆ ತಂದಿರುವ ‘ಕಾವೇರಿ 2.0’ ತಂತ್ರಾಂಶದ ಮೂಲಕ…

ನೋಟಿಫಿಕೇಶನ್ ಇಲ್ಲದಿದ್ದರೂ ಪದೇ ಪದೇ ಫೋನ್ ನೋಡ್ತೀರಾ? ಇದರ ಹಿಂದಿದೆ ಮೆದುಳಿನ ‘ಮೈಂಡ್ ಗೇಮ್’!

ಉದ್ಯೋಗವಾರ್ತೆ: `ಕರ್ನಾಟಕ ಆರೋಗ್ಯ ಇಲಾಖೆ’ಯಲ್ಲಿ 800 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!

ಶಾಪಿಂಗ್ ಮಾಡುವ ಪ್ರತಿಯೊಬ್ಬರೂ ತಿಳಿಯಲೇಬೇಕಾದ S, M, L ಸೈಜ್ ಗಳ ಅಚ್ಚರಿಯ ಕಥೆ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.