ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ ಭೀಕರವಾದ ಸರಣಿ ಅಪಘಾತ ಸಂಭವಿಸಿದ್ದು, ಲಾರಿ ಚಾಲಕನ ಅಜಾಗರೂಕತೆಗೆ ಅಪಘಾತ ಸಂಭವಿಸಿದೆ. ಕೂದಲೆಳೆ ಅಂತರದಲ್ಲಿ ವಾಹನ ಸವಾರರು ಬಚಾವ್ ಆಗಿದ್ದಾರೆ. ದೇವನಹಳ್ಳಿಯ ಲಕ್ಷ್ಮಿಪುರ ಗೇಟ್ ಬಳಿ ಈ ಒಂದು ಅಪಘಾತ ಸಂಭವಿಸಿದ್ದು ಸಿಸಿಟಿವಿ ಕ್ಯಾಮೆರಾದಲ್ಲಿ ಈ ಒಂದು ಭೀಕರ ಅಪಘಾತದ ದೃಶ್ಯ ಸೆರೆಯಾಗಿದೆ.
ದೊಡ್ಡಬಳ್ಳಾಪುರದಿಂದ ದೇವನಹಳ್ಳಿ ಕಡೆಗೆ ಲಾರಿ ಬರುತ್ತಿತ್ತು ಈ ವೇಳೆ ನಿಯಂತ್ರಣ ತಪ್ಪಿ, ಮುಂದಿರುವ ಟ್ರ್ಯಾಕ್ಟರ್ ಗೆ ಡಿಕ್ಕಿ ಹೊಡೆದು ಪಕ್ಕದ ರಸ್ತೆಗೆ ನುಗ್ಗಿದ್ದು, ಅಲ್ಲದೆ ಎದುರುಗಡೆ ಬರುತ್ತಿದ್ದಂತಹ ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದಿದೆ. ರಸ್ತೆ ಪಕ್ಕದ ಹಳ್ಳಕ್ಕೆ ಬೋಲೇರೋ ಆಹಾರ ಉರುಳಿ ಬಿದ್ದಿದೆ. ಇಷ್ಟೆಲ್ಲಾ ಭೀಕರ ಅಪಘಾತ ಸಂಭವಿಸಿದರೂ ಕೂಡ ಅದೃಷ್ಟವಶಾತ್ ಎಲ್ಲಾ ಚಾಲಕರು ಕೂಡ ಪ್ರಾಣಭಾಯದಿಂದ ಪಾರಾಗಿದ್ದು ಪವಾಡವೇ ಸರಿ ಎನ್ನಲಾಗಿದೆ.








