ಬೆಂಗಳೂರು : ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ಆನ್ಲೈನ್ ಸೇವೆಗಳನ್ನು ಮತ್ತಷ್ಟು ವಿಸ್ತರಿಸುತ್ತಿದೆ. ಚಂದಾದಾರರು ಇಪಿಎಫ್ಒ ಕಚೇರಿಗಳಿಗೆ ಅಲೆಯುವ ಅಗತ್ಯವಿಲ್ಲದೇ, ಮನೆಯಲ್ಲೇ ಕುಳಿತು ಎಲ್ಲಾ ಕೆಲಸಗಳನ್ನು ಸುಲಭವಾಗಿ ಮಾಡಿಕೊಳ್ಳಲು ಅನುಕೂಲವಾಗುವಂತೆ ಆನ್ಲೈನ್ ಸೇವೆಗಳನ್ನು ನವೀಕರಿಸುತ್ತಿದೆ. ಇದರ ಭಾಗವಾಗಿ ಇಪಿಎಫ್ಒ ಇತ್ತೀಚೆಗೆ ಮತ್ತೊಂದು ದೊಡ್ಡ ಅಪ್ಡೇಟ್ ನೀಡಿದೆ.
ಅದೇನಂದರೆ, ನಿಮ್ಮ ಯುಎಎನ್ (UAN) ಸಂಖ್ಯೆಗೆ ತಪ್ಪಾಗಿ ಲಿಂಕ್ ಆಗಿರುವ ಮೆಂಬರ್ ಐಡಿಯನ್ನು (Member ID) ಇನ್ಮುಂದೆ ನೀವೇ ಸ್ವತಃ ಸುಲಭವಾಗಿ ಡಿ-ಲಿಂಕ್ (De-link) ಮಾಡಬಹುದು. ಕಂಪನಿಗಳು ಅಚಾತುರ್ಯದಿಂದ ನಿಮ್ಮ UAN ಸಂಖ್ಯೆಯನ್ನು ಬೇರೆ ಕಂಪನಿಗೆ ಅಥವಾ ತಪ್ಪು ಮೆಂಬರ್ ಐಡಿಗೆ ಲಿಂಕ್ ಮಾಡಿದ್ದರೆ, ಅದನ್ನು ಇಪಿಎಫ್ಒ ಅಧಿಕೃತ ಪೋರ್ಟಲ್ ಮೂಲಕ ಕೆಲವೇ ನಿಮಿಷಗಳಲ್ಲಿ ತೆಗೆದುಹಾಕಬಹುದು. ಅದನ್ನು ಮಾಡುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.
ಮೊದಲು ಸರ್ವಿಸ್ ಹಿಸ್ಟರಿ ಪರಿಶೀಲಿಸಿ
ನಿಮ್ಮ ಖಾತೆಗೆ ಯಾವುದಾದರೂ ತಪ್ಪು ಮೆಂಬರ್ ಐಡಿ ಲಿಂಕ್ ಆಗಿದೆಯೇ ಎಂಬುದನ್ನು ನೀವು ‘ಸರ್ವಿಸ್ ಹಿಸ್ಟರಿ’ (Service History) ಮೂಲಕ ಪರಿಶೀಲಿಸಬಹುದು. ನೀವು ಕೆಲಸ ಮಾಡದ ಕಂಪನಿಯ ಹೆಸರು ಅಲ್ಲಿ ಕಾಣಿಸಿದರೆ ತಕ್ಷಣ ಎಚ್ಚೆತ್ತುಕೊಳ್ಳಿ. ಏಕೆಂದರೆ ತಪ್ಪು ಮೆಂಬರ್ ಐಡಿ ಇದ್ದರೆ ಪಿಎಫ್ ಹಣ ವರ್ಗಾವಣೆ ಅಥವಾ ಹಣ ಡ್ರಾ (Withdrawal) ಮಾಡುವಾಗ ಸಮಸ್ಯೆಗಳು ಎದುರಾಗುತ್ತವೆ.
ಈ ಸಮಸ್ಯೆಗೆ ಪರಿಹಾರವಾಗಿ ಇಪಿಎಫ್ಒ ಈ ಹೊಸ ಸೌಲಭ್ಯವನ್ನು ತಂದಿದೆ. ಈ ಹಿಂದೆ ಯಾವುದೇ ಹಣ ಜಮೆಯಾಗದ ಮೆಂಬರ್ ಐಡಿಯನ್ನು ಮಾತ್ರ ತೆಗೆದುಹಾಕಲು ಅವಕಾಶವಿತ್ತು. ಆದರೆ ಈಗ ಕಾಂಟ್ರಿಬ್ಯೂಷನ್ (ಹಣ) ಜಮೆಯಾಗಿದ್ದರೂ ಸಹ ಅದನ್ನು ತೆಗೆದುಹಾಕಲು ಇಪಿಎಫ್ಒ ಅವಕಾಶ ನೀಡಿದೆ.
ಡಿ-ಲಿಂಕ್ ಮಾಡುವುದು ಹೇಗೆ? (ಹಂತ-ಹಂತದ ಮಾಹಿತಿ)
ಹಂತ 1: ಮೊದಲು ಇಪಿಎಫ್ಒ (EPFO) ಅಧಿಕೃತ ಪೋರ್ಟಲ್ಗೆ ಭೇಟಿ ನೀಡಿ.
ಹಂತ 2: ನಿಮ್ಮ ಯುಎಎನ್ (UAN) ಸಂಖ್ಯೆ ಮತ್ತು ಪಾಸ್ವರ್ಡ್ ಬಳಸಿ ಲಾಗಿನ್ ಆಗಿ.
ಹಂತ 3: ಹೋಮ್ ಪೇಜ್ನಲ್ಲಿ ಕಾಣಿಸುವ ‘View’ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
ಹಂತ 4: ಅದರಲ್ಲಿರುವ ‘Service History’ ವಿಭಾಗಕ್ಕೆ ಹೋಗಿ.
ಹಂತ 5: ಅಲ್ಲಿ ನಿಮ್ಮ UAN ಸಂಖ್ಯೆಗೆ ಲಿಂಕ್ ಆಗಿರುವ ಎಲ್ಲಾ ಮೆಂಬರ್ ಐಡಿಗಳು ಕಾಣಿಸುತ್ತವೆ.
ಹಂತ 6: ನೀವು ತೆಗೆದುಹಾಕಲು ಬಯಸುವ ತಪ್ಪು ಮೆಂಬರ್ ಐಡಿ ಪಕ್ಕದಲ್ಲಿರುವ ‘De-link’ ಆಪ್ಷನ್ ಅನ್ನು ಆಯ್ಕೆ ಮಾಡಿ.
ಹಂತ 7: ಈ ಮೆಂಬರ್ ಐಡಿಯನ್ನು ಏಕೆ ತೆಗೆದುಹಾಕುತ್ತಿದ್ದೀರಿ ಎಂಬ ನಿಖರವಾದ ಕಾರಣವನ್ನು ನಮೂದಿಸಬೇಕು. (ಗಮನಿಸಿ: ಡಿಸೆಂಬರ್ 13, 2016 ಕ್ಕಿಂತ ಮೊದಲು ಕಾಂಟ್ರಿಬ್ಯೂಷನ್ ಪಾವತಿಸಿದ್ದರೆ ಅದನ್ನು ತೆಗೆದುಹಾಕಲು ಸಾಧ್ಯವಿಲ್ಲ).
ಹಂತ 8: ನಂತರ ‘Get OTP’ ಮೇಲೆ ಕ್ಲಿಕ್ ಮಾಡಿ. ನಿಮ್ಮ ಆಧಾರ್ ಕಾರ್ಡ್ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿಯನ್ನು (OTP) ಎಂಟರ್ ಮಾಡಿ ಸಬ್ಮಿಟ್ ಮಾಡಿ.
ಮುಂದಿನ ಪ್ರಕ್ರಿಯೆ ಹೇಗೆ?
ನೀವು ರಿಕ್ವೆಸ್ಟ್ ಸಲ್ಲಿಸಿದ ತಕ್ಷಣ, ಆ ಮೆಂಬರ್ ಐಡಿ ಕ್ರಿಯೇಟ್ ಮಾಡಿದ ಕಂಪನಿಯ ಮಾಲೀಕರಿಗೆ (Employer) ಸಂದೇಶ ತಲುಪುತ್ತದೆ. ಅವರು ನಿಮ್ಮ ವಿನಂತಿಯನ್ನು ಪರಿಶೀಲಿಸಿ ಅನುಮೋದಿಸುತ್ತಾರೆ.
ಪ್ರಮುಖ ನಿಯಮಗಳು:
ಆ ಮೆಂಬರ್ ಐಡಿಯಲ್ಲಿ ಕೇವಲ ಎರಡು ಅಥವಾ ಅದಕ್ಕಿಂತ ಕಡಿಮೆ ಬಾರಿ ಹಣ ಜಮೆಯಾಗಿದ್ದರೆ, ಮಾಲೀಕರು ಒಪ್ಪಿಗೆ ನೀಡಿದ ತಕ್ಷಣ ಅದು ಡಿ-ಲಿಂಕ್ ಆಗುತ್ತದೆ.
ಒಂದು ವೇಳೆ ಗರಿಷ್ಠ 6 ಬಾರಿ ಹಣ ಜಮೆಯಾಗಿದ್ದರೆ, ಈ ಪ್ರಕ್ರಿಯೆಯು ಇಪಿಎಫ್ಒ ಪ್ರಾದೇಶಿಕ ಕಚೇರಿಗೆ (Regional Office) ವರ್ಗಾವಣೆಯಾಗುತ್ತದೆ.
6 ಕ್ಕಿಂತ ಹೆಚ್ಚು ಬಾರಿ ಹಣ ಜಮೆಯಾಗಿದ್ದರೂ ಸಹ ಈ ಹೊಸ ಆನ್ಲೈನ್ ಪ್ರಕ್ರಿಯೆಯ ಮೂಲಕವೇ ಡಿ-ಲಿಂಕ್ ಮಾಡಿಕೊಳ್ಳಬಹುದು.
New Update 🚨
Watch this quick step-by-step guide to learn the latest process to de-link an incorrect Member ID from your UAN with ease. ✅
Stay informed and manage your EPFO services hassle-free.#EPFO #EPFOWithYou #HumHainNa@narendramodi @mansukhmandviya @ShobhaBJP @PMOIndia pic.twitter.com/6mSs0hgtwH
— EPFO (@officialepfo) May 25, 2026








