ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಅನ್ನಭಾಗ್ಯ’ (Annabhagya) ಯೋಜನೆಯಡಿ ಅಕ್ಕಿ ವಿತರಣೆಯಲ್ಲಿ ಉಂಟಾಗಿದ್ದ ವ್ಯತ್ಯಯದ ಕುರಿತು ಮಾಧ್ಯಮಗಳ ನಿರಂತರ ವರದಿಯ ಬೆನ್ನಲ್ಲೇ ಆಹಾರ ಇಲಾಖೆ ಎಚ್ಚೆತ್ತುಕೊಂಡಿದೆ. ತನ್ನ ಹಳೆಯ ಆದೇಶವನ್ನು ಬದಲಾಯಿಸಿರುವ ರಾಜ್ಯ ಸರ್ಕಾರ, ಇದೇ ಜೂನ್ ತಿಂಗಳಿನಿಂದ ರೇಷನ್ ಕಾರ್ಡ್‌ದಾರರಿಗೆ ಪೂರ್ಣ 10 ಕೆಜಿ ಅಕ್ಕಿ ವಿತರಿಸಲು ತುರ್ತು ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ಕಳೆದ ಕೆಲವು ಸಮಯದಿಂದ ಅನ್ನಭಾಗ್ಯ ಯೋಜನೆಯಡಿ ರಾಜ್ಯ ಸರ್ಕಾರ ನೀಡಬೇಕಿದ್ದ ಅಕ್ಕಿ ವಿತರಣೆ ಸಂಪೂರ್ಣ ಸ್ಥಗಿತಗೊಂಡಿತ್ತು. ಫಲಾನುಭವಿಗಳಿಗೆ ಕೇವಲ ಕೇಂದ್ರ ಸರ್ಕಾರದ ಯೋಜನೆಯಡಿ ಸಿಗುತ್ತಿದ್ದ ಅಕ್ಕಿ ಮಾತ್ರ ತಲುಪುತ್ತಿತ್ತು. ಇದರ ಬೆನ್ನಲ್ಲೇ ಆಹಾರ ಇಲಾಖೆಯು “ಕಳೆದ ಎರಡು ತಿಂಗಳಿನಿಂದ 6 ಕೆಜಿ ರಾಗಿ ಮತ್ತು 4 ಕೆಜಿ ಅಕ್ಕಿ ವಿತರಿಸಲಾಗುವುದು” ಎಂದು ಹೊಸ ಆದೇಶ ಹೊರಡಿಸಿತ್ತು.
ಬಡ ಜನರಿಗೆ ಅಕ್ಕಿಯ ಬದಲಾಗಿ ಕಡ್ಡಾಯವಾಗಿ ರಾಗಿ ನೀಡುತ್ತಿರುವುದರಿಂದ ಉಂಟಾಗುತ್ತಿದ್ದ ತೊಂದರೆ ಹಾಗೂ ಅನ್ನಭಾಗ್ಯ ಯೋಜನೆ ಹಳಿ ತಪ್ಪುತ್ತಿರುವ ಕುರಿತು ಮಾಧ್ಯಮಗಳಲ್ಲಿ ನಿರಂತರವಾಗಿ ಜನಾಭಿಪ್ರಾಯದ ವರದಿಗಳನ್ನು ಪ್ರಸಾರ ಮಾಡಿ ಸರ್ಕಾರದ ಗಮನ ಸೆಳೆಯಲಾಗಿತ್ತು. ಈ ವರದಿಗೆ ಸಾರ್ವಜನಿಕ ವಲಯದಿಂದಲೂ ಭಾರಿ ಬೆಂಬಲ ವ್ಯಕ್ತವಾಗಿತ್ತು.
ಆಹಾರ ಇಲಾಖೆ ಯೂ-ಟರ್ನ್: ರಾಗಿಗೆ ಬಿತ್ತು ಬ್ರೇಕ್
ಮಾಧ್ಯಮಗಳ ವರದಿ ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಮಣಿದಿರುವ ಆಹಾರ ಇಲಾಖೆ ಈಗ ಅಲರ್ಟ್ ಆಗಿದ್ದು, ರಾಗಿ ವಿತರಿಸುವ ತನ್ನ ನಿರ್ಧಾರಕ್ಕೆ ತಕ್ಷಣವೇ ಬ್ರೇಕ್ ಹಾಕಿದೆ. ಜೂನ್ ತಿಂಗಳಿನಿಂದಲೇ ಜಾರಿಗೆ ಬರುವಂತೆ ಪ್ರತಿಯೊಬ್ಬ ಫಲಾನುಭವಿಗೆ 10 ಕೆಜಿ ಪೂರ್ಣ ಅಕ್ಕಿಯನ್ನೇ ವಿತರಿಸಲು ಇಲಾಖೆ ಹಸಿರು ನಿಶಾನೆ ನೀಡಿದೆ.
ರಾಜ್ಯ ಸರ್ಕಾರದ ಈ ದಿಢೀರ್ ಆದೇಶದಿಂದಾಗಿ ರಾಜ್ಯದ ಲಕ್ಷಾಂತರ ಬಡ ಮತ್ತು ಮಧ್ಯಮ ವರ್ಗದ ರೇಷನ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಭಾರಿ ನಿರಾಳತೆ ಸಿಕ್ಕಂತಾಗಿದ್ದು, ಅಕ್ಕಿ ವಿತರಣೆ ಸುಗಮವಾಗಿ ನಡೆಯಲು ದಾರಿ ಸುಗಮವಾಗಿದೆ.
ವಚನಾನಂದ ಸ್ವಾಮೀಜಿ ವಿರುದ್ಧ ಪೋಕ್ಸೋ ಪ್ರಕರಣ: ಕೋರ್ಟ್‌ಗೆ ದೋಷಾರೋಪಣೆ ಪಟ್ಟಿ ಸಲ್ಲಿಕೆ
ನಾಳೆಯಿಂದ ಶಾಲಾ ವಿದ್ಯಾರ್ಥಿಗಳ ‘ಫ್ರೀ ಬಸ್ ಪಾಸ್’ಗೆ ಅರ್ಜಿ ಸಲ್ಲಿಕೆ ಆರಂಭ: ಹಣ ಕಟ್ಟಿದ್ದವರಿಗೆ ವಾಪಾಸ್








