Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮನೆಗೆ ಭೂಮಿ ಪಡೆದು ಸ್ಟೇಡಿಯಂ ನಿರ್ಮಿಸುವುದು ಎಷ್ಟು ಸರಿ: MLC ಛಲವಾದಿ ನಾರಾಯಣಸ್ವಾಮಿ ಪ್ರಶ್ನೆ

ಶೇ.60 ಕಮಿಷನ್, ಸರಕಾರಿ ನೌಕರರ ಆತ್ಮಹತ್ಯೆ- ಇವು ಸಾಧನೆಯೇ?: ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ಪ್ರಶ್ನೆ

BREAKING: ಟ್ವಿಶಾ ಶರ್ಮಾ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: 10 ದಿನಗಳಿಂದ ತಲೆಮರೆಸಿಕೊಂಡಿದ್ದ ಪತಿ ಮಾಸ್ಕ್ ಧರಿಸಿ ಜಬಲ್‌ಪುರ ಕೋರ್ಟ್‌ಗೆ ಶರಣು; ವಿಡಿಯೋ ವೈರಲ್!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಶೇ.60 ಕಮಿಷನ್, ಸರಕಾರಿ ನೌಕರರ ಆತ್ಮಹತ್ಯೆ- ಇವು ಸಾಧನೆಯೇ?: ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ಪ್ರಶ್ನೆ
KARNATAKA

ಶೇ.60 ಕಮಿಷನ್, ಸರಕಾರಿ ನೌಕರರ ಆತ್ಮಹತ್ಯೆ- ಇವು ಸಾಧನೆಯೇ?: ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ಪ್ರಶ್ನೆ

By ವಸಂತ ಬಿ ಈಶ್ವರಗೆರೆ

ಕಲಬುರಗಿ: ಮೂರು ವರ್ಷಗಳಲ್ಲಿ ನಮ್ಮ ಸಾಧನೆ ಇಂಥದ್ದೆಂದು ಕಾಂಗ್ರೆಸ್ ಮುಖಂಡರು ಹೇಳಲಿ ಎಂದು ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ಅವರು ಸವಾಲು ಹಾಕಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಹಗರಣಗಳೇ ನಿಮ್ಮ ಸಾಧನೆಯೇ? ವಾಲ್ಮೀಕಿ ನಿಗಮದ ಹಗರಣದಲ್ಲಿ 187 ಕೋಟಿ ರೂ. ಲೂಟಿ ಹೊಡೆದು ನಮ್ಮ ಒಬ್ಬ ಸಚಿವ ಜೈಲಿಗೆ ಹೋದ ಎಂಬುದು ಸಾಧನೆಯೇ ಎಂದು ಪ್ರಶ್ನಿಸಿದರು. ಎಸ್.ಇ.ಪಿ., ಟಿಎಸ್ಪಿ ಹಣ ದುರುಪಯೋಗ ಸಾಧನೆಯೇ ಎಂದು ಕೇಳಿದರು.

ಸಾಧನೆಯ ಕಾರಣಕ್ಕಾಗಿ ಕೆಎಸ್ಆರ್ಟಿಸಿ ನೌಕರರು ಚಳವಳಿಗೆ ಕರೆ ಕೊಟ್ಟಿದ್ದಾರಾ ಎಂದು ಪ್ರಶ್ನೆಯನ್ನು ಮುಂದಿಟ್ಟರು. 3 ಗಂಟೆಯೂ ರೈತರ ಪಂಪ್ಸೆಟ್ಗಳಿಗೆ 3 ಫೇಸ್ ಕರೆಂಟ್ ಕೊಡುತ್ತಿಲ್ಲ. ಇದು ಸಾಧನೆಯೇ? 3 ವರ್ಷದಲ್ಲಿ ಕರ್ನಾಟಕದ ಜನರು ಹೆಮ್ಮೆ ಪಡುವಂತೆ, ತಲೆಯೆತ್ತಿ ನಿಲ್ಲುವಂತೆ, ಇಡೀ ದೇಶದಲ್ಲಿ ಹೇಳಿಕೊಂಡು ಓಡಾಡುವಂತೆ ಯಾವ ಕೆಲಸ ಮಾಡಿದ್ದೀರಿ ಎಂದು ಪ್ರಶ್ನಿಸಿದರು.
ಶೇ 60 ಕಮಿಷನ್- ಅದು ಸಾಧನೆಯೇ? ಸರಕಾರಿ ನೌಕರರ ಆತ್ಮಹತ್ಯೆ- ಅದು ಸಾಧನೆಯೇ? ಎಂದ ಅವರು, ಗ್ಯಾರಂಟಿ ಬಗ್ಗೆ ಮಾತನಾಡುತ್ತಾರೆ. ಮುಖ್ಯಮಂತ್ರಿ ಕುರ್ಚಿಯಲ್ಲಿ ಎಷ್ಟು ದಿನ ಕುಳಿತಿರುತ್ತಾರೋ ಎಂಬ ಗ್ಯಾರಂಟಿ ಸಿದ್ದರಾಮಯ್ಯನವರಿಗೇ ಇಲ್ಲ ಎಂದು ವ್ಯಂಗ್ಯವಾಗಿ ತಿಳಿಸಿದರು. ಅವರ ಕುರ್ಚಿ ಬಗ್ಗೆ ಗ್ಯಾರಂಟಿ ಇಲ್ಲದ ಅವರು, ಇನ್ಯಾವ ಗ್ಯಾರಂಟಿ ಬಗ್ಗೆ ಮಾತನಾಡುತ್ತಾರೆ ಎಂದು ಕೇಳಿದರು.

ಹೆಮ್ಮೆ ಪಟ್ಟುಕೊಳ್ಳುವ ಸಾಧನೆ ಏನಿದೆ?

ಕರ್ನಾಟಕ ರಾಜ್ಯದ ಸಮಗ್ರ ಸಾಲ 10 ಲಕ್ಷ ಕೋಟಿ ರೂಪಾಯಿ. ಸಾಲ ಮಾಡದೇ ಗ್ಯಾರಂಟಿ ಯೋಜನೆ ಕೊಡುವ ಸ್ಥಿತಿಯಲ್ಲಿ ಇಲ್ಲ. ಸಾಧನೆ ಯಾವುದು ಎಂದು ಪ್ರಶ್ನೆ ಮಾಡಿದರು. ಹೆಮ್ಮೆ ಪಟ್ಟುಕೊಳ್ಳುವ ಸಾಧನೆ ಏನಿದೆ ಎಂದು ಕೇಳಿದರು.

ಪೆಟ್ರೋಲ್- ಡೀಸೆಲ್ ಮೇಲೆ ಕರ್ನಾಟಕ ಸರಕಾರ ಹಾಕಿದ ಸೆಸ್ ಜಾಸ್ತಿಯೇ ಅಥವಾ ಕೇಂದ್ರ ಸರಕಾರ ಹಾಕಿದ ಸೆಸ್ ಹೆಚ್ಚೇ ಎಂದು ಪ್ರಶ್ನಿಸಿದರು. ಕರ್ನಾಟಕ ಸರಕಾರ ಪೆಟ್ರೋಲ್- ಡೀಸೆಲ್ ಮೇಲೆ ಮೂರು ಬಾರಿ ಸೆಸ್ ಹಾಕಿದೆ ಎಂದು ಟೀಕಿಸಿದರು. ಕೇಂದ್ರ ಸರಕಾರ ಬೆಲೆ ಇಳಿಸಿದ ಮೇಲೂ ಸೆಸ್ ಹಾಕಿದ್ದು ಯಾಕೆ ಎಂದು ಕೇಳಿದರು. ಸೆಸ್ ಇಳಿಸಿ; ನಿಮ್ಮ ತೆರಿಗೆ ಹೆಚ್ಚೇ ಕೇಂದ್ರ ಸರಕಾರದ್ದು ಹೆಚ್ಚು ತೆರಿಗೆಯೇ ಎಂಬ ಚರ್ಚೆ ಆಗಲಿ ಎಂದು ಒತ್ತಾಯಿಸಿದರು.

ಉಪ ಚುನಾವಣೆಯಲ್ಲಿ ಜನಾದೇಶ ಖರೀದಿ

ಉಪ ಚುನಾವಣೆಯ ಗೆಲುವಿನ ಮರ್ಮ ಏನೆಂದು ಖಾಸಗಿಯಾಗಿ ಕೇಳಿದರೆ ಕಾಂಗ್ರೆಸ್ಸಿನವರೇ ಹೇಳುತ್ತಾರೆ. ಉಪ ಚುನಾವಣೆಯಲ್ಲಿ ಆಡಳಿತ ಪಕ್ಷವು ತನ್ನೆಲ್ಲ ಸಂಪತ್ತು, ಸಂಪನ್ಮೂಲ ಬಳಸಿ ಜನಾದೇಶವನ್ನು ಖರೀದಿ ಮಾಡುತ್ತದೆ. ಗುಂಡ್ಲುಪೇಟೆ, ನಂಜನಗೂಡು ಉಪ ಚುನಾವಣೆಯಲ್ಲಿ ಗೆದ್ದಿದ್ದರು. 5ನೇ ತಿಂಗಳಿಗೆ ಸಾರ್ವತ್ರಿಕ ಚುನಾವಣೆ ಆಗಿ ಸೋತರು. ಇದಕ್ಕೇನು ಹೇಳುತ್ತೀರಿ? ಗುಂಡ್ಲುಪೇಟೆ, ನಂಜನಗೂಡು ಮಾತ್ರವಲ್ಲ; ಪಕ್ಕದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮುಖ್ಯಮಂತ್ರಿಗಳೂ ಸೋತರು. ಇದಕ್ಕೆ ಏನು ಹೇಳುವಿರಿ ಎಂದು ಕೇಳಿದರು.

ಪತ್ರಕರ್ತರ ಬಸ್ ಪಾಸ್, ಹೆಲ್ತ್ ಸ್ಕೀಂ ಜಾರಿಗೊಳಿಸಲು ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ ಪ್ರಭಾಕರ್ ಭರವಸೆ

ಬೆಳಗಾವಿಯ ಮನೆಯಲ್ಲಿ ಗುಂಡು ಹಾರಿಸಿಕೊಂಡು KLE ಆಸ್ಪತ್ರೆ ವೈದ್ಯ ದಿನೇಶ್ ಭಟ್ಕಳ್ ಆತ್ಮಹತ್ಯೆ

Share. Facebook Twitter LinkedIn WhatsApp Email

Related Posts

ಮನೆಗೆ ಭೂಮಿ ಪಡೆದು ಸ್ಟೇಡಿಯಂ ನಿರ್ಮಿಸುವುದು ಎಷ್ಟು ಸರಿ: MLC ಛಲವಾದಿ ನಾರಾಯಣಸ್ವಾಮಿ ಪ್ರಶ್ನೆ

2 Mins Read

BREAKING: ದುಬಾರೆ ಆನೆ ಶಿಬಿರದಲ್ಲಿ ದುರಂತ: ಇಬ್ಬರು ಅರಣ್ಯಾಧಿಕಾರಿಗಳ ವಿರುದ್ಧ ಲೋಕಾಯುಕ್ತದಿಂದ ಸುಮೋಟೋ ಕೇಸ್ ದಾಖಲು

2 Mins Read

ಮಧುಮೇಹಿಗಳಿಗೆ ಗುಡ್ ನ್ಯೂಸ್, ಮಾರುಕಟ್ಟೆಗೆ ಬಂದಿದೆ ಹೊಸ ‘ಓಬೆಡಾ’ ಮಾತ್ರೆ; ಏನಿದರ ವಿಶೇಷ? ಇಲ್ಲಿದೆ

2 Mins Read
Recent News

ಮನೆಗೆ ಭೂಮಿ ಪಡೆದು ಸ್ಟೇಡಿಯಂ ನಿರ್ಮಿಸುವುದು ಎಷ್ಟು ಸರಿ: MLC ಛಲವಾದಿ ನಾರಾಯಣಸ್ವಾಮಿ ಪ್ರಶ್ನೆ

ಶೇ.60 ಕಮಿಷನ್, ಸರಕಾರಿ ನೌಕರರ ಆತ್ಮಹತ್ಯೆ- ಇವು ಸಾಧನೆಯೇ?: ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ಪ್ರಶ್ನೆ

BREAKING: ಟ್ವಿಶಾ ಶರ್ಮಾ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: 10 ದಿನಗಳಿಂದ ತಲೆಮರೆಸಿಕೊಂಡಿದ್ದ ಪತಿ ಮಾಸ್ಕ್ ಧರಿಸಿ ಜಬಲ್‌ಪುರ ಕೋರ್ಟ್‌ಗೆ ಶರಣು; ವಿಡಿಯೋ ವೈರಲ್!

ನೀಟ್‌-ಯುಜಿ ಹಗರಣ: ಫಿಸಿಕ್ಸ್ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ ಎನ್‌ಟಿಎ ತಜ್ಞೆಯ ಬಂಧನ; ಸಿಬಿಐನಿಂದ 11ನೇ ಅರೆಸ್ಟ್!

State News
KARNATAKA

ಮನೆಗೆ ಭೂಮಿ ಪಡೆದು ಸ್ಟೇಡಿಯಂ ನಿರ್ಮಿಸುವುದು ಎಷ್ಟು ಸರಿ: MLC ಛಲವಾದಿ ನಾರಾಯಣಸ್ವಾಮಿ ಪ್ರಶ್ನೆ

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಬೆಂಗಳೂರು: ಆನೇಕಲ್ ಸಮೀಪ ಕರ್ನಾಟಕ ಗೃಹ ಮಂಡಳಿ ಮೂಲಕ ರೈತರ ಫಲವತ್ತಾದ ಜಮೀನು ಪಡೆದು ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಮಾಡುವುದು…

ಶೇ.60 ಕಮಿಷನ್, ಸರಕಾರಿ ನೌಕರರ ಆತ್ಮಹತ್ಯೆ- ಇವು ಸಾಧನೆಯೇ?: ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ಪ್ರಶ್ನೆ

BREAKING: ದುಬಾರೆ ಆನೆ ಶಿಬಿರದಲ್ಲಿ ದುರಂತ: ಇಬ್ಬರು ಅರಣ್ಯಾಧಿಕಾರಿಗಳ ವಿರುದ್ಧ ಲೋಕಾಯುಕ್ತದಿಂದ ಸುಮೋಟೋ ಕೇಸ್ ದಾಖಲು

ಮಧುಮೇಹಿಗಳಿಗೆ ಗುಡ್ ನ್ಯೂಸ್, ಮಾರುಕಟ್ಟೆಗೆ ಬಂದಿದೆ ಹೊಸ ‘ಓಬೆಡಾ’ ಮಾತ್ರೆ; ಏನಿದರ ವಿಶೇಷ? ಇಲ್ಲಿದೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.