ಬೆಂಗಳೂರು : ಬೆಂಗಳೂರಿನಲ್ಲಿ ಜ್ಯುವೆಲರಿ ಶಾಪ್ ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಬೆಂಗಳೂರು ಪೊಲೀಸರು ಮೂವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಮೇ 30 ರಂದು ಚಿನ್ನಾಭರಣ ಅಂಗಡಿ ದರೋಡೆ ನಡೆಸಿದ್ದಾರು.
ಕೇವಲ 30 ಸೆಕೆಂಡ್ ನಲ್ಲಿ 30 ಗ್ರಾಂ ಚಿನ್ನಾಭರಣ ಕದ್ದು ಪರಾರಿಯಾಗಿದ್ದರು. ನೆಲಮಂಗಲ ತಾಲೂಕಿನ ಟಿ. ಬೇಗುರಿನಲ್ಲಿ ಈ ಒಂದು ಘಟನೆ ನಡೆದಿತ್ತು. ಚಾಕು ಹಿಡಿದು ಖರೀಮರು ದರೋಡೆ ಮಾಡಿದ್ದರು. ಇದೀಗ ಸಿಸಿಟಿವಿ ದೃಶ್ಯ ಆಧರಿಸಿ ರಾಜಸ್ಥಾನ ಮೂಲದ ಕಳ್ಳರನ್ನು ಇದೀಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಪುಷ್ಪೇಂದ್ರ ಸಿಂಗ್ ಬಾಬುಲಾಲ್ ಹಾಗೂ ಮತ್ತೋರ್ವ ವ್ಯಕ್ತಿ ಬಂದಿತ ಆರೋಪಿಗಳು ಎಂದು ತಿಳಿದುಬಂದಿದೆ.








