Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಗುರು ಋಣ ಮರೆತಿಲ್ಲ ಈ ಶಿಷ್ಯ: ನಿವೃತ್ತಿ ದಿನವೇ ನೆಚ್ಚಿನ ಶಿಕ್ಷಕನಿಗೆ `ಸ್ವಿಫ್ಟ್ ಕಾರು’ ಗಿಫ್ಟ್ ನೀಡಿದ ವಿದ್ಯಾರ್ಥಿ!

ರಾಜ್ಯದ ವಾಹನ ಸವಾರರಿಗೆ ಗುಡ್ ನ್ಯೂಸ್ : ಶೇ.50 ರ ರಿಯಾಯಿತಿಯೊಂದಿಗೆ ‘ಟ್ರಾಫಿಕ್ ದಂಡ’ ಪಾವತಿಗೆ ಮತ್ತೆ ಅವಧಿ ವಿಸ್ತರಣೆ.!

​’ಪರಮಾಣು ಮುಕ್ತ ಜಗತ್ತಿಗೆ ಬಲವಾದ ಗೋಡೆ’: ಇಂದು ಅಮೆರಿಕ-ಇರಾನ್ ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಸಹಿ; ಟ್ರಂಪ್ ಭರವಸೆ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ವಾಹನ ಸವಾರರಿಗೆ ಗುಡ್ ನ್ಯೂಸ್ : ಶೇ.50 ರ ರಿಯಾಯಿತಿಯೊಂದಿಗೆ ‘ಟ್ರಾಫಿಕ್ ದಂಡ’ ಪಾವತಿಗೆ ಮತ್ತೆ ಅವಧಿ ವಿಸ್ತರಣೆ.!
KARNATAKA

ರಾಜ್ಯದ ವಾಹನ ಸವಾರರಿಗೆ ಗುಡ್ ನ್ಯೂಸ್ : ಶೇ.50 ರ ರಿಯಾಯಿತಿಯೊಂದಿಗೆ ‘ಟ್ರಾಫಿಕ್ ದಂಡ’ ಪಾವತಿಗೆ ಮತ್ತೆ ಅವಧಿ ವಿಸ್ತರಣೆ.!

By kannadanewsnow57

ಬೆಂಗಳೂರು : ರಾಜ್ಯಾದ್ಯಂತ ಬಾಕಿ ಉಳಿದಿರುವ ಸಂಚಾರ ನಿಯಮ ಉಲ್ಲಂಘನೆಯ ಇ-ಚಲನ್ ದಂಡ ಪಾವತಿಗೆ ರಾಜ್ಯ ಸರ್ಕಾರವು ಮತ್ತೊಮ್ಮೆ ಶೇ. 50 ರಷ್ಟು ಭರ್ಜರಿ ರಿಯಾಯಿತಿ ನೀಡಿ, ಅವಧಿಯನ್ನು ವಿಸ್ತರಣೆ ಮಾಡಿದೆ.

ಜೂನ್ 21 ರಿಂದ ಜುಲೈ 10 ರವರೆಗೆ ಅವಕಾಶ:

ಸಾರ್ವಜನಿಕರಿಗೆ ಅನುಕೂಲವಾಗುವಂತೆ ಈ ವಿಶೇಷ ಸೌಲಭ್ಯವು ಜೂನ್ 21 ರಿಂದ ಜೂನ್ ಜುಲೈ 10 ರವರೆಗೆ ಲಭ್ಯವಿರಲಿದೆ. ಈ ಅವಧಿಯಲ್ಲಿ ದಂಡ ಸಂಗ್ರಹಣೆಯನ್ನು ಪರಿಣಾಮಕಾರಿಯಾಗಿ ನಡೆಸಲು ಬೆಂಗಳೂರು ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆಗೆ ಮುಂದಾಗಿದ್ದಾರೆ.

₹2,827 ಕೋಟಿ ದಂಡ ಬಾಕಿ:

ಜೂನ್ 4 ರಂದು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದಂತೆ, 2025 ರಲ್ಲಿ ಹಲವು ಬಾರಿ ವಿಶೇಷ ಅಭಿಯಾನಗಳನ್ನು ನಡೆಸಿದಾಗ್ಯೂ ರಾಜ್ಯದಲ್ಲಿ ಇನ್ನೂ ಹೆಚ್ಚಿನ ಪ್ರಮಾಣದ ದಂಡ ಬಾಕಿ ಉಳಿದುಕೊಂಡಿದೆ. ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಸುಮಾರು 2,827 ಕೋಟಿ ರೂ. ಮೊತ್ತದ ಸಂಚಾರ ದಂಡ ಸಂಗ್ರಹವಾಗದೇ ಬಾಕಿ ಉಳಿದಿದೆ. ಹೀಗಾಗಿ ಸಾರ್ವಜನಿಕರಿಗೆ ಮತ್ತೊಮ್ಮೆ ಶೇ. 50 ರಷ್ಟು ರಿಯಾಯಿತಿ ಸೌಲಭ್ಯವನ್ನು ಕಲ್ಪಿಸಲಾಗಿದೆ.

ಯಾವೆಲ್ಲಾ ದಂಡಗಳಿಗೆ ರಿಯಾಯಿತಿ ಅನ್ವಯ?

ಈ ಸೌಲಭ್ಯದಡಿ ಮೇ ತಿಂಗಳಿಗೂ ಮುನ್ನ ಪೊಲೀಸ್ ಇಲಾಖೆಯ ಇ-ಚಲನ್‌ಗಳಲ್ಲಿ ದಾಖಲಾಗಿರುವ ಬಾಕಿ ಪ್ರಕರಣಗಳ ದಂಡವನ್ನು ಅರ್ಧ ಮೊತ್ತದಲ್ಲಿ ಪಾವತಿಸಬಹುದಾಗಿದೆ. ಅಷ್ಟೇ ಅಲ್ಲದೆ, ಸಾರಿಗೆ ಇಲಾಖೆಯಲ್ಲಿ 1991 ರಿಂದ 2022 ರ ಅವಧಿಯಲ್ಲಿ ದಾಖಲಾಗಿರುವ ಹಳೆಯ ದಂಡಗಳಿಗೂ ಸಹ ಈ ರಿಯಾಯಿತಿ ಅನ್ವಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ಜಾಗೃತಿ ಅಭಿಯಾನ ಮತ್ತು ಕಠಿಣ ತಪಾಸಣೆ:

ಸಾಮಾಜಿಕ ಜಾಲತಾಣಗಳು ಸೇರಿದಂತೆ ವಿವಿಧ ಮಾಧ್ಯಮಗಳ ಮೂಲಕ ಸಾರ್ವಜನಿಕರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಅಭಿಯಾನವನ್ನು ಈಗಾಗಲೇ ಆರಂಭಿಸಲಾಗಿದೆ. ಈ ರಿಯಾಯಿತಿ ಅವಧಿಯಲ್ಲಿ ನಗರದಲ್ಲಿ ವಾಹನ ತಪಾಸಣೆಯನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು. ತಪಾಸಣೆ ವೇಳೆ ಬಾಕಿ ದಂಡ ಪತ್ತೆಯಾದರೆ, ಸ್ಥಳದಲ್ಲಿಯೇ ದಂಡ ಪಾವತಿಸುವಂತೆ ವಾಹನ ಸವಾರರಿಗೆ ಸೂಚಿಸಲಾಗುವುದು ಎಂದು ಬೆಂಗಳೂರು ಸಂಚಾರ ಪೊಲೀಸ್ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ವಿಶೇಷ ಕೌಂಟರ್‌ಗಳ ಸ್ಥಾಪನೆ:

ದಂಡ ಸಂಗ್ರಹಣೆಯನ್ನು ಯಶಸ್ವಿಗೊಳಿಸಲು ಬೆಂಗಳೂರು ಸಂಚಾರ ಪೊಲೀಸರು ವಿಶೇಷ ಕಾರ್ಯತಂತ್ರ ರೂಪಿಸಿದ್ದಾರೆ. ನಗರದ ಪ್ರಮುಖ ಹಾಗೂ ಅತಿ ಹೆಚ್ಚು ವಾಹನ ದಟ್ಟಣೆ ಇರುವ ಪ್ರದೇಶಗಳಲ್ಲಿ ವಿಶೇಷ ಕೌಂಟರ್‌ ಗಳನ್ನು ತೆರೆಯಲು ಯೋಜನೆ ರೂಪಿಸಲಾಗಿದ್ದು, ವಾಹನ ಸವಾರರು ಅಲ್ಲಿಯೇ ತಮ್ಮ ಬಾಕಿ ದಂಡವನ್ನು ಸುಲಭವಾಗಿ ಪಾವತಿಸಲು ಅವಕಾಶ ಕಲ್ಪಿಸಲಾಗುತ್ತದೆ.

Good news for motorists in the state: The deadline for paying 'traffic fines' has been extended again with a 50% discount!
Share. Facebook Twitter LinkedIn WhatsApp Email

Related Posts

ಗುರು ಋಣ ಮರೆತಿಲ್ಲ ಈ ಶಿಷ್ಯ: ನಿವೃತ್ತಿ ದಿನವೇ ನೆಚ್ಚಿನ ಶಿಕ್ಷಕನಿಗೆ `ಸ್ವಿಫ್ಟ್ ಕಾರು’ ಗಿಫ್ಟ್ ನೀಡಿದ ವಿದ್ಯಾರ್ಥಿ!

1 Min Read

ರಾಜ್ಯದ `ಆಸ್ತಿ ತೆರಿಗೆ’ ಪಾವತಿದಾರರಿಗೆ ಗುಡ್ ನ್ಯೂಸ್: ಜೂನ್ 30ರೊಳಗೆ ಪಾವತಿಸಿದರೆ ಶೇ.5 ರಿಯಾಯಿತಿ!

1 Min Read

ರಾಜ್ಯದಲ್ಲಿ ಮತದಾನದ ಹಕ್ಕು ಇಲ್ಲದವರಿಗೆ `ಗ್ಯಾರಂಟಿ’ ಸೌಲಭ್ಯ ಸಿಗಲ್ಲ : ಸಿಎಂ ಡಿ.ಕೆ.ಶಿವಕುಮಾರ್ ಎಚ್ಚರಿಕೆ

1 Min Read
Recent News

ಗುರು ಋಣ ಮರೆತಿಲ್ಲ ಈ ಶಿಷ್ಯ: ನಿವೃತ್ತಿ ದಿನವೇ ನೆಚ್ಚಿನ ಶಿಕ್ಷಕನಿಗೆ `ಸ್ವಿಫ್ಟ್ ಕಾರು’ ಗಿಫ್ಟ್ ನೀಡಿದ ವಿದ್ಯಾರ್ಥಿ!

ರಾಜ್ಯದ ವಾಹನ ಸವಾರರಿಗೆ ಗುಡ್ ನ್ಯೂಸ್ : ಶೇ.50 ರ ರಿಯಾಯಿತಿಯೊಂದಿಗೆ ‘ಟ್ರಾಫಿಕ್ ದಂಡ’ ಪಾವತಿಗೆ ಮತ್ತೆ ಅವಧಿ ವಿಸ್ತರಣೆ.!

​’ಪರಮಾಣು ಮುಕ್ತ ಜಗತ್ತಿಗೆ ಬಲವಾದ ಗೋಡೆ’: ಇಂದು ಅಮೆರಿಕ-ಇರಾನ್ ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಸಹಿ; ಟ್ರಂಪ್ ಭರವಸೆ!

ಕಡುವೈರಿಗಳ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಆಕಾಶದಲ್ಲೇ ಹೊಡೆದುರುಳಿಸುವ ಬಲಿಷ್ಠ ತಂತ್ರಜ್ಞಾನ ಪ್ರದರ್ಶಿಸಿದ ಡಿಆರ್‌ಡಿಒ!

State News
KARNATAKA

ಗುರು ಋಣ ಮರೆತಿಲ್ಲ ಈ ಶಿಷ್ಯ: ನಿವೃತ್ತಿ ದಿನವೇ ನೆಚ್ಚಿನ ಶಿಕ್ಷಕನಿಗೆ `ಸ್ವಿಫ್ಟ್ ಕಾರು’ ಗಿಫ್ಟ್ ನೀಡಿದ ವಿದ್ಯಾರ್ಥಿ!

By kannadanewsnow57 KARNATAKA 1 Min Read

ಹಾವೇರಿ: ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ” ಎಂಬ ದಾಸವಾಣಿಯಂತೆ, ತನಗೆ ವಿದ್ಯೆ ಕಲಿಸಿ, ತಂದೆಯ ಸ್ಥಾನದಲ್ಲಿ ನಿಂತು ನೆರವಾದ…

ರಾಜ್ಯದ ವಾಹನ ಸವಾರರಿಗೆ ಗುಡ್ ನ್ಯೂಸ್ : ಶೇ.50 ರ ರಿಯಾಯಿತಿಯೊಂದಿಗೆ ‘ಟ್ರಾಫಿಕ್ ದಂಡ’ ಪಾವತಿಗೆ ಮತ್ತೆ ಅವಧಿ ವಿಸ್ತರಣೆ.!

ರಾಜ್ಯದ `ಆಸ್ತಿ ತೆರಿಗೆ’ ಪಾವತಿದಾರರಿಗೆ ಗುಡ್ ನ್ಯೂಸ್: ಜೂನ್ 30ರೊಳಗೆ ಪಾವತಿಸಿದರೆ ಶೇ.5 ರಿಯಾಯಿತಿ!

ರಾಜ್ಯದಲ್ಲಿ ಮತದಾನದ ಹಕ್ಕು ಇಲ್ಲದವರಿಗೆ `ಗ್ಯಾರಂಟಿ’ ಸೌಲಭ್ಯ ಸಿಗಲ್ಲ : ಸಿಎಂ ಡಿ.ಕೆ.ಶಿವಕುಮಾರ್ ಎಚ್ಚರಿಕೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.