Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ಉತ್ತರಕನ್ನಡದಲ್ಲಿ ಘೋರ ಘಟನೆ : ಗೋವಾ ಉಪಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿ ಹಾವು ಕಡಿದು ಸಾವು!

ರಾಜ್ಯದಲ್ಲಿ ಜೂ.30ರಿಂದ SIR ಆರಂಭ : ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಹೇಗೆ? ದಾಖಲಾತಿಗಳೇನು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ

BREAKING NEWS

BREAKING: ಅಮೆರಿಕ-ನೈಜೀರಿಯಾ ಜಂಟಿ ಕಾರ್ಯಾಚರಣೆ : ISIS ಉಗ್ರ ಸಂಘಟನೆಯ ಕಮಾಂಡರ್ ‘ಅಬು ಬಿಲಾಲ್ ಅಲ್-ಮಿನುಕಿ’ ಖತಂ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದಲ್ಲಿ ಜೂ.30ರಿಂದ SIR ಆರಂಭ : ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಹೇಗೆ? ದಾಖಲಾತಿಗಳೇನು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ
KARNATAKA

ರಾಜ್ಯದಲ್ಲಿ ಜೂ.30ರಿಂದ SIR ಆರಂಭ : ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಹೇಗೆ? ದಾಖಲಾತಿಗಳೇನು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ

By ಸುರೇಶ್‌

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಗೆ ಅಧಿಕೃತವಾಗಿ ಚಾಲನೆ ದೊರೆತಿದೆ. ಈ ಕುರಿತು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಅವರು, ಮುಂಬರುವ ಜೂನ್ 30ರಿಂದ ಜುಲೈ 29ರ ವರೆಗೆ ಬೂತ್ ಮಟ್ಟದ ಅಧಿಕಾರಿಗಳು (BLO) ರಾಜ್ಯಾದ್ಯಂತ ಮನೆ ಮನೆಗೆ ಭೇಟಿ ನೀಡಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ನಡೆಸಲಿದ್ದಾರೆ ಎಂದು ಪ್ರಮುಖ ಮಾಹಿತಿ ನೀಡಿದರು.

ಮತದಾರರ ಪಟ್ಟಿ ಪರಿಷ್ಕರಣೆಯು ವ್ಯವಸ್ಥಿತವಾಗಿ ನಡೆಯಲಿದ್ದು, ಇದಕ್ಕಾಗಿ ವಿವಿಧ ಹಂತಗಳ ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿದೆ. ಮೊದಲ ಹಂತವಾಗಿ 2026ರ ಜೂನ್ 20ರಿಂದ ಜೂನ್ 29ರ ವರೆಗೆ ಅಗತ್ಯ ಸಿದ್ಧತೆಗಳು, ಅಧಿಕಾರಿಗಳಿಗೆ ತರಬೇತಿ ಹಾಗೂ ನಮೂನೆಗಳ ಮುದ್ರಣ ಕಾರ್ಯಗಳು ನಡೆಯಲಿವೆ. ಇದಾದ ಬಳಿಕ ಜೂನ್ 30ರಿಂದ ಜುಲೈ 29ರ ವರೆಗೆ ಬಿಎಲ್‍ಓಗಳು ಮತದಾರರ ಮನೆಗಳಿಗೆ ನೇರವಾಗಿ ಭೇಟಿ ನೀಡಿ, ನಿಗದಿತ ಗಣತಿ ನಮೂನೆಗಳನ್ನು ವಿತರಿಸಿ ಅಗತ್ಯ ಮಾಹಿತಿಗಳನ್ನು ಸಂಗ್ರಹಿಸಲಿದ್ದಾರೆ.

ಮನೆ ಮನೆ ಸಮೀಕ್ಷೆಯ ಪ್ರಕ್ರಿಯೆ ಪೂರ್ಣಗೊಂಡ ನಂತರ, 2026ರ ಆಗಸ್ಟ್ 5ರಂದು ಕರಡು ಮತದಾರರ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಲಾಗುವುದು. ಈ ಕರಡು ಪಟ್ಟಿಯಲ್ಲಿ ಯಾವುದೇ ತಿದ್ದುಪಡಿಗಳು, ಹೆಸರು ಸೇರ್ಪಡೆ ಅಥವಾ ಕೈಬಿಡುವಿಕೆಗಳಿದ್ದಲ್ಲಿ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಲು ಆಗಸ್ಟ್ 5ರಿಂದ ಸೆಪ್ಟೆಂಬರ್ 4ರ ವರೆಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.

ಅದರ ಮುಂದುವರಿದ ಭಾಗವಾಗಿ, ಆಗಸ್ಟ್ 5ರಿಂದ ಅಕ್ಟೋಬರ್ 3ರ ವರೆಗೆ ನೋಟಿಸ್ ಜಾರಿ ಹಂತ ಹಾಗೂ ಸಾರ್ವಜನಿಕರಿಂದ ಬಂದ ಹಕ್ಕು ಮತ್ತು ಆಕ್ಷೇಪಣೆಗಳ ಪರಿಶೀಲನೆ ಹಾಗೂ ವಿಲೇವಾರಿ ಪ್ರಕ್ರಿಯೆಗಳು ನಡೆಯಲಿವೆ. ಈ ಎಲ್ಲಾ ಹಂತಗಳು ಯಶಸ್ವಿಯಾಗಿ ಮುಗಿದ ನಂತರ, ದೋಷರಹಿತವಾದ ಅಂತಿಮ ಮತದಾರರ ಪಟ್ಟಿಯನ್ನು 2026ರ ಅಕ್ಟೋಬರ್ 7ರಂದು ಚುನಾವಣಾ ಆಯೋಗವು ಪ್ರಕಟಿಸಲಿದೆ.

ಇದೇ ಸಂದರ್ಭದಲ್ಲಿ ರಾಜ್ಯದ ಪ್ರಸ್ತುತ ಮತದಾರರ ಸಂಖ್ಯೆಯ ವಿವರವನ್ನು ಹಂಚಿಕೊಂಡ ಮುಖ್ಯ ಚುನಾವಣಾಧಿಕಾರಿಗಳು, 2026ರ ಮೇ 12ರ ಅಂಕಿ-ಅಂಶಗಳ ಪ್ರಕಾರ ಕರ್ನಾಟಕ ರಾಜ್ಯದಲ್ಲಿ ಸದ್ಯ ಒಟ್ಟು 5,55,74,064 (ಐದು ಕೋಟಿ ಐವತ್ತೈದು ಲಕ್ಷದ ಎಪ್ಪತ್ತನಾಲ್ಕು ಸಾವಿರದ ಅರವತ್ತನಾಲ್ಕು) ನೋಂದಾಯಿತ ಮತದಾರರಿದ್ದಾರೆ ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿ ಶೇ.86ರಷ್ಟು ಮ್ಯಾಪಿಂಗ್:

ರಾಜ್ಯದಲ್ಲಿ 86.29% ಮತದಾರರ ಮ್ಯಾಪಿಂಗ್ ಆಗಿದೆ. ಜಿಬಿಎ ವ್ಯಾಪ್ತಿಯಲ್ಲಿ ಅತಿ ಕಡಿಮೆ ಮತದಾರರ ಮ್ಯಾಪಿಂಗ್ ನಡೆದಿದೆ. ಬಿಬಿಎಂಪಿ (ಉತ್ತರ)ದಲ್ಲಿ 67.31%, ಬಿಬಿಎಂಪಿ (ಕೇಂದ್ರ) 64.87% ಮತ್ತು ಬಿಬಿಎಂಪಿ (ದಕ್ಷಿಣ) 64.61% ಮ್ಯಾಪಿಂಗ್ ಆಗಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ 75.06% ಮತದಾರರ ಮ್ಯಾಪಿಂಗ್ ಆಗಿದೆ ಎಂದು ವಿವರಿಸಿದರು.

ಮಂಡ್ಯದಲ್ಲಿ 95.39%, ಕೊಡಗು 95.18%, ಚಾಮರಾಜನಗರ 94.93%, ಚಿತ್ರದುರ್ಗ 94.85%, ಕೊಪ್ಪಳ 94.79%, ಬಳ್ಳಾರಿ 94.73%, ಬಾಗಲಕೋಟೆ 94.61%, ತುಮಕೂರು 93.56%, ಚಿಕ್ಕಬಳ್ಳಾಪುರ 92.54%, ಹಾವೇರಿ 92.03%, ಬೀದರ್ 91.84%, ಯಾದಗಿರಿ 91.78%, ಉಡುಪಿ 91.64%, ಉತ್ತರ ಕನ್ನಡ 91.11% ಮ್ಯಾಪಿಂಗ್ ಆಗಿದೆ ಎಂದರು.

ಗುಲ್ಬರ್ಗ, ಗದಗ, ಕೋಲಾರ, ರಾಮನಗರದಲ್ಲಿ 90% ಆಸುಪಾಸು ಮ್ಯಾಪಿಂಗ್ ಆಗಿದೆ. ಹಾಸನ, ಬೆಳಗಾವಿಯಲ್ಲಿ 89.60 ಆಸುಪಾಸು ಮ್ಯಾಪಿಂಗ್ ಮಾಡಲಾಗಿದೆ. ವಿಜಯನಗರ 88.36%, ಮೈಸೂರು, ದಾವಣಗೆರೆ, ಶಿವಮೊಗ್ಗ, ಧಾರವಾಡ, ಬಿಜಾಪುರದಲ್ಲಿ 87% ಆಸುಪಾಸು ಮ್ಯಾಪಿಂಗ್ ಮಾಡಲಾಗಿದೆ. ದ.ಕನ್ನಡ, ಬೆಂಗಳೂರು ಗ್ರಾಮ, ಚಿಕ್ಕಮಗಳೂರು 85-86% ಆಸುಪಾಸು ಮ್ಯಾಪಿಂಗ್ ಆಗಿದೆ ಎಂದು ತಿಳಿಸಿದರು.

Share. Facebook Twitter LinkedIn WhatsApp Email

Related Posts

SHOCKING : ಉತ್ತರಕನ್ನಡದಲ್ಲಿ ಘೋರ ಘಟನೆ : ಗೋವಾ ಉಪಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿ ಹಾವು ಕಡಿದು ಸಾವು!

1 Min Read

ಸುಕನ್ಯಾ ಸಮೃದ್ಧಿ ಯೋಜನೆ: ಮೆಚ್ಯೂರಿಟಿಗೂ ಮುನ್ನವೇ ಹಣ ಡ್ರಾ ಮಾಡಬಹುದೇ? ನಿಯಮಗಳು ಇಲ್ಲಿವೆ!

2 Mins Read

BREAKING : ಮೋದಿ ಸಂಚರಿಸುವ ರಸ್ತೆಯಲ್ಲಿ ಜಿಲೇಟಿನ್ ಕಡ್ಡಿ ಪತ್ತೆ ಕೇಸ್ : ಕೊನೆಗೂ ಅಸಲಿ ಕಾರಣ ಪತ್ತೆ!

2 Mins Read
Recent News

SHOCKING : ಉತ್ತರಕನ್ನಡದಲ್ಲಿ ಘೋರ ಘಟನೆ : ಗೋವಾ ಉಪಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿ ಹಾವು ಕಡಿದು ಸಾವು!

ರಾಜ್ಯದಲ್ಲಿ ಜೂ.30ರಿಂದ SIR ಆರಂಭ : ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಹೇಗೆ? ದಾಖಲಾತಿಗಳೇನು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ

BREAKING NEWS

BREAKING: ಅಮೆರಿಕ-ನೈಜೀರಿಯಾ ಜಂಟಿ ಕಾರ್ಯಾಚರಣೆ : ISIS ಉಗ್ರ ಸಂಘಟನೆಯ ಕಮಾಂಡರ್ ‘ಅಬು ಬಿಲಾಲ್ ಅಲ್-ಮಿನುಕಿ’ ಖತಂ!

ಸುಕನ್ಯಾ ಸಮೃದ್ಧಿ ಯೋಜನೆ: ಮೆಚ್ಯೂರಿಟಿಗೂ ಮುನ್ನವೇ ಹಣ ಡ್ರಾ ಮಾಡಬಹುದೇ? ನಿಯಮಗಳು ಇಲ್ಲಿವೆ!

State News
KARNATAKA

SHOCKING : ಉತ್ತರಕನ್ನಡದಲ್ಲಿ ಘೋರ ಘಟನೆ : ಗೋವಾ ಉಪಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿ ಹಾವು ಕಡಿದು ಸಾವು!

By ಸುರೇಶ್‌ KARNATAKA 1 Min Read

ಉತ್ತರಕನ್ನಡ : ಉತ್ತರ ಕನ್ನಡದಲ್ಲಿ ಘೋರವಾದ ಘಟನೆ ಒಂದು ನಡೆದಿದ್ದು, ಗೋವಾ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಕೇತನ್ ಭಾಟಿಕರ್ ಅವರು…

ರಾಜ್ಯದಲ್ಲಿ ಜೂ.30ರಿಂದ SIR ಆರಂಭ : ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಹೇಗೆ? ದಾಖಲಾತಿಗಳೇನು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ

ಸುಕನ್ಯಾ ಸಮೃದ್ಧಿ ಯೋಜನೆ: ಮೆಚ್ಯೂರಿಟಿಗೂ ಮುನ್ನವೇ ಹಣ ಡ್ರಾ ಮಾಡಬಹುದೇ? ನಿಯಮಗಳು ಇಲ್ಲಿವೆ!

BREAKING : ಮೋದಿ ಸಂಚರಿಸುವ ರಸ್ತೆಯಲ್ಲಿ ಜಿಲೇಟಿನ್ ಕಡ್ಡಿ ಪತ್ತೆ ಕೇಸ್ : ಕೊನೆಗೂ ಅಸಲಿ ಕಾರಣ ಪತ್ತೆ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.