ಆಗ್ರಾ: ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೋ ಮತ್ತು ಅವರ ಪತ್ನಿ ಜೀನೆಟ್ ಡಿ. ರುಬಿಯೋ ಅವರು ಉತ್ತರ ಪ್ರದೇಶದ ಆಗ್ರಾದಲ್ಲಿರುವ ಜಗತ್ಪ್ರಸಿದ್ಧ ತಾಜ್ ಮಹಲ್ಗೆ ಭೇಟಿ ನೀಡಿದ್ದಾರೆ.
ವಿಶ್ವದ ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್ನ ಸೌಂದರ್ಯವನ್ನು ಕಣ್ಣುಂಬಿಕೊಂಡ ಮಾರ್ಕೊ ರುಬಿಯೋ ಅವರು ಅಲ್ಲಿನ ಸಂದರ್ಶಕರ ಪುಸ್ತಕದಲ್ಲಿ (Visitors’ Book) ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
“ವಿಶ್ವದ ಅತ್ಯಂತ ಅಪೂರ್ವ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದನ್ನು ವೀಕ್ಷಿಸಲು ನಮಗೆ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಧನ್ಯವಾದಗಳು,” ಎಂದು ಅವರು ಸಂದರ್ಶಕರ ಪುಸ್ತಕದಲ್ಲಿ ಬರೆದಿದ್ದಾರೆ.
ರುಬಿಯೋ ದಂಪತಿಯ ಭೇಟಿಯ ಹಿನ್ನೆಲೆಯಲ್ಲಿ ತಾಜ್ ಮಹಲ್ ಆವರಣದಲ್ಲಿ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿತ್ತು.
US Secretary of State Marco Rubio and his wife, Jeanette D. Rubio, visited the Taj Mahal in Agra
He wrote in the visitors’ book – “Thank you for allowing us to visit one of the true treasures of the World.” pic.twitter.com/HmvZcoa2ry
— ANI (@ANI) May 25, 2026








