ಬೆಂಗಳೂರು: 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ-2 ಇಂದಿನಿಂದ (ಮೇ 18, 2026) ರಾಜ್ಯಾದ್ಯಂತ ಆರಂಭವಾಗುತ್ತಿದ್ದು, ಮೇ 25, 2026 ರವರೆಗೆ ನಡೆಯಲಿದೆ. ಈ ಬಾರಿಯ ಪರೀಕ್ಷೆಗಾಗಿ ರಾಜ್ಯದಾದ್ಯಂತ ಒಟ್ಟು 358 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಪ್ರಸಕ್ತ ಸಾಲಿನ ಪರೀಕ್ಷೆ-2ಕ್ಕೆ ಒಟ್ಟು 1,15,112 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಇವರಲ್ಲಿ 76,673 ಬಾಲಕರು ಹಾಗೂ 38,439 ಬಾಲಕಿಯರು ಒಳಗೊಂಡಿದ್ದಾರೆ. ವಿದ್ಯಾರ್ಥಿಗಳ ಪ್ರಕಾರದ (Student Type) ಆಧಾರದ ಮೇಲೆ ನೋಂದಣಿ ವಿವರ ಈ ಕೆಳಗಿನಂತಿದೆ:
CCERF: 61,205 ವಿದ್ಯಾರ್ಥಿಗಳು (ಬಾಲಕರು: 38,143, ಬಾಲಕಿಯರು: 23,062)
CCEPF: 18,505 ವಿದ್ಯಾರ್ಥಿಗಳು (ಬಾಲಕರು: 12,982, ಬಾಲಕಿಯರು: 5,523)
CCERR: 32,833 ವಿದ್ಯಾರ್ಥಿಗಳು (ಬಾಲಕರು: 23,705, ಬಾಲಕಿಯರು: 9,128)
CCEPR: 2,569 ವಿದ್ಯಾರ್ಥಿಗಳು (ಬಾಲಕರು: 1,843, ಬಾಲಕಿಯರು: 726)
ಶಾಲಾವಾರು ನೋಂದಣಿ ವಿವರ:
ರಾಜ್ಯದ ಒಟ್ಟು 13,798 ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಿಂದ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ.
ಸರ್ಕಾರಿ ಶಾಲೆಗಳು: ಒಟ್ಟು 5,488 ಶಾಲೆಗಳಿಂದ 55,403 ವಿದ್ಯಾರ್ಥಿಗಳು (ಬಾಲಕರು: 35,957, ಬಾಲಕಿಯರು: 19,446)
ಅನುದಾನಿತ ಶಾಲೆಗಳು: ಒಟ್ಟು 3,250 ಶಾಲೆಗಳಿಂದ 31,436 ವಿದ್ಯಾರ್ಥಿಗಳು (ಬಾಲಕರು: 21,157, ಬಾಲಕಿಯರು: 10,279)
ಅನುದಾನರಹಿತ ಶಾಲೆಗಳು: ಒಟ್ಟು 5,060 ಶಾಲೆಗಳಿಂದ 28,273 ವಿದ್ಯಾರ್ಥಿಗಳು (ಬಾಲಕರು: 19,559, ಬಾಲಕಿಯರು: 8,714)
ಫಲಿತಾಂಶ ಉತ್ತಮಪಡಿಸಿಕೊಳ್ಳಲು ವಿಶೇಷ ಅವಕಾಶ:
ಕಳೆದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರೂ ತಮ್ಮ ಅಂಕಗಳನ್ನು ಅಥವಾ ಫಲಿತಾಂಶವನ್ನು ಮತ್ತಷ್ಟು ಉತ್ತಮಪಡಿಸಿಕೊಳ್ಳಲು (Result Improvement) ಬಯಸಿ ಈ ಬಾರಿ ಒಟ್ಟು 11,881 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ.
ಖಾಸಗಿ ಅಭ್ಯರ್ಥಿಗಳಾಗಿ ಹಾಜರಾತಿ ಕೊರತೆಯಿದ್ದ ವಿದ್ಯಾರ್ಥಿಗಳು:2025-26ನೇ ಸಾಲಿನಲ್ಲಿ ಶಾಲಾ ಹಾಜರಾತಿ ಕೊರತೆಯ ಕಾರಣದಿಂದಾಗಿ ಮುಖ್ಯ ಪರೀಕ್ಷೆಗೆ (ಪರೀಕ್ಷೆ-1) ಹಾಜರಾಗಲು ಸಾಧ್ಯವಾಗದಿದ್ದ ವಿದ್ಯಾರ್ಥಿಗಳಿಗೆ ಮಂಡಳಿಯು ವಿಶೇಷ ಅವಕಾಶ ನೀಡಿದೆ. ಅಂತಹ ವಿದ್ಯಾರ್ಥಿಗಳಲ್ಲಿ 7,658 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ-2ಕ್ಕೆ ‘ಖಾಸಗಿ ವಿದ್ಯಾರ್ಥಿ’ಗಳಾಗಿ (Private Students) ನೋಂದಾಯಿಸಿಕೊಂಡು ಪರೀಕ್ಷೆ ಬರೆಯುತ್ತಿದ್ದಾರೆ.








