ತುಮಕೂರು : ಕೆರೆಯಲ್ಲಿ ಈಜಲು ಹೋಗಿದ್ದ ವಿದ್ಯಾರ್ಥಿ ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಹೋಬಳಿಯ ದೇವರಮರಡಿ ಕೆರೆಯಲ್ಲಿ ಒಂದು ದುರ್ಘಟನೆ ನಡೆದಿದೆ.
ಮಜುರೆ ಗಿಲ್ಯನಾಯಕನ ತಂಡ ನಿವಾಸಿ ಗೌತಮ್ ಮೃತ ದುರ್ದೈವಿ ಎಂದು ತಿಳಿದುಬಂದಿದೆ. ನಿನ್ನೆ ಸಂಜೆ ಸಹೋದರ ಹಾಗೂ ಗೆಳೆಯರ ಜೊತೆಗೆ ಗೌತಮ್ ಕೆರೆ ತೆರಳಿದ್ದ ಈ ವೇಳೆ ಆಟವಾಡುತ್ತಾ ಕೆರೆಯಲ್ಲಿ ತೇಲುತ್ತಿದ್ದ ತೆಪ್ಪ ಹತ್ತಿದ್ದಾನೆ. ತೇಲುತ್ತಿದ್ದ ತೆಪ್ಪದ ಮೇಲೆ ಸಂಭ್ರಮಿಸುವಾಗ ಏಕಾಏಕಿ ತೆಪ್ಪಗೆ ಮಗುಚಿದೆ. ಈ ವೇಳೆ ಗೌತಮ್ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.








