Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​ರಾಜೀನಾಮೆಯ ನಂತರವೂ ‘ಕಾವೇರಿ’ ನಿವಾಸದಲ್ಲೇ ಸಿದ್ದರಾಮಯ್ಯ ಮುಂದುವರಿಕೆ: ಕಾರಣವೇನು?

ಕರ್ನಾಟಕದಲ್ಲಿ ಯುವ ಯುಗ ಆರಂಭ: ಸಿಎಲ್ ಪಿ ನಾಯಕ ಡಿ.ಕೆ. ಶಿವಕುಮಾರ್

ಡಿಕೆಶಿ ಸಿಎಂ ಪಟ್ಟಾಭಿಷೇಕಕ್ಕೆ ಹೈ ಅಲರ್ಟ್: ನಾಳೆ ವಿಧಾನಸೌಧ, ಲೋಕಭವನ ಸುತ್ತ 3,500 ಪೊಲೀಸರ ಸರ್ಪಗಾವಲು!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕರ್ನಾಟಕದಲ್ಲಿ ಯುವ ಯುಗ ಆರಂಭ: ಸಿಎಲ್ ಪಿ ನಾಯಕ ಡಿ.ಕೆ. ಶಿವಕುಮಾರ್
KARNATAKA

ಕರ್ನಾಟಕದಲ್ಲಿ ಯುವ ಯುಗ ಆರಂಭ: ಸಿಎಲ್ ಪಿ ನಾಯಕ ಡಿ.ಕೆ. ಶಿವಕುಮಾರ್

By ವಸಂತ ಬಿ ಈಶ್ವರಗೆರೆ

ನವದೆಹಲಿ : “ಕರ್ನಾಟಕದ ಜನರು ನನ್ನ ಮೇಲೆ ವಿಶ್ವಾಸ ಹೊಂದಿದ್ದಾರೆ. ರೈತರು, ಮಹಿಳೆಯರು ಹಾಗೂ ಯುವ ಪೀಳಿಗೆಯನ್ನು ಸೇರಿ ನಾನು ಸಮಾಜದ ಪ್ರತಿಯೊಂದು ವರ್ಗವನ್ನು ಒಟ್ಟಿಗೆ ತೆಗೆದುಕೊಂಡು ಹೋಗುತ್ತೇನೆ. ಕರ್ನಾಟಕದಲ್ಲಿ ಹೊಸ ಯುವ ಯುಗ ಪ್ರಾರಂಭವಾಗಲಿದೆ” ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾದ ಡಿ.ಕೆ. ಶಿವಕುಮಾರ್ ಅವರು ಹೇಳಿದರು‌.

ದೆಹಲಿಯಲ್ಲಿ ಸುದ್ದಿ ಸಂಸ್ಥೆಯೊಂದಕ್ಕೆ ಶಿವಕುಮಾರ್ ಅವರು ಮಂಗಳವಾರ ಪ್ರತಿಕ್ರಿಯೆ ನೀಡಿದರು.

“ನಾನು ಯಾವುದನ್ನೂ ಕನಸು ಎಂದು ಹೇಳುವುದಿಲ್ಲ. ಕಠಿಣ ಪರಿಶ್ರಮದ ಜೊತೆಗೆ ಸಮರ್ಪಣೆ ಎಂದು ಕರೆಯುತ್ತೇನೆ.‌ ಇದು ಕಠಿಣ ಸಮಯ, ವಿಳಂಬವಾಗಿರಬಹುದು ಆದರೆ ನಿರಾಕರಣೆಗೆ ಒಳಗಾಗಿಲ್ಲ. ಇಲ್ಲಿ ಶಿವಕುಮಾರ್ ಒಬ್ಬನ ವಿಚಾರವಲ್ಲ, ಕಾಂಗ್ರೆಸ್ ಪಕ್ಷದ ಇತಿಹಾಸದೊಂದಿಗೆ ಈ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಂಬಿಕೆಯಿಟ್ಟಿರುವ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರ ಪರಿಶ್ರಮದ ಫಲವಾಗಿದೆ” ಎಂದರು.

ಗಾಂಧಿ ಕುಟುಂಬ ನಂಬಿಕೆಯಿಟ್ಟು ಜವಾಬ್ದಾರಿ ನೀಡಿದೆ

“ಗಾಂಧಿ ಕುಟುಂಬ ನನ್ನ ಮೇಲೆ ನಂಬಿಕೆಯನ್ನಿಟ್ಟಿತ್ತು. ಅವರು ನನಗೆ ವಿವಿಧ ಅವಕಾಶಗಳನ್ನು ನೀಡಿದರು. ರಾಜೀವ್‌ ಗಾಂಧಿ ಅವರಿಂದ ಹಿಡಿದು ಇಲ್ಲಿಯವರೆಗೆ ಕುಟುಂಬಕ್ಕೆ ತುಂಬಾ ನಿಷ್ಠನಾಗಿದ್ದೇನೆ. ನೆಹರು ಕುಟುಂಬದ ಸದಸ್ಯರು ತಮಗೆ ಸಿಕ್ಕ ವಿವಿಧ ಸ್ಥಾನಗಳನ್ನು ತ್ಯಾಗ ಮಾಡಿದ್ದಾರೆ. ಸೋನಿಯಾ ಗಾಂಧಿ ಅವರೂ ಉನ್ನತ ಸ್ಥಾನ ತ್ಯಾಗ ಮಾಡಿದರು. ಅವರು ಪ್ರಧಾನಿಯಾಗಬಹುದಿತ್ತು. ರಾಹುಲ್ ಗಾಂಧಿ ಪ್ರಧಾನಿಯಾಗಬಹುದಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ಬದಲಾಗಿ ದೇಶಕ್ಕಾಗಿ ಹೋರಾಡಿದರು. ರಾಹುಲ್‌ ಗಾಂಧಿ ಅವರು ಭಾರತ್ ಜೋಡೊ ಯಾತ್ರೆ ಮೂಲಕ ಈ ದೇಶದ ಬೀದಿಗಳಲ್ಲಿ ಓಡಾಡಿದರು. ಯಾವ ನಾಯಕ ಇಷ್ಟು ದೊಡ್ಡ ನಿರ್ಧಾರ ತೆಗೆದುಕೊಂಡಿದ್ದಾನೆ, ಇಷ್ಟು ಕಷ್ಟದ ಕೆಲಸ ಮಾಡುತ್ತಿದ್ದಾನೆ ಹೇಳಿ” ಎಂದರು.

“ಇಂದಿರಾ ಗಾಂಧಿಯವರ ಮರಣದ ನಂತರ ನಾನು ನನ್ನ ಚಿತ್ರಮಂದಿರಕ್ಕೆ ಇಂದಿರಾಗಾಂಧಿ ಚಿತ್ರ ಮಂದಿರ ಎಂದು ಹೆಸರಿಟ್ಟಿದ್ದೇ. ಗಾಂಧಿ ಕುಟುಂಬದೊಂದಿಗೆ ನಾನು ಹೊಂದಿದ್ದ ಬದ್ಧತೆಯನ್ನು ತೋರಿಸುತ್ತದೆ” ಎಂದರು.

ನನ್ನ ಮೇಲೆ ಇಟ್ಟಿರುವ ನಂಬಿಕೆಗೆ ಬದ್ಧ

“ನನ್ನ ಮೇಲೆ ಇಟ್ಟಿರವ ನಂಬಿಕೆ ಮತ್ತು ವಿಶ್ವಾಸಕ್ಕೆ ನಾನು ತುಂಬಾ ಬದ್ಧನಾಗಿದ್ದೇನೆ ಮತ್ತು ನಾನು ಬಹಳಷ್ಟು ಕಷ್ಟಪಟ್ಟು ಕೆಲಸ ಮಾಡಿ ಎಲ್ಲರ ಆಶೋತ್ತರಗಳನ್ನು ಈಡೇರಿಸುತ್ತೇನೆ. ದಾರಿ ಅಷ್ಟು ಸುಲಭವಾಗಿಲ್ಲ. ಆದರೂ ಇದನ್ನು ನಿರ್ವಹಿಸಬೇಕು. ನಾನು ನನ್ನ ಕೆಲಸವನ್ನು ತುಂಬಾ ಪ್ರಾಮಾಣಿಕವಾಗಿ, ಸಮರ್ಪಣಾಭಾವದಿಂದ ಮಾಡುತ್ತೇನೆ” ಎಂದು ಹೇಳಿದರು.

“ನನ್ನ ಕೆಲಸಗಳ ಮೂಲಕ ನಾನು ಏನು ಎಂಬುದನ್ನು ಮರುನಿರೂಪಿಸಬೇಕಿದೆ. ಏಕೆಂದರೆ ಜಗತ್ತು ಬೆಂಗಳೂರು ಮತ್ತು ಕರ್ನಾಟಕದ ಮೂಲಕ ಭಾರತವನ್ನು ನೋಡುತ್ತದೆ. ಕರ್ನಾಟಕ ಸುಂದರ ರಾಜ್ಯ. ನಾನು ಯಾರನ್ನು ಭೇಟಿಯಾದರೂ, ಅವರು ಕರ್ನಾಟಕ ದೇಶದ ಪ್ರಮುಖ ರಾಜ್ಯ ಎಂದು ಹೇಳುತ್ತಾರೆ. ಆದ್ದರಿಂದ ಜವಾಬ್ದಾರಿ ಹೆಚ್ಚಿದೆ” ಎಂದರು.

EXCLUSIVE: ರಾಜ್ಯದಲ್ಲೊಬ್ಬ ‘ಡಿ.ಕೆ.ಶಿವಕುಮಾರ್’ ಅಪರೂಪದ ಅಭಿಮಾನಿ: ತನ್ನೆರಡು ಕೈ ಭುಜದ ಮೇಲೆ ‘ಡಿಕೆಶಿ ಟ್ಯಾಟೋ’ | DK Shivakumar Tato

ಡಿಕೆಶಿ ಸಿಎಂ ಪಟ್ಟಾಭಿಷೇಕಕ್ಕೆ ಹೈ ಅಲರ್ಟ್: ನಾಳೆ ವಿಧಾನಸೌಧ, ಲೋಕಭವನ ಸುತ್ತ 3,500 ಪೊಲೀಸರ ಸರ್ಪಗಾವಲು!

Share. Facebook Twitter LinkedIn WhatsApp Email

Related Posts

​ರಾಜೀನಾಮೆಯ ನಂತರವೂ ‘ಕಾವೇರಿ’ ನಿವಾಸದಲ್ಲೇ ಸಿದ್ದರಾಮಯ್ಯ ಮುಂದುವರಿಕೆ: ಕಾರಣವೇನು?

1 Min Read

ಡಿಕೆಶಿ ಸಿಎಂ ಪಟ್ಟಾಭಿಷೇಕಕ್ಕೆ ಹೈ ಅಲರ್ಟ್: ನಾಳೆ ವಿಧಾನಸೌಧ, ಲೋಕಭವನ ಸುತ್ತ 3,500 ಪೊಲೀಸರ ಸರ್ಪಗಾವಲು!

2 Mins Read

ಇ-ಖಾತೆ ಮಾಡಿಕೊಡಲು 25,000 ಲಂಚ ಸ್ವೀಕಾರದ ವೇಳೆಯೇ RO, RI, ಬ್ರೋಕರ್ ಲೋಕಾಯುಕ್ತ ಬಲೆಗೆ

1 Min Read
Recent News

​ರಾಜೀನಾಮೆಯ ನಂತರವೂ ‘ಕಾವೇರಿ’ ನಿವಾಸದಲ್ಲೇ ಸಿದ್ದರಾಮಯ್ಯ ಮುಂದುವರಿಕೆ: ಕಾರಣವೇನು?

ಕರ್ನಾಟಕದಲ್ಲಿ ಯುವ ಯುಗ ಆರಂಭ: ಸಿಎಲ್ ಪಿ ನಾಯಕ ಡಿ.ಕೆ. ಶಿವಕುಮಾರ್

ಡಿಕೆಶಿ ಸಿಎಂ ಪಟ್ಟಾಭಿಷೇಕಕ್ಕೆ ಹೈ ಅಲರ್ಟ್: ನಾಳೆ ವಿಧಾನಸೌಧ, ಲೋಕಭವನ ಸುತ್ತ 3,500 ಪೊಲೀಸರ ಸರ್ಪಗಾವಲು!

ಇ-ಖಾತೆ ಮಾಡಿಕೊಡಲು 25,000 ಲಂಚ ಸ್ವೀಕಾರದ ವೇಳೆಯೇ RO, RI, ಬ್ರೋಕರ್ ಲೋಕಾಯುಕ್ತ ಬಲೆಗೆ

State News
KARNATAKA

​ರಾಜೀನಾಮೆಯ ನಂತರವೂ ‘ಕಾವೇರಿ’ ನಿವಾಸದಲ್ಲೇ ಸಿದ್ದರಾಮಯ್ಯ ಮುಂದುವರಿಕೆ: ಕಾರಣವೇನು?

By ಗೋಪಾಲ್‌ ಎನ್‌ KARNATAKA 1 Min Read

ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯಾಗುತ್ತಿದ್ದು, ಜೂನ್ 3 ರಂದು ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಆದರೆ, ಕರ್ನಾಟಕದ…

ಕರ್ನಾಟಕದಲ್ಲಿ ಯುವ ಯುಗ ಆರಂಭ: ಸಿಎಲ್ ಪಿ ನಾಯಕ ಡಿ.ಕೆ. ಶಿವಕುಮಾರ್

ಡಿಕೆಶಿ ಸಿಎಂ ಪಟ್ಟಾಭಿಷೇಕಕ್ಕೆ ಹೈ ಅಲರ್ಟ್: ನಾಳೆ ವಿಧಾನಸೌಧ, ಲೋಕಭವನ ಸುತ್ತ 3,500 ಪೊಲೀಸರ ಸರ್ಪಗಾವಲು!

ಇ-ಖಾತೆ ಮಾಡಿಕೊಡಲು 25,000 ಲಂಚ ಸ್ವೀಕಾರದ ವೇಳೆಯೇ RO, RI, ಬ್ರೋಕರ್ ಲೋಕಾಯುಕ್ತ ಬಲೆಗೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.