Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಾರ್ವಜನಿಕರೇ ಗಮನಿಸಿ : ನಾಳೆಯಿಂದ ಬದಲಾಗಲಿದೆ ಈ 7 ಪ್ರಮುಖ ನಿಯಮಗಳು | Rule change 1st June

BIG NEWS : ದೇಶಾದ್ಯಂತ ಗೋಹತ್ಯೆ ನಿಷೇಧ ಪ್ರಸ್ತಾವನೆ ಇಲ್ಲ: ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್ ಸ್ಪಷ್ಟನೆ

BIG NEWS : ಮುಗಿದ ಬೇಸಿಗೆ ರಜೆ : ನಾಳೆಯಿಂದ ರಾಜ್ಯಾದ್ಯಂತ ಶಾಲೆ ಆರಂಭ : ಮಕ್ಕಳಿಗೆ ಹೂ ನೀಡಿ, ಸಿಹಿ ಹಂಚಿ ಸ್ವಾಗತಿಸಲು ಶಿಕ್ಷಣ ಇಲಾಖೆ ಸಕಲ ಸಿದ್ಧತೆ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ದೇಶಾದ್ಯಂತ ಗೋಹತ್ಯೆ ನಿಷೇಧ ಪ್ರಸ್ತಾವನೆ ಇಲ್ಲ: ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್ ಸ್ಪಷ್ಟನೆ
INDIA

BIG NEWS : ದೇಶಾದ್ಯಂತ ಗೋಹತ್ಯೆ ನಿಷೇಧ ಪ್ರಸ್ತಾವನೆ ಇಲ್ಲ: ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್ ಸ್ಪಷ್ಟನೆ

By kannadanewsnow57

ನವದೆಹಲಿ : ಭಾರತದಲ್ಲಿ ಗೋಹತ್ಯೆ ಸಂಪೂರ್ಣ ನಿಷೇಧ ಮತ್ತು ಹಸುವಿಗೆ ರಾಷ್ಟ್ರೀಯ ಪ್ರಾಣಿ ಸ್ಥಾನಮಾನ ನೀಡುವ ಕುರಿತು ಸೋಷಿಯಲ್ ಮೀಡಿಯಾ ಹಾಗೂ ಸಾರ್ವಜನಿಕ ವಲಯದಲ್ಲಿ ಆಗಾಗ ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಇದೀಗ ಈ ಎಲ್ಲಾ ಚರ್ಚೆಗಳಿಗೆ ಮತ್ತು ವದಂತಿಗಳಿಗೆ ಕೇಂದ್ರ ಸರ್ಕಾರ ಅಧಿಕೃತವಾಗಿ ತೆರೆ ಎಳೆದಿದೆ.

ದೇಶಾದ್ಯಂತ ಗೋಹತ್ಯೆಯನ್ನು ಸಂಪೂರ್ಣವಾಗಿ ಬ್ಯಾನ್ ಮಾಡುವ ಅಥವಾ ಹಸುವನ್ನು ರಾಷ್ಟ್ರಪ್ರಾಣಿ ಎಂದು ಘೋಷಿಸುವ ಯಾವುದೇ ಆಲೋಚನೆ ಸದ್ಯಕ್ಕಂತೂ ಸರ್ಕಾರದ ಮುಂದಿಲ್ಲ ಎಂದು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಖಡಕ್ ಆಗಿ ಸ್ಪಷ್ಟಪಡಿಸಿದ್ದಾರೆ.

ಇತ್ತೀಚೆಗೆ ಮಾಧ್ಯಮ ಸಂಸ್ಥೆಯೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಕಾನೂನು ಸಚಿವರು, “ಹಸುವಿಗೆ ರಾಷ್ಟ್ರೀಯ ಪ್ರಾಣಿಯ ಗೌರವ ಸಿಗಬೇಕು ಮತ್ತು ಗೋಹತ್ಯೆ ನಿಲ್ಲಬೇಕು ಎಂದು ಹಲವು ಸಂಘಟನೆಗಳು ನಿರಂತರವಾಗಿ ಆಗ್ರಹಿಸುತ್ತಿರುವುದು ನಿಜ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಕೇಂದ್ರ ಸಚಿವ ಸಂಪುಟದ ಮುಂದೆ ಇಂತಹ ಯಾವುದೇ ಪ್ರಸ್ತಾವನೆ ಪರಿಶೀಲನೆಯಲ್ಲಿ ಇಲ್ಲ” ಎಂದು ತಿಳಿಸಿದರು.

ಗೋಹತ್ಯೆ ತಡೆಗೆ ಸಂಬಂಧಿಸಿದಂತೆ ಕಾನೂನು ರೂಪಿಸುವ ಸಂಪೂರ್ಣ ಹಕ್ಕು ಆಯಾ ರಾಜ್ಯ ಸರ್ಕಾರಗಳಿಗೆ ಸೇರಿದ್ದಾಗಿದೆ ಎಂದು ಸಚಿವರು ನೆನಪಿಸಿದರು. ಪ್ರತಿಯೊಂದು ರಾಜ್ಯದ ಸ್ಥಳೀಯ ಕಾನೂನು ಸುವ್ಯವಸ್ಥೆ, ಭೌಗೋಳಿಕ ಪರಿಸ್ಥಿತಿ ಮತ್ತು ಜನರ ಅಗತ್ಯತೆಗಳನ್ನು ಆಧರಿಸಿ ಅಲ್ಲಿನ ಸರ್ಕಾರಗಳು ಈ ಬಗ್ಗೆ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳುತ್ತವೆ ಎಂದರು.

ಮುಸ್ಲಿಂ ಧರ್ಮಗುರುಗಳಿಂದಲೂ ಬೆಂಬಲ

ಇದೇ ವೇಳೆ ಒಂದು ಕುತೂಹಲಕಾರಿ ವಿಷಯವನ್ನು ಹಂಚಿಕೊಂಡ ಸಚಿವರು, “ಗೋಹತ್ಯೆಯನ್ನು ಸಂಪೂರ್ಣವಾಗಿ ತಡೆಗಟ್ಟಬೇಕು ಎನ್ನುವ ವಿಚಾರಕ್ಕೆ ಕೇವಲ ಹಿಂದೂ ಸಂಘಟನೆಗಳು ಮಾತ್ರವಲ್ಲದೆ, ಇತ್ತೀಚಿನ ದಿನಗಳಲ್ಲಿ ಹಲವು ಮುಸ್ಲಿಂ ಸಂಘಟನೆಗಳು ಹಾಗೂ ಇಸ್ಲಾಂ ಧರ್ಮಗುರುಗಳು ಕೂಡ ಮುಕ್ತವಾಗಿ ಬೆಂಬಲ ಸೂಚಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

BIG NEWS : No proposal to ban cow slaughter across the country: Union Minister Arjun Ram Meghwal clarifies
Share. Facebook Twitter LinkedIn WhatsApp Email

Related Posts

ಸಾರ್ವಜನಿಕರೇ ಗಮನಿಸಿ : ನಾಳೆಯಿಂದ ಬದಲಾಗಲಿದೆ ಈ 7 ಪ್ರಮುಖ ನಿಯಮಗಳು | Rule change 1st June

2 Mins Read

ಯುರೋಪಿಯನ್ ಫುಟ್ಬಾಲ್‌ನಲ್ಲಿ PSG ಹೊಸ ಇತಿಹಾಸ: ಸತತ ಎರಡನೇ ಬಾರಿ ಚಾಂಪಿಯನ್ಸ್ ಲೀಗ್ ಕಿರೀಟ!

1 Min Read

ಅಮೆರಿಕದ ಎಫ್-15 ಯುದ್ಧವಿಮಾನ ಪತನ: ಇರಾನ್‌ನಿಂದ ಚೀನಾ ನಿರ್ಮಿತ ಕ್ಷಿಪಣಿ ಬಳಕೆ?

1 Min Read
Recent News

ಸಾರ್ವಜನಿಕರೇ ಗಮನಿಸಿ : ನಾಳೆಯಿಂದ ಬದಲಾಗಲಿದೆ ಈ 7 ಪ್ರಮುಖ ನಿಯಮಗಳು | Rule change 1st June

BIG NEWS : ದೇಶಾದ್ಯಂತ ಗೋಹತ್ಯೆ ನಿಷೇಧ ಪ್ರಸ್ತಾವನೆ ಇಲ್ಲ: ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್ ಸ್ಪಷ್ಟನೆ

BIG NEWS : ಮುಗಿದ ಬೇಸಿಗೆ ರಜೆ : ನಾಳೆಯಿಂದ ರಾಜ್ಯಾದ್ಯಂತ ಶಾಲೆ ಆರಂಭ : ಮಕ್ಕಳಿಗೆ ಹೂ ನೀಡಿ, ಸಿಹಿ ಹಂಚಿ ಸ್ವಾಗತಿಸಲು ಶಿಕ್ಷಣ ಇಲಾಖೆ ಸಕಲ ಸಿದ್ಧತೆ

ಯುರೋಪಿಯನ್ ಫುಟ್ಬಾಲ್‌ನಲ್ಲಿ PSG ಹೊಸ ಇತಿಹಾಸ: ಸತತ ಎರಡನೇ ಬಾರಿ ಚಾಂಪಿಯನ್ಸ್ ಲೀಗ್ ಕಿರೀಟ!

State News
KARNATAKA

BIG NEWS : ಮುಗಿದ ಬೇಸಿಗೆ ರಜೆ : ನಾಳೆಯಿಂದ ರಾಜ್ಯಾದ್ಯಂತ ಶಾಲೆ ಆರಂಭ : ಮಕ್ಕಳಿಗೆ ಹೂ ನೀಡಿ, ಸಿಹಿ ಹಂಚಿ ಸ್ವಾಗತಿಸಲು ಶಿಕ್ಷಣ ಇಲಾಖೆ ಸಕಲ ಸಿದ್ಧತೆ

By kannadanewsnow57 KARNATAKA 2 Mins Read

ಬೆಂಗಳೂರು : ಬೇಸಿಗೆ ರಜೆಯ ಮಜ ಮುಗಿಸಿ ವಿದ್ಯಾರ್ಥಿಗಳು ಮತ್ತೆ ಶಾಲೆಯತ್ತ ಹೆಜ್ಜೆ ಇಡಲು ಸನ್ನದ್ಧರಾಗಿದ್ದಾರೆ. ರಾಜ್ಯಾದ್ಯಂತ ಜೂನ್ 1ರಿಂದಲೇ…

ಮನೆಬಾಗಿಲಿಗೆ ತಾಜಾ ಮಾವಿನ ಹಣ್ಣು: ಪಾರ್ಸೆಲ್ ಸೇವೆ ಆರಂಭಿಸಿದ ಅಂಚೆ ಇಲಾಖೆ

SHOCKING : ರಾಜ್ಯದಲ್ಲಿ ತಂಬಾಕು ಸೇವನೆಯಿಂದ ಒಂದೇ ವರ್ಷದಲ್ಲಿ 10 ಸಾವಿರ ಮಂದಿ ಕ್ಯಾನ್ಸರ್ ಗೆ ಬಲಿ : ಆಘಾತಕಾರಿ ವರದಿ

BIG NEWS : ಮನೆ ಮಾಲೀಕ ಮಾಡಿದ ಸಾಲಕ್ಕೆ ಬಾಡಿಗೆದಾರರು ಹೊಣೆಯಲ್ಲ : ಹೈಕೋರ್ಟ್ ಮಹತ್ವದ ತೀರ್ಪು

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.