Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS: ಸಾಗರ ನಗರಸಭೆಯ ‘ಮೇಸ್ತ್ರಿ ನಾಗರಾಜ್’ ನೌಕರರಿಗೆ ಲೈಂಗಿಕ ಕಿರುಕುಳ: ಸಂತ್ರಸ್ತೆ ‘ಮಹಿಳಾ ಆಯೋಗ’ಕ್ಕೆ ದೂರು

BREAKING: ವಿಶ್ವದ ಮೊದಲ ‘ಟ್ರಿಲಿಯನೇರ್’ ಆದ ಎಲಾನ್ ಮಸ್ಕ್ | Elon Musk

ಸೆಲೂನ್, ಸ್ಪಾ, ಮಸಾಜ್ ಕೇಂದ್ರಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕಾನೂನು: ಕರ್ನಾಟಕ ಕಾನೂನು ಆಯೋಗದಿಂದ ಸರ್ಕಾರಕ್ಕೆ ಮಹತ್ವದ ಶಿಫಾರಸು

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಇಂದಿನಿಂದ 3,991 ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭ : ಅಭ್ಯರ್ಥಿಗಳಿಗೆ ಈ ದಾಖಲೆಗಳು ಕಡ್ಡಾಯ.!
KARNATAKA

BIG NEWS : ಇಂದಿನಿಂದ 3,991 ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭ : ಅಭ್ಯರ್ಥಿಗಳಿಗೆ ಈ ದಾಖಲೆಗಳು ಕಡ್ಡಾಯ.!

By kannadanewsnow57

ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ಹುಡುಕುತ್ತಿರುವ ಯುವಕ-ಯುವತಿಯರಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಭರ್ಜರಿ ಸಿಹಿ ಸುದ್ದಿ ನೀಡಿದೆ. ಒಟ್ಟು 3,991 ಸಿವಿಲ್ ಪೊಲೀಸ್ ಕಾನ್ಸ್ಟೆಬಲ್ (Civil Police Constable) ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದ್ದು, ಜೂನ್ 10ರಿಂದ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಜುಲೈ 3 ಕೊನೆಯ ದಿನವಾಗಿದೆ.

ಒಟ್ಟು ಹುದ್ದೆಗಳ ಪೈಕಿ ಕಲ್ಯಾಣ ಕರ್ನಾಟಕ (HK) ಕೋಟಾದಡಿ 596 ಹುದ್ದೆಗಳು ಹಾಗೂ ಉಳಿಕೆ ಮೂಲ ವೃಂದದ (Non-HK) ಕೋಟಾದಡಿ 3,395 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಅರ್ಜಿ ಸಲ್ಲಿಸಲು ಸಿದ್ಧವಾಗಿಟ್ಟುಕೊಳ್ಳಬೇಕಾದ ಪ್ರಮುಖ ದಾಖಲೆಗಳು:

ಅರ್ಜಿ ಸಲ್ಲಿಕೆ ಆರಂಭವಾಗುವ ಮುನ್ನವೇ ಅಭ್ಯರ್ಥಿಗಳು ಕೆಳಗಿನ ಅಗತ್ಯ ಪ್ರಮಾಣಪತ್ರಗಳನ್ನು ಕಡ್ಡಾಯವಾಗಿ ಸಿದ್ಧಪಡಿಸಿಟ್ಟುಕೊಳ್ಳಬೇಕು:

ಆಧಾರ್ ಕಾರ್ಡ್

ಶೈಕ್ಷಣಿಕ ಅಂಕಪಟ್ಟಿಗಳು: ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಪಡೆದ, ಹುದ್ದೆಗೆ ನಿಗದಿಪಡಿಸಲಾದ ವಿದ್ಯಾರ್ಹತೆಯ ಎಲ್ಲಾ ವಿಷಯಗಳ/ಸೆಮಿಸ್ಟರ್ಗಳ ಅಂಕಪಟ್ಟಿಗಳು ಹಾಗೂ ಘಟಿಕೋತ್ಸವ ಪ್ರಮಾಣಪತ್ರ ಅಥವಾ ಪಿಡಿಸಿ (PDC).

ವಯಸ್ಸಿನ ದಾಖಲೆ: ಜನ್ಮ ದಿನಾಂಕವನ್ನು ನಮೂದಿಸಿರುವ ಎಸ್ಎಸ್ಎಲ್ಸಿ (SSLC) ಅಥವಾ ತತ್ಸಮಾನ ಪರೀಕ್ಷೆಯ ಪ್ರಮಾಣಪತ್ರ / ಶಾಲೆಯ ವರ್ಗಾವಣೆ ಪ್ರಮಾಣಪತ್ರ (TC) / ಜನನ ದಿನಾಂಕವನ್ನು ತೋರಿಸುವ ಸಂಚಿತ ದಾಖಲೆಯ ಉದ್ಧೃತ ಭಾಗ.

ಮಾಜಿ ಸೈನಿಕ ಮೀಸಲಾತಿ (ಅನ್ವಯಿಸುವವರಿಗೆ): ಸೈನಿಕ ಸೇವೆಯಿಂದ ಬಿಡುಗಡೆಯಾದ ಪ್ರಮಾಣಪತ್ರ ಮತ್ತು ಪಿಂಚಣಿ/ಗ್ರಾಚ್ಯುಟಿ ಪಡೆಯುತ್ತಿರುವ ಪ್ರಮಾಣಪತ್ರ. ಒಂದು ವೇಳೆ ಮಾಜಿ ಸೈನಿಕರ ಅವಲಂಬಿತರಾಗಿದ್ದಲ್ಲಿ, ಸೇವೆಯಲ್ಲಿದ್ದಾಗ ಮೃತಪಟ್ಟ ಅಥವಾ ಶಾಶ್ವತವಾಗಿ ಅಂಗವಿಕಲರಾದ (Permanently Disabled) ಪ್ರಮಾಣಪತ್ರ.

ಜಾತಿ ಮತ್ತು ಒಳಮೀಸಲಾತಿ ಪ್ರಮಾಣಪತ್ರ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, 2ಎ, 2ಬಿ, 3ಎ ಮತ್ತು 3ಬಿ ಮೀಸಲಾತಿ ಪ್ರಮಾಣಪತ್ರಗಳನ್ನು ಪ್ರಸ್ತುತ ಚಾಲ್ತಿಯಲ್ಲಿರುವ ನಮೂನೆಗಳಲ್ಲಿ ಪಡೆದಿರಬೇಕು.

ವಿಶೇಷ ಸೂಚನೆ: ಪರಿಶಿಷ್ಟ ಜಾತಿಯ (SC) ಅಭ್ಯರ್ಥಿಗಳು ಒಳಮೀಸಲಾತಿ ಪ್ರಕಾರ ತಮಗೆ ಅನ್ವಯವಾಗುವ ಎಸ್ಸಿ-ಎ, ಎಸ್ಸಿ-ಬಿ ಮತ್ತು ಎಸ್ಸಿ-ಸಿ ಜಾತಿ ಪ್ರಮಾಣಪತ್ರಗಳ RD ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕಾಗುತ್ತದೆ.

ಗ್ರಾಮೀಣ ಮೀಸಲಾತಿ ಪ್ರಮಾಣಪತ್ರ: ಗ್ರಾಮೀಣ ಕೋಟಾ ಕ್ಲೇಮ್ ಮಾಡುವ ಸಾಮಾನ್ಯ ವರ್ಗದ (GM) ಅಭ್ಯರ್ಥಿಗಳು ನಮೂನೆ-1 ರಲ್ಲಿ ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ನಮೂನೆ-2 ರಲ್ಲಿ ಪ್ರಮಾಣಪತ್ರ ಹೊಂದಿರಬೇಕು.

ಗಮನಿಸಿ: ಸಾಮಾನ್ಯ ವರ್ಗದ (GM) ಅಭ್ಯರ್ಥಿಗಳು ಗ್ರಾಮೀಣ ಕೋಟಾ ಕ್ಲೇಮ್ ಮಾಡಬೇಕಾದರೆ ಕಡ್ಡಾಯವಾಗಿ ಆದಾಯ ಪ್ರಮಾಣಪತ್ರ (Non-Creamy Layer) ಹೊಂದಿರಬೇಕು.

ಕನ್ನಡ ಮಾಧ್ಯಮ ಮತ್ತು ವಿಶೇಷ ಚೇತನ ಮೀಸಲಾತಿ: ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಪ್ರಮಾಣಪತ್ರ ಹಾಗೂ ವಿಶೇಷ ಚೇತನ (PH) ಮೀಸಲಾತಿ ಕೋರುವವರು ಅದಕ್ಕೆ ಸಂಬಂಧಿಸಿದ ಪ್ರಮಾಣಪತ್ರಗಳನ್ನು ಹೊಂದಿರಬೇಕು.

ಅನಕ್ಷೇಪಣಾ ಪ್ರಮಾಣಪತ್ರ (NOC): ಈಗಾಗಲೇ ಸೇವೆಯಲ್ಲಿರುವ ಅಭ್ಯರ್ಥಿಗಳು ಆಯ್ಕೆಯಾದಲ್ಲಿ, ನೇಮಕಾತಿ ಪ್ರಾಧಿಕಾರಕ್ಕೆ ಸಲ್ಲಿಸಲು ಅನಕ್ಷೇಪಣಾ ಪ್ರಮಾಣಪತ್ರವನ್ನು ಪಡೆದಿಟ್ಟುಕೊಳ್ಳಬೇಕು.

ಫೋಟೋ ಮತ್ತು ಸಹಿಯ ಸೈಜ್:
ಅರ್ಜಿಯೊಂದಿಗೆ ಅಪ್ಲೋಡ್ ಮಾಡಬೇಕಾದ ಅಭ್ಯರ್ಥಿಯ ಇತ್ತೀಚಿನ ಭಾವಚಿತ್ರ (Photo) ಮತ್ತು ಸಹಿ (Signature) ಕಡ್ಡಾಯವಾಗಿ 50kb ಒಳಗಿರಬೇಕು.

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆ ಆರಂಭ: 10 ಜೂನ್

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 03 ಜೂನ್ ಹಿಡಿದು ಜುಲೈ 03ರವರೆಗೆ.

ಕೊನೆಯ ಕ್ಷಣದ ಗಡಿಬಿಡಿಯನ್ನು ತಪ್ಪಿಸಲು ಅಭ್ಯರ್ಥಿಗಳು ತಕ್ಷಣವೇ ತಮ್ಮ ಎಲ್ಲಾ ಆರ್.ಡಿ ಸಂಖ್ಯೆ ಹಾಗೂ ಇತರೆ ದಾಖಲೆಗಳನ್ನು ಪರಿಶೀಲಿಸಿ ಸಿದ್ಧವಾಗಿಟ್ಟುಕೊಳ್ಳಲು ಕೋರಲಾಗಿದೆ.

#PoliceRecruitment: ಒಟ್ಟು 3,991 Police Constable (Civil) ಹುದ್ದೆಗಳ ಭರ್ತಿಗೆ #KEA ಅಧಿಸೂಚನೆ ಹೊರಡಿಸಿದ್ದು ಅರ್ಜಿ ಸಲ್ಲಿಸುವ ಪ್ರಕ್ರಿಯೆ ಜೂನ್ 10ರಿಂದ ಆರಂಭವಾಗಲಿದೆ.

ಆ ವೇಳೆಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅಗತ್ಯ ದಾಖಲೆಗಳನ್ನು ಸಿದ್ಧ ಮಾಡಿಟ್ಟುಕೊಳ್ಳಬೇಕು. ಪರಿಶಿಷ್ಟ ಜಾತಿಯ ಅಭ್ಯರ್ಥಿಗಳು ಒಳಮೀಸಲಾತಿ ಪ್ರಕಾರ ತಮಗೆ… pic.twitter.com/WJocGXlgW4

— ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA (@KEA_karnataka) June 8, 2026

BIG NEWS: Application submission for 3991 police constable posts begins today: These documents are mandatory for candidates!
Share. Facebook Twitter LinkedIn WhatsApp Email

Related Posts

BIG NEWS: ಸಾಗರ ನಗರಸಭೆಯ ‘ಮೇಸ್ತ್ರಿ ನಾಗರಾಜ್’ ನೌಕರರಿಗೆ ಲೈಂಗಿಕ ಕಿರುಕುಳ: ಸಂತ್ರಸ್ತೆ ‘ಮಹಿಳಾ ಆಯೋಗ’ಕ್ಕೆ ದೂರು

2 Mins Read

ಸೆಲೂನ್, ಸ್ಪಾ, ಮಸಾಜ್ ಕೇಂದ್ರಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕಾನೂನು: ಕರ್ನಾಟಕ ಕಾನೂನು ಆಯೋಗದಿಂದ ಸರ್ಕಾರಕ್ಕೆ ಮಹತ್ವದ ಶಿಫಾರಸು

3 Mins Read

ಪಾರಂಪರಿಕ ಕಟ್ಟಡ ‘ಕುಮಾರಕೃಪ’ ಉಳಿಸಿ: ಮಾಜಿ ಸಿಎಂ ಸಿದ್ದರಾಮಯ್ಯಗೆ ಬಿಜೆಪಿ ವಕ್ತಾರ ಪ್ರಕಾಶ್ ಬಹಿರಂಗ ಪತ್ರ

2 Mins Read
Recent News

BIG NEWS: ಸಾಗರ ನಗರಸಭೆಯ ‘ಮೇಸ್ತ್ರಿ ನಾಗರಾಜ್’ ನೌಕರರಿಗೆ ಲೈಂಗಿಕ ಕಿರುಕುಳ: ಸಂತ್ರಸ್ತೆ ‘ಮಹಿಳಾ ಆಯೋಗ’ಕ್ಕೆ ದೂರು

BREAKING: ವಿಶ್ವದ ಮೊದಲ ‘ಟ್ರಿಲಿಯನೇರ್’ ಆದ ಎಲಾನ್ ಮಸ್ಕ್ | Elon Musk

ಸೆಲೂನ್, ಸ್ಪಾ, ಮಸಾಜ್ ಕೇಂದ್ರಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕಾನೂನು: ಕರ್ನಾಟಕ ಕಾನೂನು ಆಯೋಗದಿಂದ ಸರ್ಕಾರಕ್ಕೆ ಮಹತ್ವದ ಶಿಫಾರಸು

ಪಾರಂಪರಿಕ ಕಟ್ಟಡ ‘ಕುಮಾರಕೃಪ’ ಉಳಿಸಿ: ಮಾಜಿ ಸಿಎಂ ಸಿದ್ದರಾಮಯ್ಯಗೆ ಬಿಜೆಪಿ ವಕ್ತಾರ ಪ್ರಕಾಶ್ ಬಹಿರಂಗ ಪತ್ರ

State News
KARNATAKA

BIG NEWS: ಸಾಗರ ನಗರಸಭೆಯ ‘ಮೇಸ್ತ್ರಿ ನಾಗರಾಜ್’ ನೌಕರರಿಗೆ ಲೈಂಗಿಕ ಕಿರುಕುಳ: ಸಂತ್ರಸ್ತೆ ‘ಮಹಿಳಾ ಆಯೋಗ’ಕ್ಕೆ ದೂರು

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಶಿವಮೊಗ್ಗ: ಸಾಗರ ನಗರಸಭೆಯಲ್ಲಿ ಸರ್ಕಾರಿ ನೌಕರರಾಗಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯೊಬ್ಬರಿಗೆ ಅಲ್ಲಿನ ಮೇಸ್ತ್ರಿಯೇ ಮಾನಸಿಕ ಹಾಗೂ ಲೈಂಗಿಕ ಕಿರುಕುಳ ನೀಡುತ್ತಿರುವ ಗಂಭೀರ…

ಸೆಲೂನ್, ಸ್ಪಾ, ಮಸಾಜ್ ಕೇಂದ್ರಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕಾನೂನು: ಕರ್ನಾಟಕ ಕಾನೂನು ಆಯೋಗದಿಂದ ಸರ್ಕಾರಕ್ಕೆ ಮಹತ್ವದ ಶಿಫಾರಸು

ಪಾರಂಪರಿಕ ಕಟ್ಟಡ ‘ಕುಮಾರಕೃಪ’ ಉಳಿಸಿ: ಮಾಜಿ ಸಿಎಂ ಸಿದ್ದರಾಮಯ್ಯಗೆ ಬಿಜೆಪಿ ವಕ್ತಾರ ಪ್ರಕಾಶ್ ಬಹಿರಂಗ ಪತ್ರ

ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾದ ಸಿಎಂ ಡಿ.ಕೆ ಶಿವಕುಮಾರ್; ಕರ್ನಾಟಕದ ಪೊಲೀಸ್ ಸಾಮರ್ಥ್ಯ ಸುಧಾರಣೆ ನೆರವಿಗೆ ಮನವಿ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.