ಬಳ್ಳಾರಿ : ಬಳ್ಳಾರಿಯಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು, ಮೈನಿಂಗ್ ಲಾರಿ ಡಿಕ್ಕಿಯಾಗಿ ಬೈಕ್ ನಲ್ಲಿದ್ದ ತಂದೆ-ಮಗ ಇಬ್ಬರು ಸಾವನ್ನಪ್ಪಿರುವ ಘಟನೆ, ಜಿಲ್ಲೆಯ ಸಂಡೂರು ತಾಲೂಕಿನ ಚಿನ್ನುಬಸಪ್ಪ ಕ್ಯಾಂಪ್ ಬಳಿ ನಡೆದಿದೆ.
ಬೈಕ್ ನಲ್ಲಿದ್ದ ಬೆಳ್ಳಿ ನಾಗರಾಜ್ (45) ದುರಗೇಶ (22) ಸಾವನ್ನಪ್ಪಿದ್ದಾರೆ. ಮೈನಿಂಗ್ ಕಂಪನಿಯಲ್ಲಿ ವಾಚ್ ಮೆನ್ ಆಗಿದ್ದ ಬೆಳ್ಳಿ ನಾಗರಾಜ ಪ್ಯಾರಾ ಮೆಡಿಕಲ್ ಓದುತ್ತಿದ್ದ ನಾಗರಾಜ ಪುತ್ರ ದುರಗೇಶ ತಂದೆಯನ್ನು ಕೆಲಸಕ್ಕೆ ಬಿತ್ತು ಬರಲು ಹೊರಟಿದ್ದ ದುರಗೇಶ. ವೇಗವಾಗಿ ಬಂದು ಮೈನಿಂಗ್ ಲಾರಿ ಡಿಕ್ಕಿಯಾಗಿ ಇಬ್ಬರು ಸಾವನ್ನಪ್ಪಿದ್ದಾರೆ. ಬೆಳ್ಳಿ ನಾಗರಾಜ ಸ್ಥಳದಲ್ಲೇ ಸಾವನ್ನಪ್ಪಿದ್ದು, ದುರುಗೇಶ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಸಂಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








