Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಈಶ್ವರ್ ಖಂಡ್ರೆಗೆ ಒಲಿಯಲಿ ಡಿಸಿಎಂ ಪಟ್ಟ : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ – ರಾಷ್ಟ್ರೀಯ ಯುವ ಘಟಕ ಆಗ್ರಹ

BREAKING : ಜೂ.3ರಂದು ಸಂಜೆ 5:15ಕ್ಕೆ, ವೃಶ್ಚಿಕ ಲಗ್ನದಲ್ಲಿ ಡಿಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕಾರ!

BREAKING : ISI, ದಾವೂದ್ ಜೊತೆ ಲಿಂಕ್ : ಭಾರತದಾದ್ಯಂತ ದಾಳಿಗೆ ಸಂಚು ರೂಪಿಸಿದ್ದ 9 ಮಂದಿ ಅರೆಸ್ಟ್.!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಜೂ.3ರಂದು ಸಂಜೆ 5:15ಕ್ಕೆ, ವೃಶ್ಚಿಕ ಲಗ್ನದಲ್ಲಿ ಡಿಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕಾರ!
KARNATAKA

BREAKING : ಜೂ.3ರಂದು ಸಂಜೆ 5:15ಕ್ಕೆ, ವೃಶ್ಚಿಕ ಲಗ್ನದಲ್ಲಿ ಡಿಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕಾರ!

By ಸುರೇಶ್‌

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಕೊನೆಗೂ ಮುಹೂರ್ತ ನಿಗದಿಯಾಗಿದೆ. ಅಂದುಕೊಂಡಂತೆ ಮುಂಬರುವ ಜೂನ್ 3ರ ಬುಧವಾರದಂದು ಡಿ.ಕೆ. ಶಿವಕುಮಾರ್ ಅವರು ಅಧಿಕಾರ ಸ್ವೀಕರಿಸಲಿದ್ದಾರೆ. ಈ ಮಹತ್ವದ ಬೆಳವಣಿಗೆಯಿಂದಾಗಿ ಕೈ ಪಾಳಯದಲ್ಲಿ ಹಾಗೂ ಅವರ ಅಭಿಮಾನಿಗಳಲ್ಲಿ ಸಡಗರ ಮನೆಮಾಡಿದೆ.

ರಾಜಭವನದಲ್ಲಿ ಈ ಭವ್ಯ ಕಾರ್ಯಕ್ರಮ ಆಯೋಜನೆಯಾಗಿದ್ದು, ಸಂಜೆ 5:15ರ ವೃಶ್ಚಿಕ ಲಗ್ನದಲ್ಲಿ ಡಿ.ಕೆ. ಶಿವಕುಮಾರ್ ಅವರು ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಪ್ರಖ್ಯಾತ ವಾಸ್ತು ಗುರೂಜಿ ಆರಾಧ್ಯ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಈ ಲಗ್ನವು ಅತ್ಯಂತ ಶುಭದಾಯಕವಾಗಿದ್ದು, ಅವರ ರಾಜಕೀಯ ಭವಿಷ್ಯಕ್ಕೆ ಮತ್ತಷ್ಟು ಶಕ್ತಿ ತುಂಬಲಿದೆ ಎಂದು ಜ್ಯೋತಿಷ್ಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

ಇನ್ನು ಈ ಸಮಾರಂಭದಲ್ಲಿ ಕೇವಲ ಡಿ.ಕೆ. ಶಿವಕುಮಾರ್ ಮಾತ್ರವಲ್ಲದೆ, ಅವರೊಂದಿಗೆ ಸರಿಸುಮಾರು 14 ನೂತನ ಸಚಿವರು ಕೂಡ ಪ್ರಮಾಣವಚನ ಸ್ವೀಕರಿಸುವ ಬಲವಾದ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಸಚಿವ ಸಂಪುಟ ಸೇರಲಿರುವ ಶಾಸಕರ ಪಟ್ಟಿ ಈಗಾಗಲೇ ಅಂತಿಮ ಹಂತ ತಲುಪಿದ್ದು, ಹೈಕಮಾಂಡ್‌ನಿಂದ ಹಸಿರು ನಿಶಾನೆ ಸಿಕ್ಕ ಬೆನ್ನಲ್ಲೇ ಈ ನಾಯಕರ ಹೆಸರುಗಳು ಅಧಿಕೃತವಾಗಿ ಹೊರಬೀಳಲಿವೆ.

ರಾಜಭವನದ ಲೋಕಭವನದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಇದಕ್ಕಾಗಿ ಈಗಾಗಲೇ ಭರದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಭದ್ರತೆ ಹಾಗೂ ಆಸನಗಳ ವ್ಯವಸ್ಥೆಯನ್ನು ಪರಿಶೀಲಿಸುತ್ತಿದ್ದಾರೆ. ಗಣ್ಯರು, ರಾಜಕೀಯ ಮುಖಂಡರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಇರುವುದರಿಂದ ಯಾವುದೇ ಲೋಪದೋಷಗಳಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ.

Share. Facebook Twitter LinkedIn WhatsApp Email

Related Posts

ಈಶ್ವರ್ ಖಂಡ್ರೆಗೆ ಒಲಿಯಲಿ ಡಿಸಿಎಂ ಪಟ್ಟ : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ – ರಾಷ್ಟ್ರೀಯ ಯುವ ಘಟಕ ಆಗ್ರಹ

2 Mins Read

BREAKING : ಜೂ. 3ಕ್ಕೆ ಡಿಕೆ ಶಿವಕುಮಾರ್ ಪ್ರಮಾಣವಚನ ಸ್ವೀಕಾರ : 14 ಹೊಸ ಮುಖಗಳಿಗೆ ಮಣೆ ಹಾಕುವ ಸಾಧ್ಯತೆ!

1 Min Read

BIG NEWS : ರಾಜ್ಯದ ಸರ್ಕಾರಿ ಶಾಲೆಗಳ ಬಿಸಿಯೂಟಕ್ಕೆ `LPG ಸಿಲಿಂಡರ್’ ಕೊರತೆಯಾಗದಂತೆ ನೋಡಿಕೊಳ್ಳಿ : ಸರ್ಕಾರದಿಂದ ಮಹತ್ವದ ಆದೇಶ

1 Min Read
Recent News

ಈಶ್ವರ್ ಖಂಡ್ರೆಗೆ ಒಲಿಯಲಿ ಡಿಸಿಎಂ ಪಟ್ಟ : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ – ರಾಷ್ಟ್ರೀಯ ಯುವ ಘಟಕ ಆಗ್ರಹ

BREAKING : ಜೂ.3ರಂದು ಸಂಜೆ 5:15ಕ್ಕೆ, ವೃಶ್ಚಿಕ ಲಗ್ನದಲ್ಲಿ ಡಿಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕಾರ!

BREAKING : ISI, ದಾವೂದ್ ಜೊತೆ ಲಿಂಕ್ : ಭಾರತದಾದ್ಯಂತ ದಾಳಿಗೆ ಸಂಚು ರೂಪಿಸಿದ್ದ 9 ಮಂದಿ ಅರೆಸ್ಟ್.!

BREAKING : ಜೂ. 3ಕ್ಕೆ ಡಿಕೆ ಶಿವಕುಮಾರ್ ಪ್ರಮಾಣವಚನ ಸ್ವೀಕಾರ : 14 ಹೊಸ ಮುಖಗಳಿಗೆ ಮಣೆ ಹಾಕುವ ಸಾಧ್ಯತೆ!

State News
KARNATAKA

ಈಶ್ವರ್ ಖಂಡ್ರೆಗೆ ಒಲಿಯಲಿ ಡಿಸಿಎಂ ಪಟ್ಟ : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ – ರಾಷ್ಟ್ರೀಯ ಯುವ ಘಟಕ ಆಗ್ರಹ

By ಸುರೇಶ್‌ KARNATAKA 2 Mins Read

ಬೆಂಗಳೂರು:* ರಾಜ್ಯ ಸರ್ಕಾರದ ಸಂಪುಟ ಪುನರಚನೆ ವೇಳೆಯಲ್ಲಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಹೆಚ್ಚಿನ ಪ್ರಾತಿನಿಧ್ಯವನ್ನು ನೀಡಬೇಕೆಂದು *ಅಖಿಲ ಭಾರತ ವೀರಶೈವ…

BREAKING : ಜೂ.3ರಂದು ಸಂಜೆ 5:15ಕ್ಕೆ, ವೃಶ್ಚಿಕ ಲಗ್ನದಲ್ಲಿ ಡಿಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕಾರ!

BREAKING : ಜೂ. 3ಕ್ಕೆ ಡಿಕೆ ಶಿವಕುಮಾರ್ ಪ್ರಮಾಣವಚನ ಸ್ವೀಕಾರ : 14 ಹೊಸ ಮುಖಗಳಿಗೆ ಮಣೆ ಹಾಕುವ ಸಾಧ್ಯತೆ!

BIG NEWS : ರಾಜ್ಯದ ಸರ್ಕಾರಿ ಶಾಲೆಗಳ ಬಿಸಿಯೂಟಕ್ಕೆ `LPG ಸಿಲಿಂಡರ್’ ಕೊರತೆಯಾಗದಂತೆ ನೋಡಿಕೊಳ್ಳಿ : ಸರ್ಕಾರದಿಂದ ಮಹತ್ವದ ಆದೇಶ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.