Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ ಅಕ್ರಮಕ್ಕೆ ಮತ್ತೊಂದು ಬಲಿ: ಮಹಾರಾಷ್ಟ್ರದಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣು

ನಾನು ಕೂಡ ರಾಜ್ಯಸಭೆ ಚುನಾವಣೆಗೆ ಆಕಾಂಕ್ಷಿ: ಮಾಜಿ ಸಿಎಂ ಡಿ.ವಿ.ಸದಾನಂದಗೌಡ

BREAKING: ಎಸ್ಐಆರ್ ಸಭೆಗೆ ಗೈರಾದ ಕಾಂಗ್ರೆಸ್ ನಾಯಕರಿಗೆ ಬಿಗ್ ಶಾಕ್: ಹುದ್ದೆಯಿಂದ ಕಿತ್ತೊಗೆಯಲು ಸುರ್ಜೇವಾಲ ಆದೇಶ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ಎಸ್ಐಆರ್ ಸಭೆಗೆ ಗೈರಾದ ಕಾಂಗ್ರೆಸ್ ನಾಯಕರಿಗೆ ಬಿಗ್ ಶಾಕ್: ಹುದ್ದೆಯಿಂದ ಕಿತ್ತೊಗೆಯಲು ಸುರ್ಜೇವಾಲ ಆದೇಶ
KARNATAKA

BREAKING: ಎಸ್ಐಆರ್ ಸಭೆಗೆ ಗೈರಾದ ಕಾಂಗ್ರೆಸ್ ನಾಯಕರಿಗೆ ಬಿಗ್ ಶಾಕ್: ಹುದ್ದೆಯಿಂದ ಕಿತ್ತೊಗೆಯಲು ಸುರ್ಜೇವಾಲ ಆದೇಶ

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಆಂತರಿಕ ಶಿಸ್ತು ಉಲ್ಲಂಘಿಸುವವರ ವಿರುದ್ಧ ಹೈಕಮಾಂಡ್ ಅತ್ಯಂತ ಕಠಿಣ ನಿಲುವನ್ನು ತಳೆದಿದೆ. ದೇವನಹಳ್ಳಿ ಹೊರವಲಯದ ಖಾಸಗಿ ಹೋಟೆಲ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಅತ್ಯಂತ ಮಹತ್ವದ ‘ಎಸ್ಐಆರ್’ (SIR) ಕುರಿತಾದ ಕಾಂಗ್ರೆಸ್ ನಾಯಕರ ಸಭೆಗೆ ಗೈರುಹಾಜರಾದ 100ಕ್ಕೂ ಹೆಚ್ಚು ಪಕ್ಷದ ಉಪಾಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳನ್ನು ತಕ್ಷಣವೇ ಹುದ್ದೆಯಿಂದ ತೆಗೆದುಹಾಕುವಂತೆ ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಗರಂ ಆಗಿ ಆದೇಶಿಸಿದ್ದಾರೆ.

ನಿನ್ನೆ ಮತ್ತು ಇಂದು (ಎರಡು ದಿನಗಳು) ನಡೆದ ಈ ಸಭೆಯ ಗಂಭೀರತೆಯನ್ನು ಅರಿಯದ ನಾಯಕರ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲ ಅವರು ಜಂಟಿಯಾಗಿ ಈ ಶಿಸ್ತು ಕ್ರಮದ ಚಾವಟಿ ಬೀಸಿದ್ದಾರೆ.

ದೇವನಹಳ್ಳಿ ಖಾಸಗಿ ಹೋಟೆಲ್‌ನಲ್ಲಿ ಎರಡು ದಿನಗಳ ಹೈವೋಲ್ಟೇಜ್ ಸಭೆ

ರಾಜ್ಯದಲ್ಲಿ ‘ಎಸ್ಐಆರ್’ (SIR) ವಿಷಯಕ್ಕೆ ಸಂಬಂಧಿಸಿದಂತೆ ಭವಿಷ್ಯದ ಕಾರ್ಯತಂತ್ರಗಳನ್ನು ರೂಪಿಸಲು ಕಾಂಗ್ರೆಸ್ ಹಿರಿಯ ನಾಯಕರು ನಿನ್ನೆ ಮತ್ತು ಇಂದು ದೇವನಹಳ್ಳಿಯ ಹೊರವಲಯದಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ಸುದೀರ್ಘ ಸಭೆ ಕರೆದಿದ್ದರು. ಪಕ್ಷದ ಸಂಘಟನೆ ಹಾಗೂ ಸರ್ಕಾರದ ಮಟ್ಟದಲ್ಲಿ ಅತ್ಯಂತ ಮಹತ್ವದ ಪ್ರಕ್ರಿಯೆ ಇದಾಗಿದ್ದರಿಂದ, ಕೆಪಿಸಿಸಿಯ ಎಲ್ಲಾ ಪ್ರಮುಖ ಪದಾಧಿಕಾರಿಗಳು ಈ ಸಭೆಯಲ್ಲಿ ಪಾಲ್ಗೊಳ್ಳುವುದು ಕಡ್ಡಾಯವಾಗಿತ್ತು.

ಆದರೆ, ಪಕ್ಷದ ಜವಾಬ್ದಾರಿಯುತ ಸ್ಥಾನಗಳಲ್ಲಿರುವ ನಾಯಕರೇ ಸಭೆಯಿಂದ ದೂರ ಉಳಿದಿರುವುದು ಹೈಕಮಾಂಡ್ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ.

ಗೈರಾದ 100ಕ್ಕೂ ಹೆಚ್ಚು ನಾಯಕರಿಗೆ ‘ಕೋಕ್’ ನೀಡಲು ಸುರ್ಜೇವಾಲಾ ಸೂಚನೆ

ಸಭೆಯ ಉಸ್ತುವಾರಿ ವಹಿಸಿದ್ದ ರಣದೀಪ್ ಸಿಂಗ್ ಸುರ್ಜೇವಾಲ ಅವರು ಪದಾಧಿಕಾರಿಗಳ ಹಾಜರಾತಿಯನ್ನು ಪರಿಶೀಲಿಸಿದಾಗ, 100ಕ್ಕೂ ಹೆಚ್ಚು ಉಪಾಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಸಭೆಗೆ ಗೈರಾಗಿರುವುದು ಬೆಳಕಿಗೆ ಬಂದಿದೆ. ಇದರಿಂದ ತೀವ್ರ ಆಕ್ರೋಶಗೊಂಡ ಸುರ್ಜೇವಾಲ ಅವರು, ಬೇಜವಾಬ್ದಾರಿತನ ಪ್ರದರ್ಶಿಸಿದ ಎಲ್ಲಾ ನಾಯಕರನ್ನು ಅವರವರ ಹುದ್ದೆಗಳಿಂದ ತಕ್ಷಣವೇ ಮುಕ್ತಗೊಳಿಸುವಂತೆ (ಕೋಕ್ ನೀಡುವಂತೆ) ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಸೂಚನೆ ನೀಡಿದ್ದಾರೆ.

“ಸಭೆಯ ಗಂಭೀರತೆ ಅರ್ಥವಾಗದಿದ್ದರೆ ಪಕ್ಷಕ್ಕೆ ಏನು ಕೆಲಸ ಮಾಡ್ತೀರಾ?” ಎಂದು ಸುರ್ಜೇವಾಲ ಗರಂ

ಸಭೆಯಲ್ಲೇ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ ರಣದೀಪ್ ಸಿಂಗ್ ಸುರ್ಜೇವಾಲ ಅವರು, “ಪಕ್ಷದ ಪದಾಧಿಕಾರಿಗಳಿಗೆ ಇಷ್ಟೊಂದು ಪ್ರಮುಖವಾದ ಎಸ್ಐಆರ್ ಸಭೆಯ ಗಂಭೀರತೆಯೇ ಅರ್ಥವಾಗಿಲ್ಲ ಎಂದರೆ, ಇನ್ನು ನೀವು ಪಕ್ಷಕ್ಕಾಗಿ ಕ್ಲಿಷ್ಟಕರ ಸಮಯದಲ್ಲಿ ಏನು ಕೆಲಸ ಮಾಡಲು ಸಾಧ್ಯ?” ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ಪಕ್ಷದ ಆಂತರಿಕ ಸಭೆಗಳನ್ನು ಹಗುರವಾಗಿ ಪರಿಗಣಿಸುವ ನಾಯಕರಿಗೆ ಈ ಮೂಲಕ ಹೈಕಮಾಂಡ್ ನೇರ ಎಚ್ಚರಿಕೆಯ ಸಂದೇಶ ರವಾನಿಸಿದೆ. ಡಿ.ಕೆ. ಶಿವಕುಮಾರ್ ಮತ್ತು ಸುರ್ಜೇವಾಲ ಅವರ ಈ ಖಡಕ್ ನಿರ್ಧಾರದಿಂದಾಗಿ ಸದ್ಯ ಕೆಪಿಸಿಸಿ ವಲಯದಲ್ಲಿ ತಲ್ಲಣ ಸೃಷ್ಟಿಯಾಗಿದೆ.

ಮೇ.26ರಂದು ಬೆಳಗಾವಿ ಪಾಲಿಕೆಗೆ ವಾಟಾಳ್ ನಾಗರಾಜ್, ಸಾ.ರಾ.ಗೋವಿಂದು, ಕೆ.ಆರ್. ಕುಮಾರ್ ನೇತೃತ್ವ ಮುತ್ತಿಗೆ: ಕರ್ನಾಟಕ ಪರ ಗೊತ್ತುವಳಿಗೆ ‎ಆಗ್ರಹ

ಮರಣಕ್ಕೂ 24 ಗಂಟೆಗಳ ಮುನ್ನ ಕಾಣಿಸಿಕೊಳ್ಳುವ 3 ಪ್ರಮುಖ ಲಕ್ಷಣಗಳಿವು

Share. Facebook Twitter LinkedIn WhatsApp Email

Related Posts

ನಾನು ಕೂಡ ರಾಜ್ಯಸಭೆ ಚುನಾವಣೆಗೆ ಆಕಾಂಕ್ಷಿ: ಮಾಜಿ ಸಿಎಂ ಡಿ.ವಿ.ಸದಾನಂದಗೌಡ

2 Mins Read

ಮೇ.26ರಂದು ಬೆಳಗಾವಿ ಪಾಲಿಕೆಗೆ ವಾಟಾಳ್ ನಾಗರಾಜ್, ಸಾ.ರಾ.ಗೋವಿಂದು, ಕೆ.ಆರ್. ಕುಮಾರ್ ನೇತೃತ್ವ ಮುತ್ತಿಗೆ: ಕರ್ನಾಟಕ ಪರ ಗೊತ್ತುವಳಿಗೆ ‎ಆಗ್ರಹ

1 Min Read

BREAKING: ಕರ್ನಾಟಕ ರಾಜಕೀಯ ದೆಹಲಿ ಶಿಫ್ಟ್: ಇಂದು ತಡರಾತ್ರಿ ಸಿಎಂ ಸಿದ್ಧರಾಮಯ್ಯ, ಡಿಕೆ ಶಿವಕುಮಾರ್ ಪ್ರಯಾಣ

2 Mins Read
Recent News

BREAKING: ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ ಅಕ್ರಮಕ್ಕೆ ಮತ್ತೊಂದು ಬಲಿ: ಮಹಾರಾಷ್ಟ್ರದಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣು

ನಾನು ಕೂಡ ರಾಜ್ಯಸಭೆ ಚುನಾವಣೆಗೆ ಆಕಾಂಕ್ಷಿ: ಮಾಜಿ ಸಿಎಂ ಡಿ.ವಿ.ಸದಾನಂದಗೌಡ

BREAKING: ಎಸ್ಐಆರ್ ಸಭೆಗೆ ಗೈರಾದ ಕಾಂಗ್ರೆಸ್ ನಾಯಕರಿಗೆ ಬಿಗ್ ಶಾಕ್: ಹುದ್ದೆಯಿಂದ ಕಿತ್ತೊಗೆಯಲು ಸುರ್ಜೇವಾಲ ಆದೇಶ

ಮೇ.26ರಂದು ಬೆಳಗಾವಿ ಪಾಲಿಕೆಗೆ ವಾಟಾಳ್ ನಾಗರಾಜ್, ಸಾ.ರಾ.ಗೋವಿಂದು, ಕೆ.ಆರ್. ಕುಮಾರ್ ನೇತೃತ್ವ ಮುತ್ತಿಗೆ: ಕರ್ನಾಟಕ ಪರ ಗೊತ್ತುವಳಿಗೆ ‎ಆಗ್ರಹ

State News
KARNATAKA

ನಾನು ಕೂಡ ರಾಜ್ಯಸಭೆ ಚುನಾವಣೆಗೆ ಆಕಾಂಕ್ಷಿ: ಮಾಜಿ ಸಿಎಂ ಡಿ.ವಿ.ಸದಾನಂದಗೌಡ

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಬೆಂಗಳೂರು: ಲೋಕಸಭೆ ಚುನಾವಣೆಯ ಟಿಕೆಟ್ ಕೈತಪ್ಪಿದ ಬಳಿಕ ರಾಜಕೀಯ ನಿವೃತ್ತಿಯ ಮಾತುಗಳನ್ನಾಡಿದ್ದ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರು ಈಗ…

BREAKING: ಎಸ್ಐಆರ್ ಸಭೆಗೆ ಗೈರಾದ ಕಾಂಗ್ರೆಸ್ ನಾಯಕರಿಗೆ ಬಿಗ್ ಶಾಕ್: ಹುದ್ದೆಯಿಂದ ಕಿತ್ತೊಗೆಯಲು ಸುರ್ಜೇವಾಲ ಆದೇಶ

ಮೇ.26ರಂದು ಬೆಳಗಾವಿ ಪಾಲಿಕೆಗೆ ವಾಟಾಳ್ ನಾಗರಾಜ್, ಸಾ.ರಾ.ಗೋವಿಂದು, ಕೆ.ಆರ್. ಕುಮಾರ್ ನೇತೃತ್ವ ಮುತ್ತಿಗೆ: ಕರ್ನಾಟಕ ಪರ ಗೊತ್ತುವಳಿಗೆ ‎ಆಗ್ರಹ

BREAKING: ಕರ್ನಾಟಕ ರಾಜಕೀಯ ದೆಹಲಿ ಶಿಫ್ಟ್: ಇಂದು ತಡರಾತ್ರಿ ಸಿಎಂ ಸಿದ್ಧರಾಮಯ್ಯ, ಡಿಕೆ ಶಿವಕುಮಾರ್ ಪ್ರಯಾಣ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.