Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​ಕುವೈತ್ ವಿಮಾನ ನಿಲ್ದಾಣದ ಮೇಲೆ ಇರಾನ್ ಡ್ರೋನ್ ದಾಳಿ: ಓರ್ವ ಭಾರತೀಯ ಸಾವು, ಉದ್ವಿಗ್ನ ಪರಿಸ್ಥಿತಿ!

ಡಿಕೆಶಿ ಪ್ರಮಾಣವಚನದಲ್ಲಿ ಕೇಳಿಬಂದ ‘ಅಜ್ಜಯ್ಯ’ನ ಹೆಸರು : ಯಾರೀ ವೀರ ಗಂಗಾಧರ ಅಜ್ಜಯ್ಯ?

ಇದು ಹೊಸ ಸರ್ಕಾರವಲ್ಲ, ಹಳೆಯ ಭ್ರಷ್ಟ ಸರ್ಕಾರದ ಹೊಸ ಮಾರುವೇಷ: ಸಿಎಂ ಡಿಕೆಶಿ ಸಂಪುಟದ ವಿರುದ್ಧ ಆರ್.ಅಶೋಕ್ ಕಿಡಿ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಇದು ಹೊಸ ಸರ್ಕಾರವಲ್ಲ, ಹಳೆಯ ಭ್ರಷ್ಟ ಸರ್ಕಾರದ ಹೊಸ ಮಾರುವೇಷ: ಸಿಎಂ ಡಿಕೆಶಿ ಸಂಪುಟದ ವಿರುದ್ಧ ಆರ್.ಅಶೋಕ್ ಕಿಡಿ
KARNATAKA

ಇದು ಹೊಸ ಸರ್ಕಾರವಲ್ಲ, ಹಳೆಯ ಭ್ರಷ್ಟ ಸರ್ಕಾರದ ಹೊಸ ಮಾರುವೇಷ: ಸಿಎಂ ಡಿಕೆಶಿ ಸಂಪುಟದ ವಿರುದ್ಧ ಆರ್.ಅಶೋಕ್ ಕಿಡಿ

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಡಿ.ಕೆ. ಶಿವಕುಮಾರ್ ಅವರಿಗೆ ಹಾರ್ದಿಕ ಅಭಿನಂದನೆಗಳು ಹಾಗೂ ಅವರ ಅಧಿಕಾರಾವಧಿಗೆ ಶುಭಾಶಯಗಳು. ಅವರು ರಾಜ್ಯದ ಸಮಗ್ರ ಅಭಿವೃದ್ಧಿ ಮತ್ತು ಜನಸಾಮಾನ್ಯರ ಹಿತಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಲಿ ಎಂದು ಆಶಿಸುತ್ತೇನೆ. ಆದರೆ, ಈ ನಾಯಕತ್ವ ಬದಲಾವಣೆಯಿಂದ ರಾಜ್ಯದ ಜನರಲ್ಲಿ ಯಾವುದೇ ಹೊಸ ಭರವಸೆ ಅಥವಾ ನಿರೀಕ್ಷೆ ಮೂಡಿಲ್ಲ ಎನ್ನುವುದೇ ಇಂದಿನ ಕಹಿ ಸತ್ಯವಾಗಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಲೇವಡಿ ಮಾಡಿದ್ದಾರೆ.

ನೂತನ ಸರ್ಕಾರದ ಪ್ರಮಾಣವಚನ ಮುಗಿಯುತ್ತಿದ್ದಂತೆ ಪ್ರಕಟಣೆ ಹೊರಡಿಸಿರುವ ಅವರು, ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅವರ ಪ್ರಕಟಣೆಯ ಮುಖ್ಯಾಂಶಗಳು ಈ ಕೆಳಗಿನಂತಿವೆ:

ಕೇವಲ ಮುಖ್ಯಸ್ಥರು ಬದಲಾಗಿದ್ದಾರೆ, ವ್ಯವಸ್ಥೆಯಲ್ಲ!

“ಕಳೆದ ಮೂರು ವರ್ಷಗಳಲ್ಲಿ ಭ್ರಷ್ಟಾಚಾರ, ತಾರತಮ್ಯದ ವರ್ಗಾವಣೆ ದಂಧೆ, ಕಮಿಷನ್ ಸಂಸ್ಕೃತಿ ಮತ್ತು ಸಾಲು ಸಾಲು ಆಡಳಿತ ವೈಫಲ್ಯಗಳಿಂದ ಈ ಸರ್ಕಾರ ಇಡೀ ರಾಜ್ಯವನ್ನು ತೀವ್ರ ಸಂಕಷ್ಟಕ್ಕೆ ತಳ್ಳಿತ್ತು. ಇಂದು ನಡೆದಿರುವ ಪ್ರಕ್ರಿಯೆಯಲ್ಲಿ ಸರ್ಕಾರದ ಮುಖ್ಯಸ್ಥರು ಮಾತ್ರ ಬದಲಾಗಿದ್ದಾರೆಯೇ ಹೊರತು, ಇವರ ಆಡಳಿತದ ಮನಸ್ಥಿತಿ ಮತ್ತು ಭ್ರಷ್ಟ ವ್ಯವಸ್ಥೆ ಬದಲಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಜನರು ಕೇವಲ ನಾಯಕತ್ವದ ಬದಲಾವಣೆಯನ್ನು ಬಯಸಿರಲಿಲ್ಲ; ಬದಲಾಗಿ ಆಡಳಿತದ ದಿಕ್ಕು ಹಾಗೂ ಸರ್ಕಾರದ ಆದ್ಯತೆಗಳು ಬದಲಾಗಬಹುದು ಎಂದು ನಿರೀಕ್ಷಿಸಿದ್ದರು” ಎಂದು ಅಶೋಕ್ ಅಸಮಾಧಾನ ಹೊರಹಾಕಿದ್ದಾರೆ.

ಅದೇ ಹಳೆಯ ಭ್ರಷ್ಟ ಮುಖಗಳಿಗೆ ಮತ್ತೆ ಮಂತ್ರಿ ಪಟ್ಟ!

ನೂತನ ಸಚಿವ ಸಂಪುಟದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ವಿಪಕ್ಷ ನಾಯಕರು, “ಇಂದು ಅಸ್ತಿತ್ವಕ್ಕೆ ಬಂದಿರುವ ಸಚಿವ ಸಂಪುಟವನ್ನು ಸೂಕ್ಷ್ಮವಾಗಿ ನೋಡಿದಾಗ ಜನರಿಗೆ ನಿರಾಸೆಯಾಗಿದೆ. ಕರ್ನಾಟಕವನ್ನು ಇಂತಹ ದುಸ್ಥಿತಿಗೆ ತಳ್ಳಲು ಕಾರಣರಾದ ಅದೇ ಹಳೆಯ ಭ್ರಷ್ಟ ಮುಖಗಳು ಮತ್ತೆ ಅಧಿಕಾರದ ಪ್ರಮುಖ ಕೇಂದ್ರಗಳಲ್ಲಿ ವಿರಾಜಮಾನವಾಗಿರುವುದು ಎದ್ದು ಕಾಣುತ್ತಿದೆ. ರಾಜ್ಯದ ಖಜಾನೆಯನ್ನು ಲೂಟಿ ಮಾಡಿದವರು, ಅಭಿವೃದ್ಧಿ ಕಾಮಗಾರಿಗಳನ್ನು ಸಂಪೂರ್ಣವಾಗಿ ಹಿಮ್ಮೆಟ್ಟಿಸಿದವರು ಮತ್ತು ಸಾರ್ವಜನಿಕರ ವಿಶ್ವಾಸವನ್ನು ಕಳೆದುಕೊಂಡವರಿಗೇ ಮತ್ತೆ ಅಧಿಕಾರದ ಚುಕ್ಕಾಣಿ ನೀಡಲಾಗಿದೆ. ಹೀಗಾಗಿ, ಇದು ಯಾವುದೇ ಕಾರಣಕ್ಕೂ ಹೊಸ ಸರ್ಕಾರವಲ್ಲ, ಹಳೆಯ ಸರ್ಕಾರದ ಹೊಸ ಮಾರುವೇಷವಷ್ಟೇ” ಎಂದು ಟೀಕಿಸಿದ್ದಾರೆ.

ಮುಳ್ಳಿನ ಹಾದಿಯಲ್ಲಿ ನೂತನ ಸಿಎಂ ಪಯಣ

“ಕೇವಲ ಮುಖ್ಯಮಂತ್ರಿ ಬದಲಾವಣೆಯಿಂದಲೇ ರಾಜ್ಯದ ಹಣೆಬರಹ ಬದಲಾಗುವುದಿಲ್ಲ. ಭ್ರಷ್ಟಾಚಾರ, ಅಧಿಕಾರದ ದುರುಪಯೋಗ ಮತ್ತು ಜನವಿರೋಧಿ ರಾಜಕಾರಣವನ್ನು ಸಂಪೂರ್ಣವಾಗಿ ಬದಿಗೊತ್ತಿ, ಶ್ರೀಸಾಮಾನ್ಯರ ಪರವಾದ ಜನಸ್ನೇಹಿ ಸರ್ಕಾರ ನೀಡುವ ದೃಢ ಇಚ್ಛಾಶಕ್ತಿ ಇದ್ದಾಗ ಮಾತ್ರ ನಿಜವಾದ ಬದಲಾವಣೆ ಸಾಧ್ಯ. ನೂತನ ಮುಖ್ಯಮಂತ್ರಿಗಳ ಮುಂದೆ ಈಗ ಸುಲಭದ ಹಾದಿಯಿಲ್ಲ. ಅವರ ಮುಂದೆ ನಿಂತಿರುವುದು ಹೊಸ ಅವಕಾಶಗಳ ಪರ್ವತವಲ್ಲ; ಬದಲಾಗಿ ಅವರದ್ದೇ ಸರ್ಕಾರದ ಕಳೆದ ಮೂರು ವರ್ಷಗಳ ವೈಫಲ್ಯಗಳ ಅವಶೇಷಗಳು! ಆಡಳಿತ ವೈಫಲ್ಯ ಮತ್ತು ಮುರಿದ ಭರವಸೆಗಳ ಕರಿನೆರಳು ಅವರನ್ನು ಪ್ರತಿ ಹೆಜ್ಜೆಯಲ್ಲೂ ಹಿಂಬಾಲಿಸಲಿದೆ. ತಮ್ಮದೇ ಪಕ್ಷದ ಸರ್ಕಾರ ಬಿತ್ತಿರುವ ಮುಳ್ಳುಗಳ ಮೇಲೆಯೇ ಅವರು ಆಡಳಿತದ ಪಯಣ ಆರಂಭಿಸಬೇಕಾಗಿದೆ” ಎಂದು ಆರ್. ಅಶೋಕ್ ಎಚ್ಚರಿಸಿದ್ದಾರೆ.

ಕನ್ನಡಿಗರು ಭರವಸೆಗಳನ್ನಲ್ಲ, ಫಲಿತಾಂಶ ಬಯಸುತ್ತಿದ್ದಾರೆ!

“ಕುಸಿದು ಬಿದ್ದಿರುವ ಆಡಳಿತದ ಅವಶೇಷಗಳ ಮೇಲೆ ಹೊಸ ಸರ್ಕಾರವನ್ನು ಕಟ್ಟುವುದು ಅಷ್ಟು ಸುಲಭವಲ್ಲ. ಮುಖ್ಯಮಂತ್ರಿಗಳ ಮುಖ ಬದಲಾಗಿರಬಹುದು, ಆದರೆ ಕರ್ನಾಟಕದ ಜನತೆ ಕಳೆದ ಮೂರು ವರ್ಷಗಳ ಕಹಿ ನೆನಪನ್ನು ಮತ್ತು ಅನುಭವಿಸಿದ ತೊಂದರೆಗಳನ್ನು ಇಂದಿಗೂ ಮರೆತಿಲ್ಲ. ಈ ಹೊಸ ಸರ್ಕಾರದಿಂದ ಕನ್ನಡಿಗರು ಯಾವುದೇ ಹೆಚ್ಚಿನ ನಿರೀಕ್ಷೆಯನ್ನು ಇಟ್ಟುಕೊಂಡಿಲ್ಲ. ರಾಜ್ಯದ ಜನತೆ ಈಗ ಕೇವಲ ಪೊಳ್ಳು ಭರವಸೆಗಳನ್ನಲ್ಲ, ಬದಲಾಗಿ ಕಣ್ಣಿಗೆ ಕಾಣುವ ಫಲಿತಾಂಶಗಳನ್ನು ನೋಡಲು ಬಯಸುತ್ತಿದ್ದಾರೆ. ಬರೀ ಮಾತುಗಳಿಗಿಂತ ಕಾರ್ಯವನ್ನು, ಕೇವಲ ಪ್ರಚಾರಕ್ಕಿಂತ ಗಟ್ಟಿಯಾದ ಆಡಳಿತವನ್ನು ರಾಜ್ಯ ನಿರೀಕ್ಷಿಸುತ್ತಿದೆ” ಎಂದು ಆರ್. ಅಶೋಕ್ ತಮ್ಮ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಕೊಟ್ಟ ಅವಕಾಶ ಜನರ ಒಳಿತಿಗಾಗಿ ಮುಡಿಪು: ಸಚಿವ ಬೈರತಿ ಸುರೇಶ್

Share. Facebook Twitter LinkedIn WhatsApp Email

Related Posts

ಡಿಕೆಶಿ ಪ್ರಮಾಣವಚನದಲ್ಲಿ ಕೇಳಿಬಂದ ‘ಅಜ್ಜಯ್ಯ’ನ ಹೆಸರು : ಯಾರೀ ವೀರ ಗಂಗಾಧರ ಅಜ್ಜಯ್ಯ?

4 Mins Read

ಕೊಟ್ಟ ಅವಕಾಶ ಜನರ ಒಳಿತಿಗಾಗಿ ಮುಡಿಪು: ಸಚಿವ ಬೈರತಿ ಸುರೇಶ್

1 Min Read

BIG NEWS: 7 ಕೋಟಿ ಕನ್ನಡಿಗರ ಸೇವೆ ನನ್ನ ಭಾಗ್ಯ: ಸಿಎಂ ಪ್ರಮಾಣವಚನದ ಬಳಿಕ ಡಿಕೆಶಿ ಭಾವುಕ ಪೋಸ್ಟ್!

2 Mins Read
Recent News

​ಕುವೈತ್ ವಿಮಾನ ನಿಲ್ದಾಣದ ಮೇಲೆ ಇರಾನ್ ಡ್ರೋನ್ ದಾಳಿ: ಓರ್ವ ಭಾರತೀಯ ಸಾವು, ಉದ್ವಿಗ್ನ ಪರಿಸ್ಥಿತಿ!

ಡಿಕೆಶಿ ಪ್ರಮಾಣವಚನದಲ್ಲಿ ಕೇಳಿಬಂದ ‘ಅಜ್ಜಯ್ಯ’ನ ಹೆಸರು : ಯಾರೀ ವೀರ ಗಂಗಾಧರ ಅಜ್ಜಯ್ಯ?

ಇದು ಹೊಸ ಸರ್ಕಾರವಲ್ಲ, ಹಳೆಯ ಭ್ರಷ್ಟ ಸರ್ಕಾರದ ಹೊಸ ಮಾರುವೇಷ: ಸಿಎಂ ಡಿಕೆಶಿ ಸಂಪುಟದ ವಿರುದ್ಧ ಆರ್.ಅಶೋಕ್ ಕಿಡಿ

ಕೊಟ್ಟ ಅವಕಾಶ ಜನರ ಒಳಿತಿಗಾಗಿ ಮುಡಿಪು: ಸಚಿವ ಬೈರತಿ ಸುರೇಶ್

State News
KARNATAKA

ಡಿಕೆಶಿ ಪ್ರಮಾಣವಚನದಲ್ಲಿ ಕೇಳಿಬಂದ ‘ಅಜ್ಜಯ್ಯ’ನ ಹೆಸರು : ಯಾರೀ ವೀರ ಗಂಗಾಧರ ಅಜ್ಜಯ್ಯ?

By ಅವಿನಾಶ್‌ ಆರ್‌ ಭೀಮಸಂದ್ರ KARNATAKA 4 Mins Read

ಬೆಂಗಳೂರು: ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಬಹುಕಾಲದಿಂದ ನಿರೀಕ್ಷಿಸಲಾಗುತ್ತಿದ್ದ ಅತ್ಯಂತ ಮಹತ್ವದ ರಾಜಕೀಯ ಪರ್ವವೊಂದು ಅಧಿಕೃತವಾಗಿ ನೆರವೇರಿದೆ. ರಾಜ್ಯದ ಆಡಳಿತ ಸೂತ್ರವನ್ನು…

ಇದು ಹೊಸ ಸರ್ಕಾರವಲ್ಲ, ಹಳೆಯ ಭ್ರಷ್ಟ ಸರ್ಕಾರದ ಹೊಸ ಮಾರುವೇಷ: ಸಿಎಂ ಡಿಕೆಶಿ ಸಂಪುಟದ ವಿರುದ್ಧ ಆರ್.ಅಶೋಕ್ ಕಿಡಿ

ಕೊಟ್ಟ ಅವಕಾಶ ಜನರ ಒಳಿತಿಗಾಗಿ ಮುಡಿಪು: ಸಚಿವ ಬೈರತಿ ಸುರೇಶ್

BIG NEWS: 7 ಕೋಟಿ ಕನ್ನಡಿಗರ ಸೇವೆ ನನ್ನ ಭಾಗ್ಯ: ಸಿಎಂ ಪ್ರಮಾಣವಚನದ ಬಳಿಕ ಡಿಕೆಶಿ ಭಾವುಕ ಪೋಸ್ಟ್!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.