Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಬೀದರ್ ಪಶು ವಿವಿ ಬಹುಕೋಟಿ ಹಗರಣ : ಮಾಜಿ ಉಪಕುಲಪತಿ ಸೇರಿ ಆರು ಜನರು ಅರೆಸ್ಟ್!

BIG NEWS : ಪಿಯುಸಿ ಪ್ರವೇಶಾತಿಗೂ ಮುನ್ನ ಕಾಲೇಜುಗಳ ಮಾನ್ಯತೆ ಪರಿಶೀಲಿಸಿ : ಪೋಷಕರಿಗೆ ಶಿಕ್ಷಣ ಇಲಾಖೆಯಿಂದ ಮಹತ್ವದ ಪ್ರಕಟಣೆ

BREAKING : ಜೂನ್ 18ರಂದು 7 ಸ್ಥಾನಗಳಿಗೆ ವಿಧಾನ ಪರಿಷತ್ ಚುನಾವಣೆ | Legislative Council Elections

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಪಿಯುಸಿ ಪ್ರವೇಶಾತಿಗೂ ಮುನ್ನ ಕಾಲೇಜುಗಳ ಮಾನ್ಯತೆ ಪರಿಶೀಲಿಸಿ : ಪೋಷಕರಿಗೆ ಶಿಕ್ಷಣ ಇಲಾಖೆಯಿಂದ ಮಹತ್ವದ ಪ್ರಕಟಣೆ
KARNATAKA

BIG NEWS : ಪಿಯುಸಿ ಪ್ರವೇಶಾತಿಗೂ ಮುನ್ನ ಕಾಲೇಜುಗಳ ಮಾನ್ಯತೆ ಪರಿಶೀಲಿಸಿ : ಪೋಷಕರಿಗೆ ಶಿಕ್ಷಣ ಇಲಾಖೆಯಿಂದ ಮಹತ್ವದ ಪ್ರಕಟಣೆ

By kannadanewsnow57

ಬೆಂಗಳೂರು: ರಾಜ್ಯದಲ್ಲಿ 2026-27ನೇ ಶೈಕ್ಷಣಿಕ ವರ್ಷದ ಪ್ರಥಮ ಮತ್ತು ದ್ವಿತೀಯ ಪಿ.ಯು.ಸಿ ಪ್ರವೇಶಾತಿ ಪ್ರಕ್ರಿಯೆಗಳು ಆರಂಭವಾಗುತ್ತಿರುವ ಬೆನ್ನಲ್ಲೇ, ಶಾಲಾ ಶಿಕ್ಷಣ ಇಲಾಖೆಯು (ಪದವಿ ಪೂರ್ವ) ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ಮಹತ್ವದ ಸಾರ್ವಜನಿಕ ಸಲಹೆಯೊಂದನ್ನು ನೀಡಿದೆ. ಕೆಲವು ಪದವಿ ಪೂರ್ವ ಕಾಲೇಜುಗಳು ನಿಯಮಗಳನ್ನು ಉಲ್ಲಂಘಿಸಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವುದು ಇಲಾಖೆಯ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಈ ಎಚ್ಚರಿಕೆಯನ್ನು ಪ್ರಕಟಿಸಲಾಗಿದೆ.

ಕೆಲವು ಪದವಿ ಪೂರ್ವ ಕಾಲೇಜುಗಳು ಇಲಾಖೆಯಿಂದ ಅನುಮೋದನೆ ಪಡೆದ ಅಧಿಕೃತ ಸ್ಥಳಗಳನ್ನು ಹೊರತುಪಡಿಸಿ ಬೇರೆಡೆ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸುತ್ತಿರುವುದು ಕಂಡುಬಂದಿದೆ. ಅಷ್ಟೇ ಅಲ್ಲದೆ, ಕೆಲವು ಪ್ರಕರಣಗಳಲ್ಲಿ ವಿದ್ಯಾರ್ಥಿಗಳಿಗೆ ಮಾನ್ಯತೆ ಪಡೆದ ಕಾಲೇಜುಗಳಲ್ಲೇ ಪ್ರವೇಶ ನೀಡಿದಂತೆ ತೋರಿಸಿ, ವಾಸ್ತವಿಕವಾಗಿ ಯಾವುದೇ ಅಧಿಕೃತ ಅನುಮೋದನೆ ಇಲ್ಲದ ಖಾಸಗಿ ತರಬೇತಿ ಅಥವಾ ಕೋಚಿಂಗ್ ಸಂಸ್ಥೆಗಳಲ್ಲಿ ತರಗತಿಗಳನ್ನು ನಡೆಸಲಾಗುತ್ತಿದೆ ಎಂದು ಇಲಾಖೆ ತಿಳಿಸಿದೆ.

ಮಾನ್ಯತೆ ರದ್ದುಪಡಿಸುವ ಎಚ್ಚರಿಕೆ

ಈ ರೀತಿಯ ಕಾನೂನುಬಾಹಿರ ಕ್ರಮಗಳು ‘ಕರ್ನಾಟಕ ಶಾಲಾ ಶಿಕ್ಷಣ (ಪದವಿ ಪೂರ್ವ) ನಿಯಮಗಳು, 2024’ ಹಾಗೂ ‘ಕರ್ನಾಟಕ ಶಿಕ್ಷಣ ಕಾಯಿದೆ, 1983’ರ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಇಂತಹ ಅಕ್ರಮಗಳಲ್ಲಿ ತೊಡಗಿರುವ ಸಂಸ್ಥೆಗಳಿಗೆ ಸ್ಪಷ್ಟೀಕರಣ ನೀಡಲು ಸೂಕ್ತ ಅವಕಾಶ ನೀಡಿದ ಬಳಿಕ, ಅವುಗಳ ಕಾಲೇಜು ಮಂಜೂರಾತಿ ಹಾಗೂ ಶೈಕ್ಷಣಿಕ ಮಾನ್ಯತೆಯನ್ನು ರದ್ದುಗೊಳಿಸಲು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಸಿದೆ. ಇಂತಹ ಸಂಸ್ಥೆಗಳಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗುವ ಸಾಧ್ಯತೆ ಇರುವುದರಿಂದ ಪಾಲಕರು ಎಚ್ಚರದಿಂದ ಇರಬೇಕು ಎಂದು ಕೋರಲಾಗಿದೆ.

ಪಾಲಕರು ಮತ್ತು ವಿದ್ಯಾರ್ಥಿಗಳಿಗೆ ಇಲಾಖೆಯ ಪ್ರಮುಖ ಸಲಹೆಗಳು:

ಅಧಿಕೃತ ಜಾಲತಾಣದಲ್ಲಿ ಪರಿಶೀಲಿಸಿ: ಪಾಲಕರು ತಮ್ಮ ಮಕ್ಕಳಿಗೆ ಪ್ರವೇಶಾತಿ ಪಡೆಯುವ ಮುನ್ನ ಸಂಬಂಧಪಟ್ಟ ಪಿ.ಯು. ಕಾಲೇಜಿನ ಅನುಮೋದಿತ ವಿಳಾಸ, ಮಂಜೂರಾದ ವಿಭಾಗಗಳು (ಕಾಂಬಿನೇಶನ್ಗಳು) ಮತ್ತು ಕಾಲೇಜಿನ ಅಧಿಕೃತ ಪ್ರವೇಶ ಸಾಮರ್ಥ್ಯವನ್ನು (ಇಂಟೇಕ್) ಶಾಲಾ ಶಿಕ್ಷಣ ಇಲಾಖೆಯ ಅಧಿಕೃತ ಜಾಲತಾಣದಲ್ಲಿ ಕಡ್ಡಾಯವಾಗಿ ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು.

ಮೌಖಿಕ ಭರವಸೆಗಳನ್ನು ನಂಬಬೇಡಿ: ಹಲವು ಕಾಲೇಜುಗಳ ಆಡಳಿತ ಮಂಡಳಿಗಳು ನೀಡುವ ಸುಳ್ಳು ಭರವಸೆಗಳ ಬಗ್ಗೆ ಇಲಾಖೆ ಎಚ್ಚರಿಸಿದೆ. “ಮುಂದಿನ ದಿನಗಳಲ್ಲಿ ಹೊಸ ಕಾಲೇಜಿಗೆ ಅನುಮತಿ ಪಡೆಯಲಾಗುವುದು”, “ಹೊಸ ವಿಭಾಗಗಳು ಅಥವಾ ಭಾಷೆಗಳನ್ನು ಆರಂಭಿಸಲಾಗುವುದು” ಅಥವಾ “ಬೇರೆ ಸ್ಥಳಕ್ಕೆ ತರಗತಿಗಳನ್ನು ಸ್ಥಳಾಂತರಿಸಲಾಗುವುದು” ಎಂಬಂತಹ ಯಾವುದೇ ಮೌಖಿಕ ಮಾತುಗಳನ್ನು ಪಾಲಕರು ನಂಬಬಾರದು.

ವೆಬ್ಸೈಟ್ನಲ್ಲೇ ಅಧಿಕೃತ ಮಾಹಿತಿ: ಹೊಸ ಕಾಲೇಜುಗಳು, ಹೆಚ್ಚುವರಿ ವಿಭಾಗಗಳು ಅಥವಾ ಕಾಂಬಿನೇಶನ್ಗಳಿಗೆ ಸಂಬಂಧಿಸಿದ ಎಲ್ಲಾ ಅಧಿಕೃತ ಅನುಮೋದನೆಗಳನ್ನು ಇಲಾಖೆಯ ವೆಬ್ಸೈಟ್ನಲ್ಲಿ ಮಾತ್ರ ಪ್ರಕಟಿಸಲಾಗುತ್ತದೆ. ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಶಾಲಾ ಶಿಕ್ಷಣ ಇಲಾಖೆಯ (ಪದವಿ ಪೂರ್ವ) ನಿರ್ದೇಶಕರು ಈ ಅಧಿಕೃತ ಪ್ರಕಟಣೆಯನ್ನು ಹೊರಡಿಸಿದ್ದಾರೆ.

Share. Facebook Twitter LinkedIn WhatsApp Email

Related Posts

BREAKING : ಬೀದರ್ ಪಶು ವಿವಿ ಬಹುಕೋಟಿ ಹಗರಣ : ಮಾಜಿ ಉಪಕುಲಪತಿ ಸೇರಿ ಆರು ಜನರು ಅರೆಸ್ಟ್!

2 Mins Read

BREAKING : ಜೂನ್ 18ರಂದು 7 ಸ್ಥಾನಗಳಿಗೆ ವಿಧಾನ ಪರಿಷತ್ ಚುನಾವಣೆ | Legislative Council Elections

1 Min Read

BIG NEWS : ರಾಜ್ಯದ ಪಿಯು ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಇನ್ಮುಂದೆ ಕಾಲೇಜುಗಳ ಸೀಟು ಸಾಮರ್ಥ್ಯ, ವಿಷಯ ಸಂಯೋಜನೆ ಮಾಹಿತಿ ಆನ್ ಲೈನ್ ನಲ್ಲೇ ಲಭ್ಯ!

2 Mins Read
Recent News

BREAKING : ಬೀದರ್ ಪಶು ವಿವಿ ಬಹುಕೋಟಿ ಹಗರಣ : ಮಾಜಿ ಉಪಕುಲಪತಿ ಸೇರಿ ಆರು ಜನರು ಅರೆಸ್ಟ್!

BIG NEWS : ಪಿಯುಸಿ ಪ್ರವೇಶಾತಿಗೂ ಮುನ್ನ ಕಾಲೇಜುಗಳ ಮಾನ್ಯತೆ ಪರಿಶೀಲಿಸಿ : ಪೋಷಕರಿಗೆ ಶಿಕ್ಷಣ ಇಲಾಖೆಯಿಂದ ಮಹತ್ವದ ಪ್ರಕಟಣೆ

BREAKING : ಜೂನ್ 18ರಂದು 7 ಸ್ಥಾನಗಳಿಗೆ ವಿಧಾನ ಪರಿಷತ್ ಚುನಾವಣೆ | Legislative Council Elections

BIG NEWS : ರಾಜ್ಯದ ಪಿಯು ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಇನ್ಮುಂದೆ ಕಾಲೇಜುಗಳ ಸೀಟು ಸಾಮರ್ಥ್ಯ, ವಿಷಯ ಸಂಯೋಜನೆ ಮಾಹಿತಿ ಆನ್ ಲೈನ್ ನಲ್ಲೇ ಲಭ್ಯ!

State News
KARNATAKA

BREAKING : ಬೀದರ್ ಪಶು ವಿವಿ ಬಹುಕೋಟಿ ಹಗರಣ : ಮಾಜಿ ಉಪಕುಲಪತಿ ಸೇರಿ ಆರು ಜನರು ಅರೆಸ್ಟ್!

By ಸುರೇಶ್‌ KARNATAKA 2 Mins Read

ಬೀದರ್ : ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಬೀದರ್‌ನ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 45…

BIG NEWS : ಪಿಯುಸಿ ಪ್ರವೇಶಾತಿಗೂ ಮುನ್ನ ಕಾಲೇಜುಗಳ ಮಾನ್ಯತೆ ಪರಿಶೀಲಿಸಿ : ಪೋಷಕರಿಗೆ ಶಿಕ್ಷಣ ಇಲಾಖೆಯಿಂದ ಮಹತ್ವದ ಪ್ರಕಟಣೆ

BREAKING : ಜೂನ್ 18ರಂದು 7 ಸ್ಥಾನಗಳಿಗೆ ವಿಧಾನ ಪರಿಷತ್ ಚುನಾವಣೆ | Legislative Council Elections

BIG NEWS : ರಾಜ್ಯದ ಪಿಯು ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಇನ್ಮುಂದೆ ಕಾಲೇಜುಗಳ ಸೀಟು ಸಾಮರ್ಥ್ಯ, ವಿಷಯ ಸಂಯೋಜನೆ ಮಾಹಿತಿ ಆನ್ ಲೈನ್ ನಲ್ಲೇ ಲಭ್ಯ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.