ಮಂಗಳೂರು : ಮಂಗಳೂರಿನಲ್ಲಿ ಮಾದಕ ವಸ್ತು ಸಾಗಿಸುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಪೊಲೀಸರು ಈ ಒಂದು ಕಾರ್ಯಾಚರಣೆ ನಡೆಸಿದ್ದು, ಬಂಧಿತರಿಂದ 7 ಲಕ್ಷ 64 ಸಾವಿರ ರೂ. MDMA ಜಪ್ತಿ ಮಾಡಿದ್ದಾರೆ.
ಜುಬಿರ್, ಮೊಹಮ್ಮದ್ ಸವದ, ಹಾಗೂ ರಶೀದ್ ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ ಪೊಲೀಸರು ಮೇಲ್ಕಾರ್ ಫ್ಲೈವರ್ ಬಳಿ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಕಾರಿನಲ್ಲಿ ಮೂವರು ಆರೋಪಿಗಳು ಮಾದಕ ವಸ್ತು ಸಾಗಿಸುತ್ತಿದ್ದರು. ಒಂದು ಕಾರು 3 ಮೊಬೈಲ್ ಹಾಗೂ MDMA ವಶಕ್ಕೆ ಪಡೆದಿದ್ದು, ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








