ಬಳ್ಳಾರಿ : ಕಳಪೆ ಕಾಮಗಾರಿ ಪ್ರಶ್ನಿಸಿದಕ್ಕೆ ಸಂಸದ ಇ ತುಕಾರಾಂ ಗರಂ ಆಗಿದ್ದು, ಅಶ್ಲೀಲ ಪದ ಬಳಸಿ ಸಂಸದ ತುಕಾರಾಂ ಜನರಿಗೆ ನಿಂದನೆ ಮಾಡಿದ್ದಾರೆ. ಕಳಪೆ ರಸ್ತೆ ಕಾಮಗಾರಿ ಪ್ರಶ್ನಿಸಿದವರಿಗೆ ಸಂಸದ ತುಕಾರಾಂ ಅಶ್ಲೀಲವಾಗಿ ಪದ ಬಳಕೆ ಮಾಡಿ ಬೈದಿದಾರೆ.
ಸುಮಾರು 33 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗಿರುವಂತಹ ರಸ್ತೆ ಮೇಲ್ಸೇತುವೆ ಮತ್ತು ಸರ್ವಿಸ್ ರಸ್ತೆಯ ಕಳಪೆ ಕಾಮಗಾರಿಯನ್ನು ಪ್ರಶ್ನೆ ಮಾಡಿದ್ದಾರೆ. ವಿಜಯನಗರದ ಹೊಸಪೇಟೆ ತಾಲೂಕಿನ ಡಾಣಾಪುರದಲ್ಲಿ ಈ ಒಂದು ಕಾಮಗರಿ ನಡೆದಿದ್ದು, ಕಳಪೆ ಗ್ರಾಮಗಾರಿ ನಡೆದಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಸಂಸದ ತುಕಾರಾಂ ಗರಂ ಆಗಿದ್ದು, ಅಶ್ಲೀಲವಾಗಿ ಪದ ಬಳಕೆ ಮಾಡಿ ನಿಂದಿಸಿದ್ದಾರೆ ಹಾಗೂ ಬೈದಿದ್ದಾರೆ ಎಂದು ಸ್ಥಳೀಯರು ಸಂಸದರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ








