Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಇಂದು ಅಹಮದಾಬಾದ್ ನಲ್ಲಿ 19ನೇ ಆವೃತ್ತಿಯ `IPL’ಫೈನಲ್ : `RCB’ಗೆ ಈ ಸಲವೂ ಸಿಗುತ್ತಾ ಕಪ್?

BIG NEWS : ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ ಫೇಸ್, ಲೊಕೇಶನ್ ಹಾಜರಾತಿ ಕಡ್ಡಾಯ : ಶಿಕ್ಷಣ ಇಲಾಖೆ ಮಹತ್ವದ ಆದೇಶ

BIG NEWS : ಜೂ.3ರ ಸಂಜೆ 4.05ಕ್ಕೆ ಕರ್ನಾಟಕದ 25ನೇ `CM’ ಆಗಿ ಡಿ.ಕೆ. ಶಿವಕುಮಾರ್ ಪ್ರಮಾಣ ವಚನ ಸ್ವೀಕಾರ.!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ ಫೇಸ್, ಲೊಕೇಶನ್ ಹಾಜರಾತಿ ಕಡ್ಡಾಯ : ಶಿಕ್ಷಣ ಇಲಾಖೆ ಮಹತ್ವದ ಆದೇಶ
KARNATAKA

BIG NEWS : ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ ಫೇಸ್, ಲೊಕೇಶನ್ ಹಾಜರಾತಿ ಕಡ್ಡಾಯ : ಶಿಕ್ಷಣ ಇಲಾಖೆ ಮಹತ್ವದ ಆದೇಶ

By kannadanewsnow57

ಬೆಂಗಳೂರು: ಇನ್ಮುಂದೆ ಸರ್ಕಾರಿ ಶಾಲೆಗಳ ಶಿಕ್ಷಕರು ಮತ್ತು ಸಿಬ್ಬಂದಿಗಳು ನಾನಾ ನೆಪಗಳನ್ನು ಹೇಳಿ ತಡವಾಗಿ ಶಾಲೆಗೆ ಬರುವಂತಿಲ್ಲ, ಹಾಗೆಯೇ ಹಾಜರಾತಿ ಪುಸ್ತಕದಲ್ಲಿ ಸಹಿ ಹಾಕಿ ಎಲ್ಲೆಂದರಲ್ಲಿ ಸುತ್ತಾಡುವ ಆಟ ಇನ್ನು ನಡೆಯುವುದಿಲ್ಲ. ಕರ್ತವ್ಯದ ಅವಧಿಯಲ್ಲಿ ಶಾಲೆಗೆ ಚಕ್ಕರ್ ಹೊಡೆಯುವ ಶಿಕ್ಷಕರಿಗೆ ಶಿಕ್ಷಣ ಇಲಾಖೆ ಬಿಗ್ ಶಾಕ್ ನೀಡಿದೆ.

ರಾಜ್ಯ ಶಿಕ್ಷಣ ಇಲಾಖೆಯು ಪ್ರಸಕ್ತ ಸಾಲಿನಿಂದ ಎಲ್ಲಾ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ತಂತ್ರಜ್ಞಾನ ಆಧಾರಿತ ಕಡ್ಡಾಯ ಹಾಜರಾತಿ ನಿಯಮವನ್ನು ಜಾರಿಗೆ ತಂದಿದೆ. ಇನ್ಮುಂದೆ ಶಿಕ್ಷಕರು ಶಾಲೆಗೆ ಬಂದು ತಮ್ಮ ಮುಖದ ಗುರುತು (Face Recognition) ಹಾಗೂ ಲೊಕೇಶನ್ (Location) ಆಧರಿಸಿ ಅಟೆಂಡೆನ್ಸ್ ಹಾಕಬೇಕಾಗುತ್ತದೆ. ಇದಕ್ಕಾಗಿ ಇಲಾಖೆಯು ‘ಕರ್ನಾಟಕ ಅಡ್ವಾನ್ಸ್ ಅಟೆಂಡೆನ್ಸ್ ಮ್ಯಾನೇಜ್‌ಮೆಂಟ್ ಸಿಸ್ಟಮ್’ (KAAMS – ಕೆಎಎಎಂಎಸ್) ಎಂಬ ವಿಶೇಷ ಆಪ್ ರೂಪಿಸಿದೆ.

ಕಳೆದ ಶುಕ್ರವಾರದಿಂದಲೇ ಈ ನೂತನ ತಂತ್ರಜ್ಞಾನ ರಾಜ್ಯಾದ್ಯಂತ ಅನುಷ್ಠಾನಕ್ಕೆ ಬಂದಿದ್ದು, ಶಿಕ್ಷಕರು ದಿನಕ್ಕೆ ಎರಡು ಬಾರಿ ಕಡ್ಡಾಯವಾಗಿ ಆಪ್ ಮೂಲಕವೇ ಹಾಜರಾತಿ ದಾಖಲಿಸಬೇಕಿದೆ. ನಿಗದಿತ ಸಮಯಕ್ಕಿಂತ ತಡವಾಗಿ ಬಂದರೆ ಆ ದಿನವನ್ನು ಆಕಸ್ಮಿಕ ರಜೆ (CL) ಎಂದು ಪರಿಗಣಿಸಲಾಗುತ್ತದೆ. ಸರ್ಕಾರದ ಈ ಕಟ್ಟುನಿಟ್ಟಿನ ಕ್ರಮವನ್ನು ಪೋಷಕರು ಮತ್ತು ಸಾರ್ವಜನಿಕ ವಲಯ ಮುಕ್ತಕಂಠದಿಂದ ಸ್ವಾಗತಿಸಿದೆ. ಇದರ ಬೆನ್ನಲ್ಲೇ ಮುಂಬರುವ ಒಂದೂವರೆ ತಿಂಗಳಲ್ಲಿ ವಿದ್ಯಾರ್ಥಿಗಳಿಗೂ ಎಐ (AI) ಆಧಾರಿತ ಹಾಜರಾತಿ ತರಲು ಸರ್ಕಾರ ಸಜ್ಜಾಗಿದೆ.

ಶಾಲೆಗೆ ಬೇಗ ಬರುವುದು ಮಾತ್ರವಲ್ಲ, ಅವಧಿಗೂ ಮುನ್ನವೇ ಲಾಗ್‌ ಔಟ್ ಮಾಡಿ ಮನೆಗೆ ಹೊರಟರೂ ಶಿಕ್ಷಕರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಶಾಲಾ ಸಮಯ ಮುಗಿಯುವ ಮುನ್ನವೇ ಲಾಗ್‌ಔಟ್ ಆಗುವುದನ್ನು ‘ಅವಧಿಗೂ ಮುನ್ನ ನಿರ್ಗಮನ’ (Early Departure) ಎಂದು ಪರಿಗಣಿಸಿ, ಅದನ್ನು ಕರ್ತವ್ಯ ಲೋಪ ಎಂದು ತೀರ್ಮಾನಿಸಲಾಗುತ್ತದೆ. ಇಂತಹ ಸಂದರ್ಭದಲ್ಲಿ ಅರ್ಧ ದಿನದ ರಜೆ ಕತ್ತರಿ ಬೀಳಲಿದೆ. ಯಾವುದೇ ಮುನ್ಸೂಚನೆ ಇಲ್ಲದೆ ಮಧ್ಯಾಹ್ನದ ವೇಳೆಗೆ ಚೆಕ್‌ ಔಟ್ ಆದಲ್ಲಿ, ಆ ದಿನದ ದ್ವಿತೀಯಾರ್ಧವನ್ನು ಅರ್ಧ ದಿನದ ಆಕಸ್ಮಿಕ ರಜೆ (CL) ಎಂದು ದಾಖಲಿಸಲಾಗುತ್ತದೆ. ಒಂದು ವೇಳೆ ಶಿಕ್ಷಕರ ಖಾತೆಯಲ್ಲಿ ಸಿಎಲ್ ಬಾಕಿ ಇಲ್ಲದಿದ್ದರೆ, ಅದನ್ನು ಗಳಿಕೆ ರಜೆ (EL) ಅಥವಾ ವೇತನ ರಹಿತ ರಜೆ (LWP) ಎಂದು ಕಟಾವಣೆ ಮಾಡಲಾಗುತ್ತದೆ.

ಒಂದು ತಿಂಗಳಿನಲ್ಲಿ ಮೂರು ಬಾರಿ ತಡವಾಗಿ ಬರುವುದು ಅಥವಾ ಬೇಗ ಮನೆಗೆ ಹೋಗುವುದು ಪತ್ತೆಯಾದರೆ, ನೇರವಾಗಿ ಒಂದು ದಿನದ ಆಕಸ್ಮಿಕ ರಜೆಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ನಿಯಮ ಮೀರಿ ಪದೇ ಪದೇ ಹೀಗೆ ಮಾಡಿದರೆ ಅದನ್ನು ‘ಅನಧಿಕೃತ ಗೈರುಹಾಜರಿ’ ಎಂದು ಪರಿಗಣಿಸಿ ಬಿಇಒ (BEO) ಅಥವಾ ಡಿಡಿಪಿಐ (DDPI) ಮಟ್ಟದಲ್ಲಿ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗುತ್ತದೆ.

BIG NEWS : Face location attendance mandatory for state government school teachers : Education Department issues important order
Share. Facebook Twitter LinkedIn WhatsApp Email

Related Posts

ಇಂದು ಅಹಮದಾಬಾದ್ ನಲ್ಲಿ 19ನೇ ಆವೃತ್ತಿಯ `IPL’ಫೈನಲ್ : `RCB’ಗೆ ಈ ಸಲವೂ ಸಿಗುತ್ತಾ ಕಪ್?

2 Mins Read

BIG NEWS : ಜೂ.3ರ ಸಂಜೆ 4.05ಕ್ಕೆ ಕರ್ನಾಟಕದ 25ನೇ `CM’ ಆಗಿ ಡಿ.ಕೆ. ಶಿವಕುಮಾರ್ ಪ್ರಮಾಣ ವಚನ ಸ್ವೀಕಾರ.!

2 Mins Read

ಶಿವಮೊಗ್ಗ: ಹೊಸನಗರದ ಹಿರಿಯ ಪತ್ರಕರ್ತ ರವಿಬಿದನೂರಿಗೆ ಪ್ರತಿಷ್ಠಿತ ‘ಕರ್ಪೂರಿ ಠಾಕೂರ್ ಪ್ರಶಸ್ತಿ’

2 Mins Read
Recent News

ಇಂದು ಅಹಮದಾಬಾದ್ ನಲ್ಲಿ 19ನೇ ಆವೃತ್ತಿಯ `IPL’ಫೈನಲ್ : `RCB’ಗೆ ಈ ಸಲವೂ ಸಿಗುತ್ತಾ ಕಪ್?

BIG NEWS : ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ ಫೇಸ್, ಲೊಕೇಶನ್ ಹಾಜರಾತಿ ಕಡ್ಡಾಯ : ಶಿಕ್ಷಣ ಇಲಾಖೆ ಮಹತ್ವದ ಆದೇಶ

BIG NEWS : ಜೂ.3ರ ಸಂಜೆ 4.05ಕ್ಕೆ ಕರ್ನಾಟಕದ 25ನೇ `CM’ ಆಗಿ ಡಿ.ಕೆ. ಶಿವಕುಮಾರ್ ಪ್ರಮಾಣ ವಚನ ಸ್ವೀಕಾರ.!

ಶಿವಮೊಗ್ಗ: ಹೊಸನಗರದ ಹಿರಿಯ ಪತ್ರಕರ್ತ ರವಿಬಿದನೂರಿಗೆ ಪ್ರತಿಷ್ಠಿತ ‘ಕರ್ಪೂರಿ ಠಾಕೂರ್ ಪ್ರಶಸ್ತಿ’

State News
KARNATAKA

ಇಂದು ಅಹಮದಾಬಾದ್ ನಲ್ಲಿ 19ನೇ ಆವೃತ್ತಿಯ `IPL’ಫೈನಲ್ : `RCB’ಗೆ ಈ ಸಲವೂ ಸಿಗುತ್ತಾ ಕಪ್?

By kannadanewsnow57 KARNATAKA 2 Mins Read

ಅಹಮದಾಬಾದ್: ಇಂದು ಅಹಮದಾಬಾದ್‌ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ 19ನೇ ಆವೃತ್ತಿಯ ಐಪಿಎಲ್ ಪ್ರಶಸ್ತಿಗಾಗಿ ಭರ್ಜರಿ ಫೈನಲ್ ಪಂದ್ಯ ನಡೆಯಲಿದ್ದು,…

BIG NEWS : ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ ಫೇಸ್, ಲೊಕೇಶನ್ ಹಾಜರಾತಿ ಕಡ್ಡಾಯ : ಶಿಕ್ಷಣ ಇಲಾಖೆ ಮಹತ್ವದ ಆದೇಶ

BIG NEWS : ಜೂ.3ರ ಸಂಜೆ 4.05ಕ್ಕೆ ಕರ್ನಾಟಕದ 25ನೇ `CM’ ಆಗಿ ಡಿ.ಕೆ. ಶಿವಕುಮಾರ್ ಪ್ರಮಾಣ ವಚನ ಸ್ವೀಕಾರ.!

ಶಿವಮೊಗ್ಗ: ಹೊಸನಗರದ ಹಿರಿಯ ಪತ್ರಕರ್ತ ರವಿಬಿದನೂರಿಗೆ ಪ್ರತಿಷ್ಠಿತ ‘ಕರ್ಪೂರಿ ಠಾಕೂರ್ ಪ್ರಶಸ್ತಿ’

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.