Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಇಂದು ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡುವುದು ಡೌಟ್ : ಕಾರಣ ಇಲ್ಲಿದೆ!

ಶ್ರೀಲಂಕಾಗೆ ಪ್ರವೇಶಿಸಿದ ಮುಂಗಾರು: ಭಾರತದತ್ತ ಪಯಣ, ಕೇರಳದಲ್ಲಿ ಯಾವಾಗ ಆಗಮನ?

BREAKING : ಶಿವಾನಂದ ನೀಲಣ್ಣವರ್‌ಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ: ಹಿಂಡಲಗಾ ಜೈಲಿಗೆ ಶಿಫ್ಟ್!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಶ್ರೀಲಂಕಾಗೆ ಪ್ರವೇಶಿಸಿದ ಮುಂಗಾರು: ಭಾರತದತ್ತ ಪಯಣ, ಕೇರಳದಲ್ಲಿ ಯಾವಾಗ ಆಗಮನ?
INDIA

ಶ್ರೀಲಂಕಾಗೆ ಪ್ರವೇಶಿಸಿದ ಮುಂಗಾರು: ಭಾರತದತ್ತ ಪಯಣ, ಕೇರಳದಲ್ಲಿ ಯಾವಾಗ ಆಗಮನ?

By ಗೋಪಾಲ್‌ ಎನ್‌

ನವದೆಹಲಿ: ಶ್ರೀಲಂಕಾದಲ್ಲಿ ಸಂಪೂರ್ಣವಾಗಿ ನೆಲೆಗೊಂಡಿರುವ ನೈಋತ್ಯ ಮುಂಗಾರು, ಇದೀಗ ಭಾರತದತ್ತ ತನ್ನ ಪಯಣವನ್ನು ಮುಂದುವರಿಸಿದೆ. ಶ್ರೀಲಂಕಾವು ಭಾರತದ ದಕ್ಷಿಣಕ್ಕೆ ಇರುವುದರಿಂದ, ಅಲ್ಲಿ ಮುಂಗಾರು ಸಕ್ರಿಯಗೊಂಡರೆ ಮುಂದಿನ ಕೆಲವೇ ದಿನಗಳಲ್ಲಿ ಅದು ಕೇರಳವನ್ನು ತಲುಪುತ್ತದೆ ಎಂಬುದು ಹವಾಮಾನ ತಜ್ಞರ ಅಂಬೋಣ.

ಉತ್ತರ ಭಾರತವು ತೀವ್ರತರವಾದ ಬಿಸಿಗಾಳಿಯ ಹೊಡೆತಕ್ಕೆ ಸಿಲುಕಿದ್ದರೆ, ದಕ್ಷಿಣದ ರಾಜ್ಯಗಳಲ್ಲಿ ಮುಂಗಾರು ಪೂರ್ವ ಚಟುವಟಿಕೆಗಳಿಂದಾಗಿ ತೇವಾಂಶದ ಪ್ರಮಾಣ ಹೆಚ್ಚಾಗುತ್ತಿದೆ. ಮುಂಗಾರು ಮಳೆಯ ಆಗಮನಕ್ಕಾಗಿ ದೇಶ ಕಾಯುತ್ತಿದ್ದು, ಕೇರಳದಲ್ಲಿ ಮೇ 26ರ ಸುಮಾರಿಗೆ ಮಳೆಯಾಗಲಿದೆ ಎಂಬ ಮುನ್ಸೂಚನೆ ಇತ್ತು. ಆದರೆ, ಭಾರತೀಯ ಹವಾಮಾನ ಇಲಾಖೆಯು (IMD) ಸದ್ಯದ ಪರಿಸ್ಥಿತಿಯನ್ನು ಗಮನಿಸಿದಾಗ, ಮುಂಗಾರು ಕೇರಳ ಪ್ರವೇಶಿಸಲು ಮೂರರಿಂದ ನಾಲ್ಕು ದಿನಗಳ ವಿಳಂಬವಾಗಬಹುದು ಮತ್ತು ಅದು ಜೂನ್ ಆರಂಭದಲ್ಲಿ ಆಗಮಿಸುವ ಸಾಧ್ಯತೆಯಿದೆ ಎಂದು ತಿಳಿಸಿದೆ.

ಸಾಮಾನ್ಯವಾಗಿ ಜೂನ್ 1ರಂದು ಕೇರಳವನ್ನು ಪ್ರವೇಶಿಸುವ ಮೂಲಕ ಮುಂಗಾರು ಭಾರತದ ಮುಖ್ಯ ಭೂಭಾಗವನ್ನು ತಲುಪುತ್ತದೆ. ಈ ಹಿಂದೆ ಮೇ ತಿಂಗಳಲ್ಲೇ ಮುಂಗಾರು ಆಗಮಿಸಿದ್ದ ಉದಾಹರಣೆಗಳಿದ್ದರಿಂದ ಈ ಬಾರಿ ಮುಂಚಿತವಾಗಿಯೇ ಮಳೆ ಬರಬಹುದೆಂಬ ನಿರೀಕ್ಷೆ ಇತ್ತು. ಆದರೆ, ಐಎಂಡಿಯ ಇತ್ತೀಚಿನ ಹವಾಮಾನ ವರದಿಯ ಪ್ರಕಾರ, ಬುಧವಾರದ ವೇಳೆಗೆ ನೈಋತ್ಯ ಮುಂಗಾರು ಅರಬ್ಬಿ ಸಮುದ್ರದ ಹೆಚ್ಚಿನ ಭಾಗಗಳು, ಲಕ್ಷದ್ವೀಪದ ಕೆಲವು ಪ್ರದೇಶಗಳು, ಅಂಡಮಾನ್ ಸಮುದ್ರ ಮತ್ತು ಪಶ್ಚಿಮ-ಮಧ್ಯ ಬಂಗಾಳ ಕೊಲ್ಲಿಯ ಹಲವು ಪ್ರದೇಶಗಳಿಗೆ ವಿಸ್ತರಿಸಿದೆ.
​ಮುಂದಿನ 2-3 ದಿನಗಳಲ್ಲಿ ಅರಬ್ಬಿ ಸಮುದ್ರ, ಲಕ್ಷದ್ವೀಪ ಮತ್ತು ಬಂಗಾಳ ಕೊಲ್ಲಿಯ ವಿವಿಧ ಭಾಗಗಳಿಗೆ ಮುಂಗಾರು ಮತ್ತಷ್ಟು ವಿಸ್ತರಿಸಲು ಹವಾಮಾನ ಪರಿಸ್ಥಿತಿಗಳು ಅನುಕೂಲಕರವಾಗಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ನಕ್ಷೆಯ ಪ್ರಕಾರ, ಈ ವ್ಯವಸ್ಥೆಯು ಈಗಾಗಲೇ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ಆವರಿಸಿಕೊಂಡಿದ್ದು, ಕ್ರಮೇಣ ಉತ್ತರ ದಿಕ್ಕಿನತ್ತ ಚಲಿಸುತ್ತಿದೆ.
​ಅರಬ್ಬಿ ಸಮುದ್ರದಲ್ಲಿನ ಹವಾಮಾನದ ಬೆಳವಣಿಗೆಯನ್ನು ಆಧರಿಸಿ, ನೈಋತ್ಯ ಮುಂಗಾರು ಮೇ 28ರಿಂದ ಜೂನ್ 3ರ ಒಳಗಾಗಿ ಕೇರಳವನ್ನು ತಲುಪುವ ನಿರೀಕ್ಷೆಯಿದೆ.

Heads To India; When Is Onset Expected In Kerala? Monsoon Arrives In Sri Lanka
Share. Facebook Twitter LinkedIn WhatsApp Email

Related Posts

ಚಂದ್ರಯಾನ-2 ರೇಡಾರ್ ಅಧ್ಯಯನ: ಚಂದ್ರನ ದಕ್ಷಿಣ ಧ್ರುವದ ಅಡಿಯಲ್ಲಿ ಮಂಜುಗಡ್ಡೆಯ ಸುಳಿವು

2 Mins Read

NEET ಪೇಪರ್ ಸೋರಿಕೆ ಪ್ರಕರಣ: ಲಾತೂರ್‌ನ ವೈದ್ಯ, ಪುಣೆಯ ಶಿಕ್ಷಕ ಸೇರಿ 13 ಮಂದಿ ಸಿಬಿಐ ಬಲೆಗೆ !

1 Min Read

ಭಾರತದಲ್ಲಿ ತೀವ್ರ ಬಿಸಿಗಾಳಿ: ಮುನ್ನೆಚ್ಚರಿಕೆ ವಹಿಸುವಂತೆ ಪ್ರಧಾನಿ ಮೋದಿ ಕರೆ | Heat Wave

2 Mins Read
Recent News

BREAKING : ಇಂದು ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡುವುದು ಡೌಟ್ : ಕಾರಣ ಇಲ್ಲಿದೆ!

ಶ್ರೀಲಂಕಾಗೆ ಪ್ರವೇಶಿಸಿದ ಮುಂಗಾರು: ಭಾರತದತ್ತ ಪಯಣ, ಕೇರಳದಲ್ಲಿ ಯಾವಾಗ ಆಗಮನ?

BREAKING : ಶಿವಾನಂದ ನೀಲಣ್ಣವರ್‌ಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ: ಹಿಂಡಲಗಾ ಜೈಲಿಗೆ ಶಿಫ್ಟ್!

ಚಂದ್ರಯಾನ-2 ರೇಡಾರ್ ಅಧ್ಯಯನ: ಚಂದ್ರನ ದಕ್ಷಿಣ ಧ್ರುವದ ಅಡಿಯಲ್ಲಿ ಮಂಜುಗಡ್ಡೆಯ ಸುಳಿವು

State News
KARNATAKA

BREAKING : ಇಂದು ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡುವುದು ಡೌಟ್ : ಕಾರಣ ಇಲ್ಲಿದೆ!

By ಸುರೇಶ್‌ KARNATAKA 1 Min Read

ಬೆಂಗಳೂರು : ಇಂದು ಬೆಳಿಗ್ಗೆ 10:30ಕ್ಕೆ ಸಿಎಂ ಸಿದ್ದರಾಮಯ್ಯ ಆದರೆ ಸಂಪುಟದ ಎಲ್ಲಾ ಸಚಿವರಿಗೂ ಉಪಹಾರ ಕೂಟ ಆಯೋಜನೆ ಮಾಡಿದ್ದು…

BREAKING : ಶಿವಾನಂದ ನೀಲಣ್ಣವರ್‌ಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ: ಹಿಂಡಲಗಾ ಜೈಲಿಗೆ ಶಿಫ್ಟ್!

ಸಾಗರದ IPL ಪ್ರಿಯರಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಬಿಗ್ ಗಿಫ್ಟ್: ಮೇ.31ರಂದು ಫೈನಲ್ ಪಂದ್ಯ ವೀಕ್ಷಣೆಗೆ ಎಲ್‌ಇಡಿ ಪರದೆ ವ್ಯವಸ್ಥೆ!

ಸಾಗರದ ನೂತನ ತಹಶೀಲ್ದಾರ್ ಆಗಿ ಡಾ.ಪ್ರತಿಭಾ.ಆರ್ ನೇಮಿಸಿ ಸರ್ಕಾರ ಆದೇಶ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.