Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಇದು ಶ್ರೀ ಆದಿ ಶಂಕರಾಚಾರ್ಯರಿಗೆ ಭಗವಾನ್ ಶಿವನು ನೀಡಿದ ಪಂಚಲಿಂಗಗಳ ಮಹಿಮೆ: ತಪ್ಪದೇ ಓದಿ, ಕಷ್ಟಗಳೆಲ್ಲ ಪರಿಹಾರ

ಸಿಎಂ ಸಿದ್ದರಾಮಯ್ಯಗೆ ಹೈಕಮಾಂಡ್ ಬುಲಾವ್ ಹಿನ್ನೆಲೆ : ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದೇನು ಗೊತ್ತಾ?

ALERT : ಬ್ರೇಕ್ ಫಾಸ್ಟ್ ಗೆ ಪೂರಿ, ವಡೆ, ಬ್ರೆಡ್-ಜಾಮ್ ತಿನ್ನೋ ಮುನ್ನ ಎಚ್ಚರ: ನಿಮ್ಮ ಆರೋಗ್ಯಕ್ಕೆ ಕಾದಿದೆ ಕಂಟಕ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಿಎಂ ಸಿದ್ದರಾಮಯ್ಯಗೆ ಹೈಕಮಾಂಡ್ ಬುಲಾವ್ ಹಿನ್ನೆಲೆ : ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದೇನು ಗೊತ್ತಾ?
KARNATAKA

ಸಿಎಂ ಸಿದ್ದರಾಮಯ್ಯಗೆ ಹೈಕಮಾಂಡ್ ಬುಲಾವ್ ಹಿನ್ನೆಲೆ : ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದೇನು ಗೊತ್ತಾ?

By ಸುರೇಶ್‌

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದಿಢೀರ್ ದೆಹಲಿ ಭೇಟಿಯ ಕುರಿತು ತೀವ್ರ ಚರ್ಚೆಗಳು ಮತ್ತು ವದಂತಿಗಳು ಎದ್ದಿರುವ ಬೆನ್ನಲ್ಲೇ, ಈ ಕುರಿತು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮಹತ್ವದ ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ನಾಯಕರು ಮುಖ್ಯಮಂತ್ರಿಗಳನ್ನು ದೆಹಲಿಗೆ ಕರೆಸಿಕೊಂಡಿದ್ದಾರೆ ಎಂಬ ವಿಚಾರದ ಬಗ್ಗೆ ತಮಗೆ ಯಾವುದೇ ರೀತಿಯ ಮಾಹಿತಿ ಇಲ್ಲ ಎಂದು ಡಿಸಿಎಂ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನ ಸದಾಶಿವನಗರದಲ್ಲಿರುವ ತಮ್ಮ ನಿವಾಸದ ಬಳಿ ಭಾನುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು, ಮುಖ್ಯಮಂತ್ರಿಗಳ ದೆಹಲಿ ಪ್ರವಾಸದ ಕುರಿತು ಹರಡಿರುವ ವದಂತಿಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದರು. “ನಾನು ಈಗಷ್ಟೇ ಪ್ರಮುಖ ಸಭೆಯೊಂದನ್ನು ಮುಗಿಸಿಕೊಂಡು ಹೊರಗೆ ಬಂದಿದ್ದೇನೆ. ಸದ್ಯಕ್ಕೆ ಈ ವಿಷಯದ ಕುರಿತು ನನಗಂತೂ ಯಾವುದೇ ಅಧಿಕೃತ ಮಾಹಿತಿ ಲಭ್ಯವಿಲ್ಲ” ಎಂದು ಹೇಳುವ ಮೂಲಕ ಸದ್ಯಕ್ಕೆ ಹರಡುತ್ತಿರುವ ಸುದ್ದಿಗಳಲ್ಲಿ ಸತ್ಯಾಂಶವಿಲ್ಲ ಎಂಬ ಸೂಕ್ಷ್ಮ ಸಂದೇಶ ರವಾನಿಸಿದರು.

ರಾಜ್ಯ ರಾಜಕೀಯ ವಲಯದಲ್ಲಿ ಈ ಭೇಟಿಯ ಸುತ್ತ ಹಲವು ಹೂಹಾಪೋಹಗಳು ಸೃಷ್ಟಿಯಾಗಿದ್ದು, ಮುಂಬರುವ ಮಹತ್ವದ ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳನ್ನು ದೆಹಲಿಗೆ ಕರೆಯಿಸಲಾಗಿದೆಯೇ ಅಥವಾ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಮಾಡುವ ಕುರಿತು ಚರ್ಚಿಸಲು ಹೈಕಮಾಂಡ್ ಬುಲಾವ್ ನೀಡಿದೆಯೇ ಎಂದು ಮಾಧ್ಯಮದವರು ನೇರ ಪ್ರಶ್ನೆಗಳನ್ನು ಮುಂದಿಟ್ಟರು. ಇದಕ್ಕೆ ಉತ್ತರಿಸಿದ ಡಿಸಿಎಂ, ಆ ರೀತಿಯ ಯಾವುದೇ ಗಂಭೀರ ವಿಷಯಗಳು ನನ್ನ ಗಮನಕ್ಕೆ ಬಂದಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು.

ನಾಯಕತ್ವ ಬದಲಾವಣೆ ಅಥವಾ ಹೈಕಮಾಂಡ್ ಬುಲಾವ್‌ನಂತಹ ಸೂಕ್ಷ್ಮ ವಿಚಾರಗಳ ಕುರಿತು ಮಾಧ್ಯಮಗಳು ಕೇಳಿದ ಹತ್ತಾರು ಪ್ರಶ್ನೆಗಳಿಗೆ ಡಿ.ಕೆ. ಶಿವಕುಮಾರ್ ಅವರು “ನನಗೆ ಗೊತ್ತಿಲ್ಲ” ಎಂದು ಒಂದೇ ವಾಕ್ಯದಲ್ಲಿ ಉತ್ತರಿಸುವ ಮೂಲಕ ಸುದೀರ್ಘ ಚರ್ಚೆಗೆ ತಕ್ಷಣವೇ ತೆರೆ ಎಳೆದರು. ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ. ಶಿವಕುಮಾರ್ ಅವರ ಈ ನಡೆ, ಸದ್ಯಕ್ಕೆ ಪಕ್ಷದ ಆಂತರಿಕ ವಲಯದಲ್ಲಿನ ಗೊಂದಲಗಳಿಗೆ ಬ್ರೇಕ್ ಹಾಕುವ ಪ್ರಯತ್ನದಂತೆ ಕಂಡುಬಂದಿದೆ.

ಒಟ್ಟಾರೆಯಾಗಿ, ಮುಖ್ಯಮಂತ್ರಿಗಳ ದೆಹಲಿ ಭೇಟಿಯ ಸುತ್ತ ರಾಜಕೀಯ ವಲಯದಲ್ಲಿ ತರಹೇವಾರಿ ಚರ್ಚೆಗಳು ನಡೆಯುತ್ತಿದ್ದರೂ, ಸರ್ಕಾರದ ಮತ್ತು ಪಕ್ಷದ ಉನ್ನತ ಮಟ್ಟದಲ್ಲಿ ಈ ಬಗ್ಗೆ ಯಾವುದೇ ಅಧಿಕೃತ ನಡೆಗಳು ನಡೆದಿಲ್ಲ ಎಂಬುದನ್ನು ಉಪಮುಖ್ಯಮಂತ್ರಿಗಳ ಹೇಳಿಕೆ ಸಾಬೀತುಪಡಿಸಿದೆ. ಆದಾಗ್ಯೂ, ಮುಂಬರುವ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಯಾವೆಲ್ಲಾ ಬೆಳವಣಿಗೆಗಳು ನಡೆಯಲಿವೆ ಎಂಬುದನ್ನು ಕಾದುನೋಡಬೇಕಿದೆ.

Share. Facebook Twitter LinkedIn WhatsApp Email

Related Posts

ಇದು ಶ್ರೀ ಆದಿ ಶಂಕರಾಚಾರ್ಯರಿಗೆ ಭಗವಾನ್ ಶಿವನು ನೀಡಿದ ಪಂಚಲಿಂಗಗಳ ಮಹಿಮೆ: ತಪ್ಪದೇ ಓದಿ, ಕಷ್ಟಗಳೆಲ್ಲ ಪರಿಹಾರ

4 Mins Read

ALERT : ಬ್ರೇಕ್ ಫಾಸ್ಟ್ ಗೆ ಪೂರಿ, ವಡೆ, ಬ್ರೆಡ್-ಜಾಮ್ ತಿನ್ನೋ ಮುನ್ನ ಎಚ್ಚರ: ನಿಮ್ಮ ಆರೋಗ್ಯಕ್ಕೆ ಕಾದಿದೆ ಕಂಟಕ!

2 Mins Read

BIG NEWS: ‘ಒಡೆದ ಮನೆ’ಯಾದ ‘ಕರ್ನಾಟಕ ಯೂಥ್ ಕಾಂಗ್ರೆಸ್’: ತಾರಕ್ಕೇರಿದ ‘ಅಧ್ಯಕ್ಷ-ಉಪಾಧ್ಯಕ್ಷೆ’ ನಡುವೆ ಬಣ ರಾಜಕೀಯ!

2 Mins Read
Recent News

ಇದು ಶ್ರೀ ಆದಿ ಶಂಕರಾಚಾರ್ಯರಿಗೆ ಭಗವಾನ್ ಶಿವನು ನೀಡಿದ ಪಂಚಲಿಂಗಗಳ ಮಹಿಮೆ: ತಪ್ಪದೇ ಓದಿ, ಕಷ್ಟಗಳೆಲ್ಲ ಪರಿಹಾರ

ಸಿಎಂ ಸಿದ್ದರಾಮಯ್ಯಗೆ ಹೈಕಮಾಂಡ್ ಬುಲಾವ್ ಹಿನ್ನೆಲೆ : ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದೇನು ಗೊತ್ತಾ?

ALERT : ಬ್ರೇಕ್ ಫಾಸ್ಟ್ ಗೆ ಪೂರಿ, ವಡೆ, ಬ್ರೆಡ್-ಜಾಮ್ ತಿನ್ನೋ ಮುನ್ನ ಎಚ್ಚರ: ನಿಮ್ಮ ಆರೋಗ್ಯಕ್ಕೆ ಕಾದಿದೆ ಕಂಟಕ!

BIG NEWS: ‘ಒಡೆದ ಮನೆ’ಯಾದ ‘ಕರ್ನಾಟಕ ಯೂಥ್ ಕಾಂಗ್ರೆಸ್’: ತಾರಕ್ಕೇರಿದ ‘ಅಧ್ಯಕ್ಷ-ಉಪಾಧ್ಯಕ್ಷೆ’ ನಡುವೆ ಬಣ ರಾಜಕೀಯ!

State News
KARNATAKA

ಇದು ಶ್ರೀ ಆದಿ ಶಂಕರಾಚಾರ್ಯರಿಗೆ ಭಗವಾನ್ ಶಿವನು ನೀಡಿದ ಪಂಚಲಿಂಗಗಳ ಮಹಿಮೆ: ತಪ್ಪದೇ ಓದಿ, ಕಷ್ಟಗಳೆಲ್ಲ ಪರಿಹಾರ

By ವಸಂತ ಬಿ ಈಶ್ವರಗೆರೆ KARNATAKA 4 Mins Read

ಶ್ರೀ ಆದಿ ಶಂಕರಾಚಾರ್ಯರಿಗೆ ಭಗವಾನ್ ಶಿವನು ನೀಡಿದ ಪಂಚಲಿಂಗಗಳ ಮಹಿಮೆ. ಭಾರತದ ಆಧ್ಯಾತ್ಮಿಕ ಇತಿಹಾಸದಲ್ಲಿ ಶ್ರೀ ಆದಿ ಶಂಕರಾಚಾರ್ಯರ ಸ್ಥಾನ…

ಸಿಎಂ ಸಿದ್ದರಾಮಯ್ಯಗೆ ಹೈಕಮಾಂಡ್ ಬುಲಾವ್ ಹಿನ್ನೆಲೆ : ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದೇನು ಗೊತ್ತಾ?

ALERT : ಬ್ರೇಕ್ ಫಾಸ್ಟ್ ಗೆ ಪೂರಿ, ವಡೆ, ಬ್ರೆಡ್-ಜಾಮ್ ತಿನ್ನೋ ಮುನ್ನ ಎಚ್ಚರ: ನಿಮ್ಮ ಆರೋಗ್ಯಕ್ಕೆ ಕಾದಿದೆ ಕಂಟಕ!

BIG NEWS: ‘ಒಡೆದ ಮನೆ’ಯಾದ ‘ಕರ್ನಾಟಕ ಯೂಥ್ ಕಾಂಗ್ರೆಸ್’: ತಾರಕ್ಕೇರಿದ ‘ಅಧ್ಯಕ್ಷ-ಉಪಾಧ್ಯಕ್ಷೆ’ ನಡುವೆ ಬಣ ರಾಜಕೀಯ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.