ಶಿವಮೊಗ್ಗ: ಜಿಲ್ಲೆಯ ಸಾಗರದ 110 ಕೆ.ವಿ ವಿದ್ಯುತ್ ಕೇಂದ್ರದ ಹತ್ತಿರ ಎಫ್-8 ಮಾರಿಕಾಂಬ ಮಾರ್ಗದ ವಾಹಕ ಬದಲಾವಣೆ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ನಾಳೆ ದಿನಾಂಕ: 06.06.2026ರ ಶನಿವಾರದಂದು ಸಾಗರ ಪಟ್ಟಣ ಹಾಗೂ ಗ್ರಾಮೀಣ ವ್ಯಾಪ್ತಿಯ ಹಲವು ಪ್ರದೇಶಗಳಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ ನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿದ್ಯುತ್ ವ್ಯತ್ಯಯವಾಗುವ ಸಮಯ:
-
ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 5:00 ಗಂಟೆಯವರೆಗೆ
ವಿದ್ಯುತ್ ಕೈಕೊಡುವ ಪ್ರದೇಶಗಳ ವಿವರ:
ಸಾಗರ ಪಟ್ಟಣ ವ್ಯಾಪ್ತಿ (ಎಫ್-7 ಮಾರ್ಗ): ಮಂಗಳಳಬೀಸು, ಚಂದ್ರಮಾವಿನಕೊಪ್ಪ, ಇಂಡಸ್ಟ್ರಿಯಲ್ ಏರಿಯಾ, ಕೆ.ಎಚ್.ಬಿ ಇಂಡಸ್ಟ್ರಿಯಲ್ ವಸಹಾತು, ಅಗ್ರಹಾರ, ಹೆರಿಗೆ ಆಸ್ಪತ್ರೆ ಸುತ್ತಮುತ್ತ, ಬೆಳ್ಳಲಮಕ್ಕಿ, ಬಸವನಹೊಳೆ, ಜಂಬುಗಾರು, ತ್ಯಾಗರ್ತಿ ಕ್ರಾಸ್, ಎಫ್-8 ಮಾರಿಕಾಂಬ, ಶ್ರೀ ನಗರ, ರಾಮಪುರ ಬಡಾವಣೆ, ಸೊರಬ ರಸ್ತೆ, ವರದಾ ರಸ್ತೆ, ಗಣಪತಿ ದೇವಸ್ಥಾನ ರಸ್ತೆ, ತಿಲಕ್ ರಸ್ತೆ, ಮಾರ್ಕೆಟ್ ರಸ್ತೆ, ಶ್ರೀ ಟಾಕೀಸ್ ರಸ್ತೆ, ಎಫ್-15 ಆರ್.ಎಂ.ಸಿ, ಅನಾಲೆಕೊಪ್ಪ, ಕೆಳದಿ ರಸ್ತೆ, ಸೊರಬ ರಸ್ತೆ, ಶ್ರೀಧರ್ ನಗರ, ಜೆ.ಪಿ ನಗರ, ಸುಭಾಷ್ ನಗರ.
ಗ್ರಾಮೀಣ ವ್ಯಾಪ್ತಿ (ವಿವಿಧ ಫೀಡರ್‌ಗಳು ಹಾಗೂ ಗ್ರಾಮ ಪಂಚಾಯಿತಿಗಳು):
-
ಫೀಡರ್‌ಗಳು: ಎಫ್-2 ಮಾಲ್ವೆ, ಎಫ್-6 ಬೊಮ್ಮತ್ತಿ, ಎಫ್-9 ಮಾಸೂರು, ಎಫ್-14 ಹಿರೇನೆಲ್ಲೂರು, ಎಫ್-16 ಲಿಂಗದಹಳ್ಳಿ ಹಾಗೂ ಎಫ್-18 ಬಳಸಗೋಡು ಮಾರ್ಗಗಳು.
-
ಗ್ರಾಮ ಪಂಚಾಯಿತಿಗಳು: ಮಾಲ್ವೆ, ಭೀಮನೇರಿ, ಕೆಳದಿ, ಮಾಸೂರು, ಹಿರೇನೆಲ್ಲೂರು, ಪಡವಗೋಡು, ನಾಡಕಲಸಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಎಲ್ಲಾ ಗ್ರಾಮಗಳು.
ಗ್ರಾಹಕರು ಇಲ್ಲಿ ಸಂಪರ್ಕಿಸಬಹುದು:
ವಿದ್ಯುತ್ ಅಡಚಣೆಗೆ ಸಂಬಂಧಿಸಿದಂತೆ ಸಾಗರ ನಗರದ ಗ್ರಾಹಕರು ದೂರುಗಳಿದ್ದಲ್ಲಿ ಮೆಸ್ಕಾಂನ 24*7 ಸೇವಾ ಕೇಂದ್ರದ ದೂರವಾಣಿ ಸಂಖ್ಯೆ: 0183-226098 ಅಥವಾ ಮೊಬೈಲ್ ಸಂಖ್ಯೆ: 8277880742 ಕ್ಕೆ ಸಂಪರ್ಕಿಸಬಹುದಾಗಿದೆ. ಕಾಮಗಾರಿ ಮುಗಿಯುವವರೆಗೆ ಸಾರ್ವಜನಿಕರು ಹಾಗೂ ವಿದ್ಯುತ್ ಗ್ರಾಹಕರು ಮೆಸ್ಕಾಂ ಸಿಬ್ಬಂದಿಯೊಂದಿಗೆ ಸಹಕರಿಸಬೇಕಾಗಿ ಕೋರಲಾಗಿದೆ.
BREAKING: ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ವರ್ಗಾವಣೆ: ನೂತನ ಡಿಸಿಯಾಗಿ ಕಾಂತರಾಜು ನೇಮಿಸಿ ಸರ್ಕಾರದ ಆದೇಶ!








