Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​ಭಾರತದ ವಾಯುಪಡೆಗೆ 114 ರಫೇಲ್ ಯುದ್ಧವಿಮಾನಗಳ ಬಲ: ಚೀನಾ-ಪಾಕಿಸ್ತಾನ ಸವಾಲಿಗೆ ಭಾರತದ ಭರ್ಜರಿ ಸಿದ್ಧತೆ

ಹೆಂಡತಿ ಮುಂದೆ ‘ಶ್ರೀಮಂತಿಕೆ’ ಬಿಲ್ಡಪ್ ಕೊಡಲು ಸರಗಳ್ಳನಾದ ಪತಿರಾಯ: ಮಂಡ್ಯದಲ್ಲಿ ₹70 ಲಕ್ಷದ ಚಿನ್ನದೊಂದಿಗೆ ನಾಲ್ವರು ಅಂದರ್!

BREAKING: ಬೆಂಗಳೂರಲ್ಲಿ ಹಳಿಯ ಮೇಲೆ ಮರ ಮುರಿದು ಬಿದ್ದು ನೇರಳೆ ಮಾರ್ಗದಲ್ಲಿ ಮೆಟ್ರೋ ಸಂಚಾರ ಸ್ಥಗಿತ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಹೆಂಡತಿ ಮುಂದೆ ‘ಶ್ರೀಮಂತಿಕೆ’ ಬಿಲ್ಡಪ್ ಕೊಡಲು ಸರಗಳ್ಳನಾದ ಪತಿರಾಯ: ಮಂಡ್ಯದಲ್ಲಿ ₹70 ಲಕ್ಷದ ಚಿನ್ನದೊಂದಿಗೆ ನಾಲ್ವರು ಅಂದರ್!
KARNATAKA

ಹೆಂಡತಿ ಮುಂದೆ ‘ಶ್ರೀಮಂತಿಕೆ’ ಬಿಲ್ಡಪ್ ಕೊಡಲು ಸರಗಳ್ಳನಾದ ಪತಿರಾಯ: ಮಂಡ್ಯದಲ್ಲಿ ₹70 ಲಕ್ಷದ ಚಿನ್ನದೊಂದಿಗೆ ನಾಲ್ವರು ಅಂದರ್!

By ವಸಂತ ಬಿ ಈಶ್ವರಗೆರೆ

ಮಂಡ್ಯ: ಹೆಂಡತಿಯ ಮುಂದೆ ತಾನು ದೊಡ್ಡ ಶ್ರೀಮಂತ ಎಂದು ಬಿಲ್ಡಪ್ ಕೊಟ್ಟು ‘ಸ್ಟೇಟಸ್’ ಕಾಯ್ದುಕೊಳ್ಳಲು ಹೋಗಿ, ಕೊನೆಗೆ ಪೊಲೀಸರ ಅತಿಥಿಯಾದ ಖತರ್ನಾಕ್ ಕಳ್ಳನೊಬ್ಬನ ರೋಚಕ ಕಥೆಯಿದು! ಮಂಡ್ಯ ಜಿಲ್ಲೆಯ ಕಿರುಗಾವಲು ಠಾಣೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ನಾಲ್ವರು ನಟೋರಿಯಸ್ ಸರಗಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

​ಮಳವಳ್ಳಿ ತಾಲ್ಲೂಕಿನ ತಳಗವಾದಿ ಗ್ರಾಮದ ಗುರುಪ್ರಸಾದ್ ಅಲಿಯಾಸ್ ಗುರು (36), ರೋಹಿತ್ ಅಲಿಯಾಸ್ ಗೆದ್ವಾ (20), ನಂಜೇಗೌಡ ಅಲಿಯಾಸ್ ಕಾಶಿ (19) ಹಾಗೂ ಮಣಿಗೆರೆ ಗ್ರಾಮದ ಮಾದೇಶ ಅಲಿಯಾಸ್ ಮಾದ (20) ಬಂಧಿತ ಆರೋಪಿಗಳು.

​ಹೆಂಡತಿ ಎದುರು ಬಿಲ್ಡಪ್‌ಗಾಗಿ ಕಳ್ಳತನ!

ಬಂಧಿತರ ಪೈಕಿ ಪ್ರಮುಖ ಆರೋಪಿಯಾದ ಗುರುಪ್ರಸಾದ್, ತನ್ನ ಹೆಂಡತಿಯ ಮುಂದೆ ತಾನು ಅತ್ಯಂತ ಶ್ರೀಮಂತ ಎನ್ನುವುದನ್ನು ತೋರಿಸಿಕೊಳ್ಳುವ ಹಪಾಹಪಿಗೆ ಬಿದ್ದು ಈ ದಾರಿಗೆ ಇಳಿದಿದ್ದ. ಸುಲಭವಾಗಿ ಹಣ ಸಂಪಾದಿಸಿ ಐಷಾರಾಮಿ ಜೀವನ ನಡೆಸಲು ಉಳಿದ ಯುವಕರೊಂದಿಗೆ ಗ್ಯಾಂಗ್ ಕಟ್ಟಿಕೊಂಡು ಸರಗಳ್ಳತನ ಮಾಡಲು ಶುರು ಮಾಡಿದ್ದ ಎನ್ನಲಾಗಿದೆ.

​ಒಂಟಿ ಮಹಿಳೆಯರೇ ಇವರ ಟಾರ್ಗೆಟ್:

ಈ ಖತರ್ನಾಕ್ ಗ್ಯಾಂಗ್ ಗ್ರಾಮೀಣ ಭಾಗದ ಜಮೀನುಗಳ ಬಳಿ ಒಂಟಿಯಾಗಿ ಓಡಾಡುವ ಹಾಗೂ ಕೆಲಸ ಮಾಡುವ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿತ್ತು. ಜನರಿಲ್ಲದ ಬಿಡುವು ನೋಡಿಕೊಂಡು ಬೈಕ್‌ನಲ್ಲಿ ಬಂದು ಕುತ್ತಿಗೆಯಲ್ಲಿದ್ದ ಚಿನ್ನದ ಸರಗಳನ್ನು ಕಿತ್ತುಕೊಂಡು ಪರಾರಿಯಾಗುತ್ತಿದ್ದರು. ಈ ಸಂಬಂಧ ಕಳೆದ ಮಾರ್ಚ್ 30 ರಂದು ಕಿರುಗಾವಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

​ಪೊಲೀಸರ ಭರ್ಜರಿ ಕಾರ್ಯಾಚರಣೆ:

ಸರಗಳ್ಳತನ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ ಮಂಡ್ಯ ಎಸ್ಪಿ ಡಾ. ವಿ.ಜೆ. ಶೋಭಾರಾಣಿ ಅವರು ಆರೋಪಿಗಳ ಪತ್ತೆಗೆ ವಿಶೇಷ ತಂಡವನ್ನು ರಚಿಸಿದ್ದರು. ಎಎಸ್ಪಿ ತಿಮ್ಮಯ್ಯ ಹಾಗೂ ಸಿಪಿಐ ಶ್ರೀಧರ್ ನೇತೃತ್ವದಲ್ಲಿ, ಕಿರುಗಾವಲು ಪಿಎಸ್ಐ ರವಿಕುಮಾರ್, ಬೆಳಕವಾಡಿ ಪಿಎಸ್ಐ ಪ್ರಕಾಶ್ ಹಾಗೂ ಸಿಬ್ಬಂದಿಗಳಾದ ಸುನೀಲ್, ಸಿದ್ದಣ್ಣ, ಹರ್ಷ, ಜಯಂತ್, ಲೋಕೇಶ್ ಒಳಗೊಂಡ ತಂಡ ಹಗಲಿರುಳು ಕಾರ್ಯಾಚರಣೆ ನಡೆಸಿ ಕೊನೆಗೂ ಆರೋಪಿಗಳನ್ನು ಹೆಡೆಮುರಿ ಕಟ್ಟಿದೆ.

​16 ಪ್ರಕರಣಗಳು ಪತ್ತೆ, 70 ಲಕ್ಷ ರೂ. ಮೌಲ್ಯದ ಮಾಲು ಜಪ್ತಿ:

ಬಂಧಿತ ಆರೋಪಿಗಳಿಂದ ಬರೋಬ್ಬರಿ 70 ಲಕ್ಷ ರೂಪಾಯಿ ಮೌಲ್ಯದ 475 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಬೈಕ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಖದೀಮರ ಬಂಧನದಿಂದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಸುಮಾರು 16 ಸರಗಳ್ಳತನ ಪ್ರಕರಣಗಳು ಪತ್ತೆಯಾಗಿವೆ.

​ಕಳ್ಳರ ಜಾಲವನ್ನು ಅತ್ಯಂತ ಚಾಣಾಕ್ಷತನದಿಂದ ಭೇದಿಸಿದ ಕಿರುಗಾವಲು ಪೊಲೀಸರ ಸಾಹಸಿಕ ಕಾರ್ಯಕ್ಕೆ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಡಾ. ವಿ.ಜೆ. ಶೋಭಾರಾಣಿ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Share. Facebook Twitter LinkedIn WhatsApp Email

Related Posts

BREAKING: ಬೆಂಗಳೂರಲ್ಲಿ ಹಳಿಯ ಮೇಲೆ ಮರ ಮುರಿದು ಬಿದ್ದು ನೇರಳೆ ಮಾರ್ಗದಲ್ಲಿ ಮೆಟ್ರೋ ಸಂಚಾರ ಸ್ಥಗಿತ

1 Min Read

BIG NEWS: ರಾಜ್ಯಾದ್ಯಂತ ನೂತನ 150 ನಾಡ ಕಛೇರಿಗಳ ನಿರ್ಮಾಣಕ್ಕೆ ಸರ್ಕಾರ ಗ್ರೀನ್ ಸಿಗ್ನಲ್

2 Mins Read

ಶ್ರೀಮಂತಿಕೆಯ ಸ್ಟೇಟಸ್ ಗಾಗಿ ಕಳ್ಳತನಕ್ಕಿಳಿದ ಪತಿರಾಯ : ಮಂಡ್ಯದಲ್ಲೋಬ್ಬ ಖತರ್ನಾಕ್ ಕಳ್ಳ ಅಂದರ್!

1 Min Read
Recent News

​ಭಾರತದ ವಾಯುಪಡೆಗೆ 114 ರಫೇಲ್ ಯುದ್ಧವಿಮಾನಗಳ ಬಲ: ಚೀನಾ-ಪಾಕಿಸ್ತಾನ ಸವಾಲಿಗೆ ಭಾರತದ ಭರ್ಜರಿ ಸಿದ್ಧತೆ

ಹೆಂಡತಿ ಮುಂದೆ ‘ಶ್ರೀಮಂತಿಕೆ’ ಬಿಲ್ಡಪ್ ಕೊಡಲು ಸರಗಳ್ಳನಾದ ಪತಿರಾಯ: ಮಂಡ್ಯದಲ್ಲಿ ₹70 ಲಕ್ಷದ ಚಿನ್ನದೊಂದಿಗೆ ನಾಲ್ವರು ಅಂದರ್!

BREAKING: ಬೆಂಗಳೂರಲ್ಲಿ ಹಳಿಯ ಮೇಲೆ ಮರ ಮುರಿದು ಬಿದ್ದು ನೇರಳೆ ಮಾರ್ಗದಲ್ಲಿ ಮೆಟ್ರೋ ಸಂಚಾರ ಸ್ಥಗಿತ

BIG NEWS: ರಾಜ್ಯಾದ್ಯಂತ ನೂತನ 150 ನಾಡ ಕಛೇರಿಗಳ ನಿರ್ಮಾಣಕ್ಕೆ ಸರ್ಕಾರ ಗ್ರೀನ್ ಸಿಗ್ನಲ್

State News
KARNATAKA

ಹೆಂಡತಿ ಮುಂದೆ ‘ಶ್ರೀಮಂತಿಕೆ’ ಬಿಲ್ಡಪ್ ಕೊಡಲು ಸರಗಳ್ಳನಾದ ಪತಿರಾಯ: ಮಂಡ್ಯದಲ್ಲಿ ₹70 ಲಕ್ಷದ ಚಿನ್ನದೊಂದಿಗೆ ನಾಲ್ವರು ಅಂದರ್!

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಮಂಡ್ಯ: ಹೆಂಡತಿಯ ಮುಂದೆ ತಾನು ದೊಡ್ಡ ಶ್ರೀಮಂತ ಎಂದು ಬಿಲ್ಡಪ್ ಕೊಟ್ಟು ‘ಸ್ಟೇಟಸ್’ ಕಾಯ್ದುಕೊಳ್ಳಲು ಹೋಗಿ, ಕೊನೆಗೆ ಪೊಲೀಸರ ಅತಿಥಿಯಾದ…

BREAKING: ಬೆಂಗಳೂರಲ್ಲಿ ಹಳಿಯ ಮೇಲೆ ಮರ ಮುರಿದು ಬಿದ್ದು ನೇರಳೆ ಮಾರ್ಗದಲ್ಲಿ ಮೆಟ್ರೋ ಸಂಚಾರ ಸ್ಥಗಿತ

BIG NEWS: ರಾಜ್ಯಾದ್ಯಂತ ನೂತನ 150 ನಾಡ ಕಛೇರಿಗಳ ನಿರ್ಮಾಣಕ್ಕೆ ಸರ್ಕಾರ ಗ್ರೀನ್ ಸಿಗ್ನಲ್

ಶ್ರೀಮಂತಿಕೆಯ ಸ್ಟೇಟಸ್ ಗಾಗಿ ಕಳ್ಳತನಕ್ಕಿಳಿದ ಪತಿರಾಯ : ಮಂಡ್ಯದಲ್ಲೋಬ್ಬ ಖತರ್ನಾಕ್ ಕಳ್ಳ ಅಂದರ್!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.