Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS: ಸರ್ಕಾರಿ ನೌಕರನ ವೈಯಕ್ತಿಕ ಆಸ್ತಿ ವಿವರ ‘RTI’ ಅಡಿ ನೀಡಲಾಗದು: ಹೈಕೋರ್ಟ್ ಮಹತ್ವದ ತೀರ್ಪು

ನನ್ನ ಮತ್ತು ಸಿದ್ದರಾಮಯ್ಯ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ: ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟನೆ

BREAKING : RTE ಅಡಿ SC, ST ವಿದ್ಯಾರ್ಥಿಗಳಿಗೆ 10ನೇ ತರಗತಿ ಪ್ರವೇಶಾತಿ: ರಾಜ್ಯ ಸರ್ಕಾರದ ಸುತ್ತೋಲೆಗೆ ಹೈಕೋರ್ಟ್‌ ತಡೆ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನನ್ನ ಮತ್ತು ಸಿದ್ದರಾಮಯ್ಯ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ: ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟನೆ
KARNATAKA

ನನ್ನ ಮತ್ತು ಸಿದ್ದರಾಮಯ್ಯ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ: ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟನೆ

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ತಮ್ಮ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ. ತಮ್ಮಿಬ್ಬರ ನಡುವಿನ ಸಂಬಂಧದ ಬಗ್ಗೆ ನಡೆಯುತ್ತಿರುವ ಚರ್ಚೆಗಳು ಸಂಪೂರ್ಣ ಅನವಶ್ಯಕವಾಗಿದ್ದು, ನಮ್ಮ ನಡುವಿನ ಬಾಂಧವ್ಯ ಎಂದಿಗೂ ಹಾಳಾಗಿಲ್ಲ ಎಂದು ಅವರು ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, “ಮೊದಲಿನಿಂದಲೂ ನಾನು ಇದನ್ನೇ ಹೇಳುತ್ತಾ ಬಂದಿದ್ದೇನೆ, ನಮ್ಮ ನಡುವೆ ಯಾವುದೇ ಗೊಂದಲಗಳಿಲ್ಲ. ಕೆಲವು ಐಟಿ ಸೆಲ್‌ನವರು ಈ ವಿಷಯಕ್ಕೆ ಹೆಚ್ಚಿನ ಪ್ರಚಾರ ನೀಡಿದ್ದರಿಂದ ಅನವಶ್ಯಕವಾಗಿ ಈ ಚರ್ಚೆ ಮುನ್ನೆಲೆಗೆ ಬಂದಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದೇ ವೇಳೆ, ಪಕ್ಷದಾಚೆಗೂ ಅಹಿಂದ ಸಂಘಟನೆಯನ್ನು ಬಲಪಡಿಸುವ ಕೆಲಸವನ್ನು ತಾವು ಮುಂದುವರಿಸುವುದಾಗಿ ಅವರು ತಿಳಿಸಿದರು.

ಸಿಎಂ ಹುದ್ದೆ ಹಾಗೂ ಪಕ್ಷದ ಕೆಲಸದ ಕುರಿತು: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೂ ಮತ್ತು ಸಿಎಂ ಹುದ್ದೆಗೂ ಯಾವುದೇ ನೇರ ಸಂಬಂಧವಿಲ್ಲ ಎಂದು ಅಭಿಪ್ರಾಯಪಟ್ಟ ಸತೀಶ್ ಜಾರಕಿಹೊಳಿ, “ಮುಖ್ಯಮಂತ್ರಿಯಾಗಲು ಕೇವಲ ಅಧ್ಯಕ್ಷ ಸ್ಥಾನವೇ ಬೇಕೆಂದಿಲ್ಲ. ಪಕ್ಷಕ್ಕಾಗಿ ದುಡಿದರೆ ಅದಕ್ಕೆ ತಕ್ಕ ಕೂಲಿ ಸಿಕ್ಕಿಯೇ ಸಿಗುತ್ತದೆ. ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಾವೆಲ್ಲರೂ ಕೆಲಸ ಮಾಡಿದ್ದೇವೆ, ಹಾಗಾಗಿ ಅವರಿಗೆ ಅಧಿಕಾರ ಸಿಕ್ಕಿದೆ. ಯಾರು ಪಕ್ಷಕ್ಕೆ ಶ್ರಮಿಸುತ್ತಾರೋ ಅವರಿಗೆ ಹಕ್ಕು ಸಿಗುತ್ತದೆ. ಸದ್ಯ ನನಗೂ ಮಂತ್ರಿ ಸ್ಥಾನದ ರೂಪದಲ್ಲಿ ಕೂಲಿ ಸಿಕ್ಕಿದ್ದು, ನನಗೆ ಡಬಲ್ ಸಂತೃಪ್ತಿಯಿದೆ. ಕೆಲಸ ಮಾಡುವವರಿಗೆ ಕೇವಲ ಹುದ್ದೆ ಮುಖ್ಯವಲ್ಲ” ಎಂದರು. ಅಲ್ಲದೆ, 2028ರ ಮುಂದಿನ ಚುನಾವಣೆಯ ಸಿಎಂ ಸ್ಥಾನದ ಚರ್ಚೆಗಳ ಬಗ್ಗೆ ಪ್ರತಿಕ್ರಿಯಿಸಿ, “ಇನ್ನೂ ಮಗುನೇ ಹುಟ್ಟಿಲ್ಲ, ಆಗಲೇ ಚರ್ಚೆ ಯಾಕೆ? ನಮಗೆ ಇನ್ನೂ ವಯಸ್ಸಿದೆ, ಕಾಯೋಣ” ಎಂದು ಮಾರ್ಮಿಕವಾಗಿ ಉತ್ತರಿಸಿದರು.

ಕ್ರೀಡಾ ಖಾತೆಯ ಆಸೆ ಇತ್ತು: ಸಚಿವ ಸಂಪುಟದಲ್ಲಿ ತಮಗೆ ಕ್ರೀಡಾ ಖಾತೆಯ ಮೇಲಿದ್ದ ಆಸಕ್ತಿಯನ್ನು ಬಿಚ್ಚಿಟ್ಟ ಸಚಿವರು, “ನಾನು ಹೆಚ್ಚುವರಿಯಾಗಿ ಕ್ರೀಡಾ ಖಾತೆಯನ್ನು ಕೇಳಿದ್ದೆ. ನನಗೆ ಕ್ರೀಡೆಯ ಬಗ್ಗೆ ವೈಯಕ್ತಿಕವಾಗಿ ತುಂಬಾ ಒಲವಿದೆ. ಪ್ರತಿ ವರ್ಷ ಸ್ವಂತವಾಗಿ 50 ಲಕ್ಷ ರೂ. ಖರ್ಚು ಮಾಡಿ ಕ್ರೀಡಾಕೂಟಗಳನ್ನು ಆಯೋಜಿಸುತ್ತೇನೆ. ಆ ಖಾತೆ ಸಿಕ್ಕಿದ್ದರೆ ಕ್ರೀಡಾ ಕ್ಷೇತ್ರದಲ್ಲಿ ಕ್ರಾಂತಿ ಮಾಡಿ, ರಾಜ್ಯವನ್ನು ನಂಬರ್ ಒನ್ ಸ್ಥಾನಕ್ಕೆ ತರುತ್ತಿದ್ದೆವು. ಆದರೆ ಈಗ ಪರಮೇಶ್ವರ್ ಅವರು ಆ ಖಾತೆಯನ್ನು ಕೇಳಿ ಪಡೆದಿದ್ದಾರೆ, ಅವರಿಗೂ ಕ್ರೀಡೆ ಎಂದರೆ ಇಷ್ಟ” ಎಂದು ಹೇಳಿದರು.

ಇದೇ ವೇಳೆ ಇಲಾಖೆಗಳ ವಿಭಜನೆ ಕುರಿತು ಸಚಿವ ಕೃಷ್ಣ ಬೈರೇಗೌಡ ಅವರಲ್ಲಿರುವ ಅಸಮಾಧಾನದ ಬಗ್ಗೆ ಮಾತನಾಡಿದ ಅವರು, ಎಲ್ಲ ಇಲಾಖೆಗಳು ಒಟ್ಟಿಗಿದ್ದರೆ ಕೆಲಸ ಮಾಡಲು ಅನುಕೂಲ ಎಂಬುದು ಅವರ ಬೇಡಿಕೆಯಾಗಿದೆ. ಇದು ಪಕ್ಷ ಮತ್ತು ಸರ್ಕಾರಕ್ಕೆ ಸಂಬಂಧಿಸಿದ ಜವಾಬ್ದಾರಿಯಾಗಿದ್ದು, ಅವರೇ ಇದನ್ನು ಬಗೆಹರಿಸಲಿದ್ದಾರೆ ಎಂದು ಸತೀಶ್ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.

Share. Facebook Twitter LinkedIn WhatsApp Email

Related Posts

BIG NEWS: ಸರ್ಕಾರಿ ನೌಕರನ ವೈಯಕ್ತಿಕ ಆಸ್ತಿ ವಿವರ ‘RTI’ ಅಡಿ ನೀಡಲಾಗದು: ಹೈಕೋರ್ಟ್ ಮಹತ್ವದ ತೀರ್ಪು

2 Mins Read

BREAKING : RTE ಅಡಿ SC, ST ವಿದ್ಯಾರ್ಥಿಗಳಿಗೆ 10ನೇ ತರಗತಿ ಪ್ರವೇಶಾತಿ: ರಾಜ್ಯ ಸರ್ಕಾರದ ಸುತ್ತೋಲೆಗೆ ಹೈಕೋರ್ಟ್‌ ತಡೆ!

2 Mins Read

BREAKING : ಕೊಪ್ಪಳದಲ್ಲಿ ತಂದೆ, ಅಕ್ಕನ ಕೊಲೆಗೆ ಬಿಗ್ ಟ್ವಿಸ್ಟ್ : ಪೋಲೀಸರ ತನಿಖೆಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗ!

2 Mins Read
Recent News

BIG NEWS: ಸರ್ಕಾರಿ ನೌಕರನ ವೈಯಕ್ತಿಕ ಆಸ್ತಿ ವಿವರ ‘RTI’ ಅಡಿ ನೀಡಲಾಗದು: ಹೈಕೋರ್ಟ್ ಮಹತ್ವದ ತೀರ್ಪು

ನನ್ನ ಮತ್ತು ಸಿದ್ದರಾಮಯ್ಯ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ: ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟನೆ

BREAKING : RTE ಅಡಿ SC, ST ವಿದ್ಯಾರ್ಥಿಗಳಿಗೆ 10ನೇ ತರಗತಿ ಪ್ರವೇಶಾತಿ: ರಾಜ್ಯ ಸರ್ಕಾರದ ಸುತ್ತೋಲೆಗೆ ಹೈಕೋರ್ಟ್‌ ತಡೆ!

BREAKING : ಕೊಪ್ಪಳದಲ್ಲಿ ತಂದೆ, ಅಕ್ಕನ ಕೊಲೆಗೆ ಬಿಗ್ ಟ್ವಿಸ್ಟ್ : ಪೋಲೀಸರ ತನಿಖೆಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗ!

State News
KARNATAKA

BIG NEWS: ಸರ್ಕಾರಿ ನೌಕರನ ವೈಯಕ್ತಿಕ ಆಸ್ತಿ ವಿವರ ‘RTI’ ಅಡಿ ನೀಡಲಾಗದು: ಹೈಕೋರ್ಟ್ ಮಹತ್ವದ ತೀರ್ಪು

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಬೆಂಗಳೂರು: “ಒಬ್ಬ ವ್ಯಕ್ತಿಯ ಮೇಲಿರುವ ಆರೋಪಗಳು ಎಷ್ಟೇ ಗಂಭೀರವಾಗಿದ್ದರೂ, ಆತನ ವೈಯಕ್ತಿಕ ಮಾಹಿತಿಯನ್ನು ಸಾರ್ವಜನಿಕ ಮಾಹಿತಿಯನ್ನಾಗಿ ಪರಿವರ್ತಿಸಲು ಸಾಧ್ಯವಿಲ್ಲ. ಕೇವಲ…

ನನ್ನ ಮತ್ತು ಸಿದ್ದರಾಮಯ್ಯ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ: ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟನೆ

BREAKING : RTE ಅಡಿ SC, ST ವಿದ್ಯಾರ್ಥಿಗಳಿಗೆ 10ನೇ ತರಗತಿ ಪ್ರವೇಶಾತಿ: ರಾಜ್ಯ ಸರ್ಕಾರದ ಸುತ್ತೋಲೆಗೆ ಹೈಕೋರ್ಟ್‌ ತಡೆ!

BREAKING : ಕೊಪ್ಪಳದಲ್ಲಿ ತಂದೆ, ಅಕ್ಕನ ಕೊಲೆಗೆ ಬಿಗ್ ಟ್ವಿಸ್ಟ್ : ಪೋಲೀಸರ ತನಿಖೆಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.