ಗದಗ : ಕ್ಷುಲಕ ಕಾರಣಕ್ಕೆ ಪತಿ ಪತ್ನಿ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಗದಗದಲ್ಲಿ ನಡೆದಿದೆ. ಕಬ್ಬಿಣದ ರಾಡಿನಿಂದ ಹೊಡೆದು ಪತಿಯನ್ನೇ ಪತ್ನಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ರೆಡ್ಡರನಾಗನೂರು ಗ್ರಾಮದಲ್ಲಿ ನಡೆದಿದೆ.
ವಿಶ್ವನಾಥ ಹಾದಿಮನಿ (28) ಎನ್ನುವ ಪತಿಯನ್ನು ಪತ್ನಿ ಕವಿತಾ ರಾಡಿಂದ ಹೊಡೆದು ಕೊಲೆ ಮಾಡಿದ್ದಾಳೆ. ಬೆಡ್ ರೂಮ್ನಲ್ಲಿ ಕಬ್ಬಿಣದ ರೋಡ್ ನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾಳೆ. ಪರಸ್ಪರ ಪ್ರೀತಿಸುತ್ತಿದ್ದ ಇಬ್ಬರು ಮನೆಯವರನ್ನು ಒಪ್ಪಿಸಿ ಮದುವೆಯಾಗಿದ್ದರು. 2022 ಫೆಬ್ರವರಿ ತಿಂಗಳಲ್ಲಿ ಮನೆಯಲ್ಲಿ ಒಪ್ಪಿಸಿ ಮದುವೆಯಾಗಿದ್ದರು ವಿಶ್ವನಾಥ ಕವಿತಾ ದಂಪತಿಗೆ ಮೂರು ವರ್ಷದ ಗಂಡು ಮಗು ಸಹ ಇದೆ ಆದರೆ ಮದುವೆಯಾದ ಮೇಲೆ ಇಬ್ಬರ ನಡುವೆ ಜಗಳ ಆರಂಭವಾಗಿದೆ. ಹಾಗಾಗಿ ಕಳೆದ ಮೂರು ವರ್ಷಗಳಿಂದ ಕವಿತಾ ತವರು ಮನೆಯಲ್ಲಿ ಇದ್ದಳು.
ಇತ್ತೀಚಿಗೆ ವಿಶ್ವನಾಥ ಸಹೋದರಿಯ ಮದುವೆ ಸಲುವಾಗಿ ಕವಿತಾ ಮರಳಿ ಗಂಡನ ಮನೆಗೆ ಬಂದಿದ್ದಳು. ಮತ್ತೆ ಮನೆಯಲ್ಲಿ ಇಬ್ಬರ ಮಧ್ಯೆ ಜಗಳ ಶುರುವಾಗಿ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿದೆ. ಬೆಡ್ ರೂಮ್ನಲ್ಲಿ ಕಬ್ಬಿಣದ ರಾಡ್ನಿಂದ ಗಂಡ ವಿಶ್ವನಾಥ್ ತಲೆಗೆ ಹೊಡೆದು ಕೊಲೆ ಮಾಡಿದ್ದಾಳೆ. ಘಟನೆ ಸಂಬಂಧ ನರಗುಂದ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಕವಿತಾ ಹಾದಿಮನಿಯನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.








