ಪ್ರತಿದಿನ ನಾವು ಎದುರಿಸುವ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಕೆಲವೊಮ್ಮೆ ದೊಡ್ಡ ಕಾಯಿಲೆಯ ಮುನ್ಸೂಚನೆ ಆಗಿರುತ್ತವೆ. ಸಾಮಾನ್ಯವಾಗಿ ಮೂತ್ರ ವಿಸರ್ಜನೆ ಮಾಡುವಾಗ ಉರಿ ಕಾಣಿಸಿಕೊಂಡರೆ ಅಥವಾ ಪದೇ ಪದೇ ಮೂತ್ರಕ್ಕೆ ಹೋಗಬೇಕಾಗಿ ಬಂದರೆ, ನಾವೆಲ್ಲರೂ ಅದನ್ನು ಸಾಮಾನ್ಯ ‘ಯೂರಿನ್ ಇನ್ಫೆಕ್ಷನ್’ (UTI) ಎಂದು ನಿರ್ಲಕ್ಷಿಸುತ್ತೇವೆ. ಆದರೆ, ಮೆಡಿಕಲ್ ಲೋಕದ ತಜ್ಞರು ನೀಡುತ್ತಿರುವ ಶಾಕಿಂಗ್ ಮಾಹಿತಿ ಏನೆಂದರೆ, ಇಂತಹ ಲಕ್ಷಣಗಳು ಪ್ರಾಣಾಂತಕ ಮೂತ್ರಕೋಶದ ಕ್ಯಾನ್ಸರ್ (Bladder Cancer) ನ ಆರಂಭಿಕ ಸೂಚನೆಗಳೂ ಆಗಿರಬಹುದು!
ವೈದ್ಯರ ಬಳಿ ಬರುವ ಬಹುತೇಕ ರೋಗಿಗಳು “ಇದು ಮಾಮೂಲಿ ಇನ್ಫೆಕ್ಷನ್ ಅನ್ಕೊಂಡಿದ್ವಿ ಡಾಕ್ಟರ್” ಎಂದು ಹೇಳುತ್ತಾರಂತೆ. ಇಂತಹ ಉದಾಸೀನತೆಯೇ ಮುಂದೆ ಜೀವಕ್ಕೆ ಕುತ್ತು ತರುತ್ತದೆ. ಹಾಗಾದರೆ, ಸಾಮಾನ್ಯ ಸೋಂಕು ಮತ್ತು ಕ್ಯಾನ್ಸರ್ ನಡುವಿನ ವ್ಯತ್ಯಾಸವೇನು? ಯಾವ ಲಕ್ಷಣಗಳನ್ನು ನಾವು ಮಿಸ್ ಮಾಡಲೇಬಾರದು?
ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.
ಕ್ಯಾನ್ಸರ್ ಲಕ್ಷಣಗಳು ಮರೆಯಾಗುವುದು ಏಕೆ?
ಮೂತ್ರಪಿಂಡದ ವ್ಯವಸ್ಥೆಯಲ್ಲಿ ಕಾಣಿಸಿಕೊಳ್ಳುವ ಅತ್ಯಂತ ವಿಲಕ್ಷಣ ಕ್ಯಾನ್ಸರ್ ಎಂದರೆ ಅದು ಬ್ಲಾಡರ್ ಕ್ಯಾನ್ಸರ್. ಇದು ಆರಂಭದಲ್ಲಿ ಸಾಮಾನ್ಯ ಇನ್ಫೆಕ್ಷನ್ನಂತೆಯೇ ವರ್ತಿಸುವುದರಿಂದ ಜನರನ್ನು ಸುಲಭವಾಗಿ ಹಾದಿ ತಪ್ಪಿಸುತ್ತದೆ.
ಜನರು ಡಾಕ್ಟರ್ ಸಲಹೆ ಇಲ್ಲದೆ ತಾವೇ ಆಂಟಿಬಯಾಟಿಕ್ಸ್ ಮಾತ್ರೆಗಳನ್ನು ನುಂಗುತ್ತಾರೆ. ಇದರಿಂದ ತಾತ್ಕಾಲಿಕವಾಗಿ ನೋವು ಅಥವಾ ಉರಿ ಕಡಿಮೆಯಾಗಬಹುದು, ಆದರೆ ಒಳಗಿರುವ ಕ್ಯಾನ್ಸರ್ ಗಡ್ಡೆ (Tumour) ಮಾತ್ರ ಹಾಗೆಯೇ ಬೆಳೆಯುತ್ತಿರುತ್ತದೆ.
ಇವರಿಗೆ ಅಪಾಯದ ಸಾಧ್ಯತೆ ಹೆಚ್ಚು!
50 ವರ್ಷ ಮೇಲ್ಪಟ್ಟ ಪುರುಷರು: ವಯಸ್ಸಾಗುತ್ತಿದ್ದಂತೆ ಈ ಕಾಯಿಲೆಯ ರಿಸ್ಕ್ ಹೆಚ್ಚಿರುತ್ತದೆ.
ಧೂಮಪಾನಿಗಳು: ಸಿಗರೇಟ್ ಸೇವಿಸುವವರಲ್ಲಿ ಈ ಕ್ಯಾನ್ಸರ್ ಬರುವ ಸಾಧ್ಯತೆ ತೀರಾ ಹೆಚ್ಚು.
ಕೈಗಾರಿಕಾ ಕಾರ್ಮಿಕರು: ಕೆಮಿಕಲ್ಸ್, ಪೇಂಟ್, ಚರ್ಮ, ರಬ್ಬರ್ ಹಾಗೂ ಪೆಟ್ರೋಲಿಯಂ ಫ್ಯಾಕ್ಟರಿಗಳಲ್ಲಿ ಕೆಲಸ ಮಾಡುವವರಿಗೆ ಅಪಾಯದ ತೀವ್ರತೆ ಜಾಸ್ತಿ.
ಗಮನಿಸಿ: ಮಹಿಳೆಯರು ಮತ್ತು ಯುವಕರಿಗೂ ಈ ಕ್ಯಾನ್ಸರ್ ಬರುವುದಿಲ್ಲ ಎಂದು ಹೇಳಲಾಗುವುದಿಲ್ಲ.
ಅತ್ಯಂತ ದೊಡ್ಡ ಎಚ್ಚರಿಕೆ: ಮೂತ್ರದಲ್ಲಿ ರಕ್ತ!
ನಿಮ್ಮ ಮೂತ್ರ ವಿಸರ್ಜನೆಯ ಬಣ್ಣದಲ್ಲಿ ಬದಲಾವಣೆಯಾಗುತ್ತಿದ್ದರೆ ತಕ್ಷಣ ಅಲರ್ಟ್ ಆಗಿ. ಮೂತ್ರವು ತಿಳಿ ಗುಲಾಬಿ, ಗಾಢ ಕೆಂಪು ಅಥವಾ ಟೀ ಕಷಾಯದ ಬಣ್ಣಕ್ಕೆ ತಿರುಗಿದರೆ ಅದು ಕ್ಯಾನ್ಸರ್ನ ಪ್ರಮುಖ ಲಕ್ಷಣ.
ನೆನಪಿಡಿ: ಅಚ್ಚರಿಯ ವಿಷಯವೆಂದರೆ, ಮೂತ್ರದಲ್ಲಿ ರಕ್ತ ಬೀಳುವಾಗ ಯಾವುದೇ ರೀತಿಯ ನೋವು ಇರುವುದಿಲ್ಲ! ನೋವಿಲ್ಲದ ಕಾರಣಕ್ಕೆ ಜನ ಇದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ, ಆದರೆ ಇದೇ ಅತ್ಯಂತ ಅಪಾಯಕಾರಿ ನಡೆ.
ಮರುಕಳಿಸುವ ಯೂರಿನ್ ಇನ್ಫೆಕ್ಷನ್: ರೆಡ್ ಸಿಗ್ನಲ್!
ಸಾಮಾನ್ಯವಾಗಿ ಮಹಿಳೆಯರಲ್ಲಿ ಯುಟಿಐ (UTI) ಸಮಸ್ಯೆ ಹೆಚ್ಚು. ಆದರೆ 40 ವರ್ಷ ದಾಟಿದ ನಂತರವೂ ಪದೇ ಪದೇ ಇನ್ಫೆಕ್ಷನ್ ಮರುಕಳಿಸುತ್ತಿದ್ದರೆ, ಅದು ಕೇವಲ ಸೋಂಕಾಗಿರದೆ ಮೂತ್ರಕೋಶದ ಕ್ಯಾನ್ಸರ್ ಆಗಿರುವ ಸಾಧ್ಯತೆ ದಟ್ಟವಾಗಿರುತ್ತದೆ. ಹಾಗಾಗಿ ಆಳವಾದ ವೈದ್ಯಕೀಯ ತಪಾಸಣೆ ಅತ್ಯಗತ್ಯ.
ನಿರ್ಲಕ್ಷಿಸಲೇಬಾರದ 8 ಪ್ರಮುಖ ಲಕ್ಷಣಗಳು (Symptoms of Bladder Cancer):
ಮೂತ್ರದ ಜೊತೆ ರಕ್ತದ ಕಲೆ ಅಥವಾ ರಕ್ತದ ಹೆಪ್ಪುಗಟ್ಟುವಿಕೆ (Clots) ಕಾಣಿಸುವುದು.
ಮಾತ್ರೆ ತಿಂದರೂ ವಾಸಿಯಾಗದ ಮೂತ್ರದ ಉರಿತ.
ರಾತ್ರಿ ವೇಳೆ ನಿದ್ದೆಗೆಡಿಸುವಷ್ಟು ಪದೇ ಪದೇ ಮೂತ್ರಕ್ಕೆ ಮುಖ ಮಾಡುವುದು.
ಇದ್ದಕ್ಕಿದ್ದಂತೆ ತುರ್ತಾಗಿ ಮೂತ್ರ ವಿಸರ್ಜನೆಯ ಒತ್ತಡ ಉಂಟಾಗುವುದು.
ತಿಂಗಳುಗಟ್ಟಲೆ ಕಾಡುವ ಇನ್ಫೆಕ್ಷನ್ ತೊಂದರೆ.
ಯಾವುದೇ ಕಾರಣವಿಲ್ಲದೆ ಹಠಾತ್ ತೂಕ ಇಳಿಕೆ ಮತ್ತು ಅತಿಯಾದ ಸುಸ್ತು.
ಧೂಮಪಾನ ಮಾಡುವವರಲ್ಲಿ ಕಾಣಿಸಿಕೊಳ್ಳುವ ಮೂತ್ರದ ತೊಂದರೆಗಳು.
ಧೂಮಪಾನಕ್ಕೂ ಬ್ಲಾಡರ್ ಕ್ಯಾನ್ಸರ್ಗೂ ಏನು ಲಿಂಕ್?
ಸಿಗರೇಟ್ ಅಥವಾ ತಂಬಾಕಿನಲ್ಲಿರುವ ಕ್ಯಾನ್ಸರ್ ಕಾರಕ ವಿಷಕಾರಿ ರಾಸಾಯನಿಕಗಳನ್ನು ನಮ್ಮ ದೇಹವು ಹೀರಿಕೊಂಡಾಗ, ಅವು ಕಿಡ್ನಿಗಳ ಮೂಲಕ ಫಿಲ್ಟರ್ ಆಗಿ ಮೂತ್ರಕೋಶವನ್ನು ತಲುಪುತ್ತವೆ. ಈ ವಿಷಕಾರಿ ಮೂತ್ರವು ಬ್ಲಾಡರ್ನ ಒಳಗಿನ ಗೋಡೆಗಳನ್ನು ದೀರ್ಘಕಾಲದವರೆಗೆ ಹಾನಿಗೊಳಿಸುವುದರಿಂದ ಕ್ಯಾನ್ಸರ್ ಗಡ್ಡೆಗಳು ಸೃಷ್ಟಿಯಾಗುತ್ತವೆ.
ಪತ್ತೆ ಹೇಗೆ? ಜೀವ ಉಳಿಸಿಕೊಳ್ಳುವುದು ಹೇಗೆ?
ಆರಂಭಿಕ ಹಂತದಲ್ಲೇ ಅಲರ್ಟ್ ಆದರೆ ಈ ಕ್ಯಾನ್ಸರ್ ಅನ್ನು ಸಂಪೂರ್ಣವಾಗಿ ಗುಣಪಡಿಸಬಹುದು.
ಸರಳ ಮೂತ್ರ ಪರೀಕ್ಷೆ (Urine Test)
ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ (Ultrasound)
ಸಿಸ್ಟೋಸ್ಕೋಪಿ (Cystoscopy)
ಇಂತಹ ಸುಲಭವಾದ ಪರೀಕ್ಷೆಗಳ ಮೂಲಕ ಕಾಯಿಲೆಯನ್ನು ಮೊದಲೇ ಪತ್ತೆಹಚ್ಚಿ ಜೀವ ಉಳಿಸಿಕೊಳ್ಳಬಹುದು.








