ಬೀದರ್ : ಬೀದರ್ ನಲ್ಲಿ ಘೋರವಾದ ದುರಂತ ಒಂದು ಸಂಭವಿಸಿದ್ದು ಶಾಲಾ ಕಟ್ಟಡದಿಂದ ಬಿದ್ದು ಬಾಲಕ ಸಾವನ್ನಪ್ಪಿರುವ ಘಟನೆ ಜನಸೇವಾ ಖಾಸಗಿ ಶಾಲೆಯಲ್ಲಿ ಈ ಒಂದು ದುರಂತ ನಡೆದಿದೆ.
ಬೀದರ್ ನಗರದ ಶಾಂತಿನಗರದ ನಿವಾಸಿ 15 ವರ್ಷದ ಸಮೀರ್ ಮೃತ ಬಾಲಕ ತಿಳಿದು ಬಂದಿದೆ. ಎಲ್ಐಸಿ ಕಾಲೋನಿಯಲ್ಲಿರುವ ಜನ ಸೇವಾ ಖಾಸಗಿ ಶಾಲೆಯಲ್ಲಿ ಈ ಒಂದು ದುರಂತ ನಡೆದಿದೆ. ಶಾಲಾ ಸಿಬ್ಬಂದಿ ವಿರುದ್ಧ ಕಿರುಕುಳ ಆರೋಪ ಕೇಳಿ ಬಂದಿದ್ದು, ಈ ಹಿನ್ನೆಲೆಯಲ್ಲಿ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತ ಬಾಲಕ ಸಮೀರ್ ಪೋಷಕರು ಆರೋಪಿಸಿದ್ದಾರೆ. ಬಾಲಕನ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.








