ಶಿವಮೊಗ್ಗ: ಇತಿಹಾಸ ಪ್ರಸಿದ್ಧ ಸಾಗರದ ಶ್ರೀ ಮಾರಿಕಾಂಬಾ ದೇವಸ್ಥಾನಕ್ಕೆ ಮಂಗಳೂರು ವಿಭಾಗದ ಸಹಕಾರ ಸಂಘಗಳ ಉಪ ನಿಬಂಧಕರಾದ (DR) ರಮೇಶ್ ಹೆಚ್.ಎನ್ ರವರು ಇಂದು ಭೇಟಿ, ವಿಶೇಷ ಪೂಜೆಯನ್ನು ಸಲ್ಲಿಸಿದರು.
ಕುಟುಂಬ ಸಮೇತ ದೇವಿಯ ದರ್ಶನ:
ಉಪ ನಿಬಂಧಕರಾದ ರಮೇಶ್ ಹೆಚ್.ಎನ್ ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ಆಗಮಿಸಿ, ಶ್ರೀ ಮಾರಿಕಾಂಬಾ ದೇವಿಯ ದರ್ಶನ ಪಡೆದರು. ದೇವಸ್ಥಾನದ ಗರ್ಭಗುಡಿಯಲ್ಲಿ ದೇವಿಗೆ ವಿಶೇಷ ಅರ್ಚನೆ ಹಾಗೂ ಮಹಾಮಂಗಳಾರತಿ ನೆರವೇರಿಸಿದ ಅವರು, ದೇವಿಯ ಕೃಪೆಗೆ ಪಾತ್ರರಾದರು.
ದೇವಸ್ಥಾನದ ವತಿಯಿಂದ ಗೌರವ ಸನ್ಮಾನ:
ದೇವಿಯ ದರ್ಶನದ ಬಳಿಕ, ದೇವಸ್ಥಾನಕ್ಕೆ ಆಗಮಿಸಿದ ಅತಿಥಿಗಳನ್ನು ಗೌರವಿಸುವ ಸಂಪ್ರದಾಯದಂತೆ ಸಹಕಾರ ಸಂಘಗಳ ಉಪ ನಿಬಂಧಕರಾದ ರಮೇಶ್ ಹೆಚ್ ಎನ್ ರವರನ್ನು ಶ್ರೀ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಠಾನದ ವತಿಯಿಂದ ಶಾಲು ಹೊದಿಸಿ, ಸ್ಮರಣಿಕೆ ಹಾಗೂ ದೇವಿಯ ಪ್ರಸಾದ ನೀಡಿ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಠಾನದ ಕೋಶಾಧ್ಯಕ್ಷರಾದ ವಿ. ಶಂಕರ್, ಕಾರ್ಯದರ್ಶಿ ಡಿಶ್ ಗುರು, ಮತ್ತು ನಿರ್ದೇಶಕರಾದ ಧರ್ಮರಾಜ್. ಜಿ ಸೇರಿದಂತೆ ದೇವಸ್ಥಾನದ ಆಡಳಿತ ಮಂಡಳಿಯ ಪ್ರಮುಖರು ಉಪಸ್ಥಿತರಿದ್ದರು.
BREAKING : ಬೆಂಗಳೂರಲ್ಲಿ ಭೀಕರ ಅಪಘಾತ : ಮಗಳ ಕಣ್ಣೆದುರೇ ಶಾಲಾ ಬಸ್ ಹರಿದು ತಾಯಿ ದುರ್ಮರಣ!








