ಸಿ.ಬಿ.ಡಿ. ವ್ಯಾಪ್ತಿಯಲ್ಲಿರುವ ಲೋಕಭವನದಲ್ಲಿ ಪ್ರಮಾಣ ವಚನ ಕಾರ್ಯಕ್ರಮ ಹಾಗೂ ರೇಸ್ಕೋರ್ಸ್ ರಸ್ತೆಯ ಸಾರ್ವಜನಿಕ ಕಾರ್ಯಕ್ರಮದ ನಿಮಿತ್ತ ನಗರದಲ್ಲಿ ಹೆಚ್ಚಿನ ಸಂಚಾರ ದಟ್ಟಣೆಯಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ, ಸಾರ್ವಜನಿಕರ ಸುಗಮ ಸಂಚಾರದ ಹಿತದೃಷ್ಟಿಯಿಂದ ದಿನಾಂಕ: 03.06.2026 ರಂದು ಮಧ್ಯಾಹ್ನ 12:00 ಗಂಟೆಯಿಂದ ರಾತ್ರಿ 08:00 ಗಂಟೆಯವರೆಗೆ ಕೆಳಕಂಡಂತೆ ಸಂಚಾರ ಮಾರ್ಪಾಡುಗಳನ್ನು ಮಾಡಲಾಗಿರುತ್ತದೆ.
1. ಸಂಚಾರ ನಿರ್ಬಂಧಿತ ಮಾರ್ಗಗಳು
ಕಾರ್ಯಕ್ರಮದಲ್ಲಿ ಭಾಗವಹಿಸಲು ಅಧಿಕೃತ ಪಾಸ್ ಹೊಂದಿರುವ ವಾಹನಗಳನ್ನು ಹೊರತುಪಡಿಸಿ, ಕೆಳಕಂಡ ರಸ್ತೆಗಳಲ್ಲಿ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ:
-
ಕಬ್ಬನ್ ರಸ್ತೆ: ಬಿ.ಆರ್.ವಿ ಜಂಕ್ಷನ್ನಿಂದ ಸಿ.ಟಿ.ಓ. ಜಂಕ್ಷನ್ ವರೆಗೆ ಹಾಗೂ ಸಿ.ಟಿ.ಓ. ವೃತ್ತದಿಂದ ಲೋಕಭವನದವರೆಗೆ.
-
ಬಾಳೇಕುಂದ್ರಿ ಜಂಕ್ಷನ್: ಇಲ್ಲಿಂದ ಅಂಬೇಡ್ಕರ್ ರಸ್ತೆ ಕಡೆಗೆ ಬರುವ ವಾಹನಗಳು.
-
ಡಾ|| ಅಂಬೇಡ್ಕರ್ ರಸ್ತೆ: ಕೆ.ಆರ್. ಸರ್ಕಲ್ ಕಡೆಯಿಂದ ಕಾಫಿಬೋರ್ಡ್ ಜಂಕ್ಷನ್ವರೆಗೆ.
-
ರೇಸ್ಕೋರ್ಸ್ ರಸ್ತೆ: ಟ್ರಿಲೈಟ್ ಜಂಕ್ಷನ್ನಿಂದ ಸುಬ್ಬಣ್ಣ ಜಂಕ್ಷನ್ ವರೆಗೆ ಹಾಗೂ ಓಲ್ಡ್ ಜೆ.ಡಿ.ಎಸ್ ಕ್ರಾಸ್ನಿಂದ ಸುಬ್ಬಣ್ಣ ಜಂಕ್ಷನ್ ವರೆಗೆ.
-
ಕ್ಲೀನ್ಸ್ ಜಂಕ್ಷನ್: ಕ್ಲೀನ್ಸ್ ಜಂಕ್ಷನ್ ಕಡೆಯಿಂದ ಸಿ.ಟಿ.ಓ ಕಡೆಗೆ ಸಂಚರಿಸುವ ವಾಹನಗಳು.
-
ಕ್ಲೀನ್ಸ್ ಜಂಕ್ಷನ್ (ಸೆಂಟ್ ಮಾರ್ಕ್ಸ್ ರಸ್ತೆ): ಸೆಂಟ್ ಮಾರ್ಕ್ಸ್ ರಸ್ತೆಯಿಂದ ಸಿ.ಟಿ.ಓ. ಜಂಕ್ಷನ್ ಕಡೆಗೆ ಬರುವ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
2. ಬದಲಿ ಪರ್ಯಾಯ ಮಾರ್ಗಗಳು
ಸಾರ್ವಜನಿಕರು ಸಂಚಾರ ದಟ್ಟಣೆಯನ್ನು ತಪ್ಪಿಸಲು ಈ ಕೆಳಕಂಡ ಪರ್ಯಾಯ ಮಾರ್ಗಗಳನ್ನು ಬಳಸಬೇಕಾಗಿ ವಿನಂತಿ:
-
ಕಬ್ಬನ್ ರಸ್ತೆಯ ಸವಾರರು: ಬಿ.ಆರ್.ವಿ ಜಂಕ್ಷನ್ನಿಂದ ಸಿ.ಟಿ.ಓ. ಕಡೆಗೆ ಹೋಗುವ ವಾಹನಗಳು ಬಿ.ಆರ್.ವಿ. ಜಂಕ್ಷನ್ ಬಳಿ ಶಿವಾಜಿನಗರ ಕಡೆಗೆ ಬಲತಿರುವು ಅಥವಾ ಅನಿಲ್ ಕುಂಬ್ಳೆ ಜಂಕ್ಷನ್ ಕಡೆಗೆ ಎಡ ತಿರುವು ಪಡೆದು ಸಂಚರಿಸಬಹುದು.
-
ಕ್ವೀನ್ಸ್ ರಸ್ತೆ ಮತ್ತು ಶಿವಾಜಿನಗರ ಸವಾರರು: ಈ ಕಡೆಯಿಂದ ಬರುವ ವಾಹನಗಳು ಬಾಳೇಕುಂದ್ರಿ ಜಂಕ್ಷನ್ ಬಳಿ ಕನ್ನಿಂಗ್ಹ್ಯಾಮ್ ರಸ್ತೆಯ ಮುಖಾಂತರ ಮುಂದುವರಿಯಬಹುದು.
-
ಕೆ.ಆರ್. ಸರ್ಕಲ್ ಸವಾರರು: ಕೆ.ಆರ್. ಸರ್ಕಲ್ ಕಡೆಯಿಂದ ಕಾಫಿಬೋರ್ಡ್ ಜಂಕ್ಷನ್ ಕಡೆಗೆ ಸಂಚರಿಸುವ ವಾಹನಗಳು ನೃಪತುಂಗ ರಸ್ತೆಯ ಮುಖಾಂತರ ಹೋಗಬಹುದು.
-
ರೇಸ್ಕೋರ್ಸ್ ರಸ್ತೆಯ ಸವಾರರು: ಟ್ರಿಲೈಟ್ ಜಂಕ್ಷನ್ನಿಂದ ಸುಬ್ಬಣ್ಣ ಜಂಕ್ಷನ್ ವರೆಗೆ ಸಂಚರಿಸುವ ವಾಹನಗಳು ಟ್ರಿಲೈಟ್ ಜಂಕ್ಷನ್ ಕಡೆಯಿಂದ ಶಿವಾನಂದ ಜಂಕ್ಷನ್ ಮೂಲಕ ಎಸ್.ಸಿ. ರಸ್ತೆ ಜಂಕ್ಷನ್ ತಲುಪಿ ಎಡತಿರುವು ಪಡೆದು ಚಲಿಸಬೇಕಾಗುತ್ತದೆ.
-
ಕ್ಲೀನ್ಸ್ ಜಂಕ್ಷನ್ ಸವಾರರು: ಕ್ಲೀನ್ಸ್ ಜಂಕ್ಷನ್ ಕಡೆಯಿಂದ ಲೋಕ ಭವನದ ಕಡೆಗೆ ಸಂಚರಿಸುವ ವಾಹನಗಳು ಅನಿಲ್ಕುಂಬ್ಳೆ ಹಾಗೂ ಬಿ.ಆರ್.ವಿ. ಜಂಕ್ಷನ್ ಮುಖಾಂತರ ಹೋಗಬಹುದು.
-
ಹಲಸೂರು ಮತ್ತು ಹಳೆ ಏರ್ಪೋರ್ಟ್ ಕಡೆಯಿಂದ ಹೆಬ್ಬಾಳಕ್ಕೆ: ಕೆಂಪೇಗೌಡ ಏರ್ಪೋರ್ಟ್ ಮತ್ತು ಬಸವೇಶ್ವರ ಜಂಕ್ಷನ್ ಕಡೆಗೆ ಸಂಚರಿಸುವ ವಾಹನ ಸವಾರರು ಬಿ.ಆರ್.ವಿ ಜಂಕ್ಷನ್ ಬಳಿ ಬಲ ತಿರುವು ಪಡೆದು ಶಿವಾಜಿನಗರ ಬಸ್ನಿಲ್ದಾಣದ ಮೂಲಕ ಬಾಳೆಕುಂದ್ರಿ ಜಂಕ್ಷನ್, ಕನ್ನಿಂಗ್ ಹ್ಯಾಂ ರಸ್ತೆ, ವಸಂತನಗರ ಮಾರ್ಗವಾಗಿ ಹೆಬ್ಬಾಳ ಕಡೆಗೆ ಹೋಗಬಹುದು.
-
ಹಲಸೂರು ಮತ್ತು ಹಳೇ ಮದ್ರಾಸ್ ರಸ್ತೆ ಸವಾರರು: ಹೆಬ್ಬಾಳ ಕಡೆಗೆ ಹೋಗುವವರು ಹಲಸೂರು ಲೇಕ್ ಮೂಲಕ ಟಿನ್ ಫ್ಯಾಕ್ಟರಿ ಜಂಕ್ಷನ್ ತಲುಪಿ, ಅಲ್ಲಿಂದ ರಿಂಗ್ ರಸ್ತೆಯ ಮೂಲಕ ಹೆಬ್ಬಾಳ ಕಡೆಗೆ ಸಂಚರಿಸಬಹುದು.
-
ಆಶೀರ್ವಾದಂ ವೃತ್ತ ಹಾಗೂ ಎಂ.ಜಿ. ರಸ್ತೆ ಸವಾರರು: ಬಿ.ಆರ್.ವಿ ಜಂಕ್ಷನ್, ಶಿವಾಜಿನಗರ ಬಸ್ ನಿಲ್ದಾಣದ ಮೂಲಕ ಬಾಳೆಕುಂದ್ರಿ ಜಂಕ್ಷನ್, ಕನ್ನಿಂಗ್ ಹ್ಯಾಂ ರಸ್ತೆ, ವಸಂತನಗರದಿಂದ ಹೆಬ್ಬಾಳ ಕಡೆಗೆ ಸಂಚರಿಸಬಹುದು.
3. ವಾಹನಗಳ ನಿಲುಗಡೆ ನಿಷೇಧಿತ ಸ್ಥಳಗಳು (ನೋ ಪಾರ್ಕಿಂಗ್)
ಸುಗಮ ಸಂಚಾರಕ್ಕಾಗಿ ಕೆಳಕಂಡ ರಸ್ತೆಗಳ ಇಕ್ಕೆಲಗಳಲ್ಲಿ ವಾಹನಗಳ ನಿಲುಗಡೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ:
-
ಡಾ: ಬಿ.ಆರ್.ಅಂಬೇಡ್ಕರ್ ರಸ್ತೆ (ಬಾಳೇಕುಂದ್ರಿ ವೃತ್ತದಿಂದ ಕೆ.ಆರ್.ವೃತ್ತದ ವರೆಗೆ).
-
ಲೋಕಭವನ ರಸ್ತೆ (ಬಿ.ಆರ್.ವಿ. ವೃತ್ತದಿಂದ ಲೋಕಭವನ ಜಂಕ್ಷನ್ ವರೆಗೆ).
-
ಎಲ್.ಹೆಚ್.ರಸ್ತೆ (ಲೋಕಭವನ ಜಂಕ್ಷನ್ ನಿಂದ ಚಾಲುಕ್ಯ ವೃತ್ತದ ವರೆಗೆ).
-
ಕ್ವೀನ್ಸ್ ರಸ್ತೆ (ಬಾಳೇಕುಂದ್ರಿ ಜಂಕ್ಷನ್ನಿಂದ ಕ್ವೀನ್ಸ್ ವೃತ್ತದ ವರೆಗೆ).
-
ಪ್ಯಾಲೇಸ್ ರಸ್ತೆ (ಮೈಸೂರು ಬ್ಯಾಂಕ್ ವೃತ್ತದಿಂದ ವಸಂತನಗರ ಕೆಳಸೇತುವೆ ವರೆಗೆ).
-
ದೇವರಾಜ ಅರಸ್ ರಸ್ತೆ (ಚಾಲುಕ್ಯ ವೃತ್ತದಿಂದ ಎಂ.ಎಸ್.ಬಿಲ್ಡಿಂಗ್ ವರೆಗೆ ಒಳಭಾಗದ ರಸ್ತೆ ಸೇರಿ).
-
ರೇಸ್ ಕೋರ್ಸ್ ರಸ್ತೆ (ವಿಲೈಟ್ ಜಂಕ್ಷನ್ ನಿಂದ ಚಾಲುಕ್ಯ ವೃತ್ತದ ವರೆಗೆ).
-
ಪಾರ್ಕ್ ಹೌಸ್ ರಸ್ತೆ (ಎ.ಜಿ.ಎಸ್. ಜಂಕ್ಷನ್ ನಿಂದ ಸಿ.ಐ.ಡಿ. ವೃತ್ತದ ವರೆಗೆ).
-
ಕಬ್ಬನ್ ಉದ್ಯಾನವನದ ಒಳಭಾಗದ ಎಲ್ಲಾ ರಸ್ತೆಗಳು.
-
ಮಿಲ್ಲರ್ ರಸ್ತೆ (ಎಲ್.ಆರ್.ಡಿ.ಇ. ಜಂಕ್ಷನ್ ನಿಂದ ಬಸವೇಶ್ವರ ವೃತ್ತದ ವರೆಗೆ).
-
ಇನ್ಫೆಂಟ್ರಿ ರಸ್ತೆ (ಅಲಿ ಆಸ್ಕರ್ ರಸ್ತೆ ಜಂಕ್ಷನ್ ನಿಂದ ಟ್ರಾಫಿಕ್ ಹೆಡ್ ಕ್ವಾರ್ಟರ್ ಜಂಕ್ಷನ್ ವರೆಗೆ).
-
ಅಲಿ ಆಸ್ಕರ್ ರಸ್ತೆ (ರಾಜಭವನ ಜಂಕ್ಷನ್ ನಿಂದ ಅಲಿ ಕ್ರಾಸ್ ವರೆಗೆ).
-
ಕೆ.ಜಿ.ರಸ್ತೆ (ಪೊಲೀಸ್ ಕಾರ್ನರ್ ನಿಂದ ಮೈಸೂರು ಬ್ಯಾಂಕ್ ವೃತ್ತದ ವರೆಗೆ).
-
ಹಳೇ ಅಂಚೆ ಕಛೇರಿ ರಸ್ತೆ (ಮೈಸೂರು ಬ್ಯಾಂಕ್ ವೃತ್ತದಿಂದ ಕೆ.ಆರ್.ವೃತ್ತದ ವರೆಗೆ).
-
ನೃಪತುಂಗ ರಸ್ತೆ (ಕೆ.ಆರ್.ವೃತ್ತದಿಂದ ಪೊಲೀಸ್ ಕಾರ್ನರ್ ವರೆಗೆ).
-
ಕಸ್ತೂರಿಬಾ ರಸ್ತೆ (ಹಡ್ಸನ್ ವೃತ್ತದಿಂದ ಕ್ವೀನ್ಸ್ ವೃತ್ತದ ವರೆಗೆ).
-
ಮಲ್ಯ ಆಸ್ಪತ್ರೆ ರಸ್ತೆ (ಸಿದ್ಧಲಿಂಗಯ್ಯ ವೃತ್ತದಿಂದ ಆರ್.ಆರ್.ಎಂ.ಆರ್. ಜಂಕ್ಷನ್ ವರೆಗೆ).
-
ಆರ್.ಆರ್.ಎಂ.ಆರ್. ರಸ್ತೆ (ಆರ್.ಆರ್.ಎಂ.ಆರ್. ಜಂಕ್ಷನ್ ನಿಂದ ಹಡ್ಸನ್ ವೃತ್ತದ ವರೆಗೆ).
-
ಕಬ್ಬನ್ ರಸ್ತೆ (ಸಿ.ಟಿ.ಓ. ವೃತ್ತದಿಂದ ಮಣಿಪಾಲ್ ಸೆಂಟರ್ ವರೆಗೆ).
-
ಟಿ.ಚೌಡಯ್ಯ ರಸ್ತೆ (ಹಳೇ ಹೈಗ್ರೌಂಡ್ಸ್ ಜಂಕ್ಷನ್ ನಿಂದ ಕಾವೇರಿ ಜಂಕ್ಷನ್ ವರೆಗೆ).
-
ರಮಣ ಮಹರ್ಷಿ ರಸ್ತೆ (ಕಾವೇರಿ ಜಂಕ್ಷನ್ ನಿಂದ ಮೇಖ್ರಿ ವೃತ್ತದ ವರೆಗೆ).
4. ನಿಯೋಜಿತ ವಾಹನ ನಿಲುಗಡೆ ಸ್ಥಳಗಳು (ಪಾರ್ಕಿಂಗ್ ವ್ಯವಸ್ಥೆ)
ಎ) ಕಾರ್ಯಕ್ರಮಕ್ಕೆ ಬರುವ ಪಾಸ್ ಹೊಂದಿರುವ ವಾಹನಗಳು:
-
ವಿಧಾನಸೌಧದ ಸಿಮೆಂಟ್ ಪಾರ್ಕಿಂಗ್ ಸ್ಥಳ ಹಾಗೂ ವಿಕಾಸಸೌಧದ ಸುತ್ತಮುತ್ತಲಿನ ಪ್ರದೇಶಗಳು.
-
ರಾಜಭವನ ಹಿಂಭಾಗದ ಎಲ್.ಹೆಚ್. ವಾಹನ ನಿಲುಗಡೆ ಸ್ಥಳ.
-
ನೆಹರೂ ತಾರಾಲಯದ ಆವರಣ.
ಬಿ) ಕಾರ್ಯಕ್ರಮಕ್ಕೆ ಬರುವ ಪಾಸ್ ಹೊಂದಿಲ್ಲದ ವಾಹನಗಳು:
-
ಕೊಂಡಜ್ಜಿ ಭವನ ಆವರಣ.
-
ಶಿವಾಜಿನಗರ ಬಸ್ನಿಲ್ದಾಣದ ಮೇಲ್ಭಾಗದ ಮಲ್ಟಿಲೆವೆಲ್ ಪಾರ್ಕಿಂಗ್ ಸ್ಥಳ.
-
ಕಂಠೀರವ ಕ್ರೀಡಾಂಗಣ.
-
ಯು.ಬಿ. ಸಿಟಿ ಪಾರ್ಕಿಂಗ್ ಸ್ಥಳ.
-
ಸರ್ಕಾರಿ ಕಲಾ ಕಾಲೇಜು ಆವರಣ.
-
ಕಾರ್ಪೋರೇಷನ್ ಕಛೇರಿ ಸ್ಥಳ.
-
ಪ್ಯಾಲೇಸ್ ಮೈದಾನದ ಗೇಟ್ ನಂ. 2, 3 ಮತ್ತು 4 ರ ಆವರಣ.
5. ಭಾರೀ ವಾಹನಗಳ ಸಂಚಾರ ನಿಷೇಧ
ದಿನಾಂಕ: 03.06.2026 ರಂದು ಮಧ್ಯಾಹ್ನ 12:00 ಗಂಟೆಯಿಂದ ರಾತ್ರಿ 10:00 ಗಂಟೆಯವರೆಗೆ ಬೆಂಗಳೂರು ನಗರ ವ್ಯಾಪ್ತಿಯ ಪ್ರದೇಶದಲ್ಲಿ ಎಲ್ಲಾ ರೀತಿಯ ಭಾರೀ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಸಾರ್ವಜನಿಕರಲ್ಲಿ ವಿನಂತಿ: ಸಾರ್ವಜನಿಕರು ತಮ್ಮ ಪ್ರಯಾಣವನ್ನು ಮುಂಚಿತವಾಗಿ ಯೋಜಿಸಿಕೊಂಡು, ಸಂಚಾರ ನಿಷೇಧಿತ ಮಾರ್ಗಗಳನ್ನು ತಪ್ಪಿಸಿ, ಪೊಲೀಸ್ ಇಲಾಖೆ ಸೂಚಿಸಿರುವ ಪರ್ಯಾಯ ಮಾರ್ಗಗಳನ್ನು ಬಳಸುವ ಮೂಲಕ ಸುಗಮ ಸಂಚಾರಕ್ಕೆ ಸಹಕರಿಸಬೇಕಾಗಿ ಕೋರಲಾಗಿದೆ.








