ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರಿ ಕುತೂಹಲ ಮೂಡಿಸಿದ್ದ ಸಚಿವ ಸಂಪುಟದ ಖಾತೆ ಹಂಚಿಕೆ ಪ್ರಕ್ರಿಯೆ ಕೊನೆಗೂ ಪೂರ್ಣಗೊಂಡಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಸಂಪುಟದ 13 ಪ್ರಮುಖ ಸಚಿವರಿಗೆ ಇಲಾಖೆಗಳನ್ನು ಹಂಚಿಕೆ ಮಾಡಿ ಅಧಿಕೃತ ಆದೇಶ ಹೊರಡಿಸಿದ್ದಾರೆ.
ಮುಖ್ಯಮಂತ್ರಿಗಳು ಆಯಕಟ್ಟಿನ ಹಣಕಾಸು ಸೇರಿದಂತೆ ಹಲವು ಪ್ರಮುಖ ಇಲಾಖೆಗಳನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದರೆ, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರಿಗೆ ಕಂದಾಯ ಇಲಾಖೆಯ ಜವಾಬ್ದಾರಿ ನೀಡಲಾಗಿದೆ.
ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಇಲಾಖೆಗಳು
- ಸಿಎಂ ಡಿ.ಕೆ.ಶಿವಕುಮಾರ್: ಹಣಕಾಸು ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (DPAR) ಹಾಗೂ ಇತರ ಯಾವುದೇ ಸಚಿವರಿಗೆ ಹಂಚಿಕೆಯಾಗದ ಎಲ್ಲಾ ಖಾತೆಗಳು.
- ಡಿಸಿಎಂ ಡಾ. ಜಿ. ಪರಮೇಶ್ವರ್: ಕಂದಾಯ ಇಲಾಖೆ ಹಾಗೂ ಕ್ರೀಡಾ ಮತ್ತು ಯುವಜನ ಸಬಲೀಕರಣ ಇಲಾಖೆ.
13 ಸಚಿವರು ಮತ್ತು ಅವರಿಗೆ ಹಂಚಿಕೆಯಾದ ಖಾತೆಗಳ ಪಟ್ಟಿ:
ಯಾವ ಯಾವ ಸಚಿವರಿಗೆ ಯಾವ ಜವಾಬ್ದಾರಿ ಸಿಕ್ಕಿದೆ ಎಂಬುದರ ಸಂಪೂರ್ಣ ವಿವರ ಇಲ್ಲಿದೆ:
|
ಸಚಿವರ ಹೆಸರು |
ನಿಯೋಜಿಸಲಾದ ಇಲಾಖೆ / ಖಾತೆಗಳು |
|---|---|
|
ಪ್ರಿಯಾಂಕ್ ಖರ್ಗೆ |
ಗೃಹ ಇಲಾಖೆ, ಐಟಿ-ಬಿಟಿ ಇಲಾಖೆ |
|
ಕೆ.ಜೆ. ಜಾರ್ಜ್ |
ಇಂಧನ ಮತ್ತು ಪ್ರವಾಸೋದ್ಯಮ ಇಲಾಖೆ |
|
ಎಂ.ಬಿ. ಪಾಟೀಲ್ |
ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ |
|
ಸತೀಶ್ ಜಾರಕಿಹೊಳಿ |
ಲೋಕೋಪಯೋಗಿ ಇಲಾಖೆ (PWD) |
|
ಕೃಷ್ಣ ಭೈರೇಗೌಡ |
ಬೆಂಗಳೂರು ನಗರಾಭಿವೃದ್ಧಿ (ಜಿಬಿಎ) |
|
ರಾಮಲಿಂಗಾರೆಡ್ಡಿ |
ಜಲಸಂಪನ್ಮೂಲ ಇಲಾಖೆ |
|
ಕೆ.ಹೆಚ್. ಮುನಿಯಪ್ಪ |
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ |
|
ಭೈರತಿ ಸುರೇಶ್ |
ಸಾರಿಗೆ ಇಲಾಖೆ |
|
ಯು.ಟಿ. ಖಾದರ್ |
ಆರೋಗ್ಯ ಇಲಾಖೆ |
|
ಡಾ. ಯತೀಂದ್ರ ಸಿದ್ದರಾಮಯ್ಯ |
ನಗರಾಭಿವೃದ್ಧಿ ಇಲಾಖೆ |
|
ಶರಣಪ್ರಕಾಶ್ ಪಾಟೀಲ್ |
ವೈದ್ಯಕೀಯ ಶಿಕ್ಷಣ ಇಲಾಖೆ |
|
ಈಶ್ವರ್ ಖಂಡ್ರೆ |
ಗ್ರಾಮೀಣಾಭಿವೃದ್ಧಿ ಇಲಾಖೆ |
ಗಮನ ಸೆಳೆದ ಪ್ರಮುಖ ಹಂಚಿಕೆಗಳು
ಈ ಬಾರಿಯ ಖಾತೆ ಹಂಚಿಕೆಯಲ್ಲಿ ಪ್ರಿಯಾಂಕ್ ಖರ್ಗೆ ಅವರಿಗೆ ಅತ್ಯಂತ ಜವಾಬ್ದಾರಿಯುತ ಗೃಹ ಇಲಾಖೆಯೊಂದಿಗೆ ಐಟಿ-ಬಿಟಿ ಖಾತೆಯನ್ನು ನೀಡಲಾಗಿದೆ. ಹಿರಿಯ ನಾಯಕರಾದ ಎಂ.ಬಿ. ಪಾಟೀಲ್ ಹಾಗೂ ಸತೀಶ್ ಜಾರಕಿಹೊಳಿ ಅವರು ಕ್ರಮವಾಗಿ ಕೈಗಾರಿಕೆ ಮತ್ತು ಲೋಕೋಪಯೋಗಿ ಇಲಾಖೆಯಂತಹ ಬಲಿಷ್ಠ ಖಾತೆಗಳನ್ನು ಪಡೆದುಕೊಂಡಿದ್ದಾರೆ. ಇನ್ನು ಬೆಂಗಳೂರು ನಗರಾಭಿವೃದ್ಧಿಯ ಹೊಣೆಯನ್ನು ಕೃಷ್ಣ ಭೈರೇಗೌಡ ಅವರಿಗೆ ವಹಿಸಿರುವುದು ವಿಶೇಷವಾಗಿದೆ.
ಖಾತೆ ಹಂಚಿಕೆ ಬೆನ್ನಲ್ಲೇ ಎಲ್ಲಾ ಸಚಿವರುಗಳು ಶೀಘ್ರದಲ್ಲೇ ಅಧಿಕೃತವಾಗಿ ಅಧಿಕಾರ ಸ್ವೀಕರಿಸಿ, ತಮ್ಮ ತಮ್ಮ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…









