Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Rain Alert : ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ರಾಜ್ಯದಲ್ಲಿ ಮುಂದಿನ 4-5 ದಿನ ಭಾರಿ ಮಳೆ

ಜನಸಾಮಾನ್ಯರಿಗೆ ಬಿಗ್ ಶಾಕ್ : ಪೆಟ್ರೋಲ್ ಜೊತೆ ಅಡುಗೆ ಎಣ್ಣೆ, ಅಕ್ಕಿ ಬೆಲೆಯೂ ಏರಿಕೆ | Rice Cooking oil prices Hike

ಮೋದಿ ಯುಎಇ ಪ್ರವಾಸ ಯಶಸ್ವಿ: ಭಾರತದಲ್ಲಿ ₹41,000 ಕೋಟಿಗೂ ಅಧಿಕ ಹೂಡಿಕೆಗೆ ಯುಎಇ ಮುದ್ರೆ, ರಕ್ಷಣೆ ಮತ್ತು ಇಂಧನ ವಲಯದಲ್ಲಿ ಮಹತ್ವದ ಒಪ್ಪಂದ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಜನಸಾಮಾನ್ಯರಿಗೆ ಬಿಗ್ ಶಾಕ್ : ಪೆಟ್ರೋಲ್ ಜೊತೆ ಅಡುಗೆ ಎಣ್ಣೆ, ಅಕ್ಕಿ ಬೆಲೆಯೂ ಏರಿಕೆ | Rice Cooking oil prices Hike
KARNATAKA

ಜನಸಾಮಾನ್ಯರಿಗೆ ಬಿಗ್ ಶಾಕ್ : ಪೆಟ್ರೋಲ್ ಜೊತೆ ಅಡುಗೆ ಎಣ್ಣೆ, ಅಕ್ಕಿ ಬೆಲೆಯೂ ಏರಿಕೆ | Rice Cooking oil prices Hike

By kannadanewsnow57

ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಈಗ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯ ಬೆನ್ನಲ್ಲೇ ಅಡುಗೆ ಎಣ್ಣೆ ಹಾಗೂ ಅಕ್ಕಿಯ ಬೆಲೆಯೂ ಗಗನಕ್ಕೇರಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮಿತವ್ಯಯದ ಕರೆ ನೀಡಿದ ಬೆನ್ನಲ್ಲೇ ಈ ಬೆಲೆ ಏರಿಕೆ ಕಂಡುಬಂದಿದ್ದು, ಸಾಮಾನ್ಯ ಜನರು ಜೀವನ ನಿರ್ವಹಣೆಗೆ ಪರದಾಡುವಂತಾಗಿದೆ.

ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಗಮನಾರ್ಹವಾಗಿ ಹೆಚ್ಚಾಗಿವೆ. ಪೆಟ್ರೋಲ್ ದರ ಪ್ರತಿ ಲೀಟರ್ಗೆ 3.27 ರೂ. ಹಾಗೂ ಡೀಸೆಲ್ ದರ 3.12 ರೂ. ನಷ್ಟು ಏರಿಕೆಯಾಗಿದೆ.

ಅಕ್ಕಿ ಬೆಲೆ ಏರಿಕೆ ಬಿಸಿ

ಅಕ್ಕಿಯ ರಫ್ತು ಹೆಚ್ಚಾಗಿರುವುದರಿಂದ ಸ್ಥಳೀಯ ಮಾರುಕಟ್ಟೆಯಲ್ಲಿ ಅಕ್ಕಿ ಕೊರತೆ ಉಂಟಾಗಿದ್ದು, ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ವರ್ತಕರು ತಿಳಿಸಿದ್ದಾರೆ. ವಿವಿಧ ತಳಿಯ ಅಕ್ಕಿಗಳ ದರ ಈ ಕೆಳಗಿನಂತಿದೆ:

ಬಾಸ್ಮತಿ ಅಕ್ಕಿ: 90 ರೂ. ನಿಂದ 115 ರೂ. ಗೆ ಏರಿಕೆ.

ಜೀರಾ ಅಕ್ಕಿ: 180 ರೂ. ನಿಂದ 220 ರೂ. ಗೆ ಏರಿಕೆ.

ಸೋನಾಮಸೂರಿ: 40 ರೂ. ನಿಂದ 45 ರೂ. ಗೆ ಏರಿಕೆ.

ರಾಜಮುಡಿ: 100 ರೂ. ನಿಂದ 130 ರೂ. ಗೆ ಏರಿಕೆ.

ದಪ್ಪ ಅಕ್ಕಿ: 60 ರೂ. ನಿಂದ 70 ರೂ. ಗೆ ಏರಿಕೆಯಾಗಿದೆ.

ಅಡುಗೆ ಎಣ್ಣೆ ಬೆಲೆಯಲ್ಲೂ ಹೆಚ್ಚಳ
ಅಡುಗೆ ಎಣ್ಣೆಯ ದರವೂ ಸಹ ಏರಿಕೆಯ ಹಾದಿಯಲ್ಲಿದೆ. ಸೂರ್ಯಕಾಂತಿ ಎಣ್ಣೆ ಪ್ರತಿ ಲೀಟರ್ಗೆ 2 ರೂ. ನಷ್ಟು ಹೆಚ್ಚಾಗಿದ್ದು, ದೊಡ್ಡ ಪ್ರಮಾಣದ ಟಿನ್ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. 15 ಲೀಟರ್ ಅಡುಗೆ ಎಣ್ಣೆಯ ಟಿನ್ ಬೆಲೆ ಬರೋಬ್ಬರಿ 50 ರೂ. ಗಳಷ್ಟು ದುಬಾರಿಯಾಗಿದೆ.

ಶ್ರೀಲಂಕಾ ಸೇರಿದಂತೆ ವಿದೇಶಗಳಿಗೆ ಅಕ್ಕಿ ರಫ್ತು ಹೆಚ್ಚಾಗಿರುವುದು ಬೆಲೆ ಏರಿಕೆಗೆ ಒಂದು ಪ್ರಮುಖ ಕಾರಣ.

ಬೇಸಿಗೆ ಸಮಯದಲ್ಲಿ ಭತ್ತದ ಇಳುವರಿ ಕಡಿಮೆಯಾಗಿರುವುದು ಸಹ ಬೆಲೆ ಏರಿಕೆಗೆ ಪೂರಕವಾಗಿದೆ.

ಪ್ರಧಾನಿಯವರ ಮಿತವ್ಯಯದ ಕರೆ ನಡುವೆಯೂ ಮಾರುಕಟ್ಟೆಯಲ್ಲಿ ಬೆಲೆಗಳು ಏರುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ.

ಒಟ್ಟಾರೆಯಾಗಿ, ದಿನಬಳಕೆಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಮಧ್ಯಮ ಮತ್ತು ಕೆಳವರ್ಗದ ಜನರ ಮಾಸಿಕ ಬಜೆಟ್ ಸಂಪೂರ್ಣವಾಗಿ ಏರುಪೇರಾಗಿದೆ.

Big shock for common people: Cooking oil rice prices also increase along with petrol | Rice Cooking oil prices Hike
Share. Facebook Twitter LinkedIn WhatsApp Email

Related Posts

Rain Alert : ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ರಾಜ್ಯದಲ್ಲಿ ಮುಂದಿನ 4-5 ದಿನ ಭಾರಿ ಮಳೆ

1 Min Read

ರಾಜ್ಯದ SC, ST ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: ಬೆಂಗಳೂರಿನಲ್ಲಿ ಉಚಿತ ವಿಶೇಷ ತರಬೇತಿಗೆ ಅರ್ಜಿ ಆಹ್ವಾನ

2 Mins Read

GOOD NEWS : ಪ್ರಧಾನಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ: ಸೌರಶಕ್ತಿ ಅಳವಡಿಸಿ, ಮಾಸಿಕ `ಕರೆಂಟ್ ಬಿಲ್’ ನಿಂದ ಮುಕ್ತಿ ಪಡೆಯಿರಿ!

1 Min Read
Recent News

Rain Alert : ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ರಾಜ್ಯದಲ್ಲಿ ಮುಂದಿನ 4-5 ದಿನ ಭಾರಿ ಮಳೆ

ಜನಸಾಮಾನ್ಯರಿಗೆ ಬಿಗ್ ಶಾಕ್ : ಪೆಟ್ರೋಲ್ ಜೊತೆ ಅಡುಗೆ ಎಣ್ಣೆ, ಅಕ್ಕಿ ಬೆಲೆಯೂ ಏರಿಕೆ | Rice Cooking oil prices Hike

ಮೋದಿ ಯುಎಇ ಪ್ರವಾಸ ಯಶಸ್ವಿ: ಭಾರತದಲ್ಲಿ ₹41,000 ಕೋಟಿಗೂ ಅಧಿಕ ಹೂಡಿಕೆಗೆ ಯುಎಇ ಮುದ್ರೆ, ರಕ್ಷಣೆ ಮತ್ತು ಇಂಧನ ವಲಯದಲ್ಲಿ ಮಹತ್ವದ ಒಪ್ಪಂದ!

​ಚೀನಾ ಪ್ರವಾಸ ಅಭೂತಪೂರ್ವ ಯಶಸ್ಸು, ಇದೊಂದು ಐತಿಹಾಸಿಕ ಕ್ಷಣ: ಶ್ವೇತಭವನಕ್ಕೆ ಮರಳಿದ ಡೊನಾಲ್ಡ್ ಟ್ರಂಪ್ ಹರ್ಷ!

State News
KARNATAKA

Rain Alert : ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ರಾಜ್ಯದಲ್ಲಿ ಮುಂದಿನ 4-5 ದಿನ ಭಾರಿ ಮಳೆ

By kannadanewsnow57 KARNATAKA 1 Min Read

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪ್ರಭಾವದಿಂದಾಗಿ ಕರ್ನಾಟಕದಾದ್ಯಂತ ಮುಂದಿನ 4-5 ದಿನಗಳ ಕಾಲ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ…

ಜನಸಾಮಾನ್ಯರಿಗೆ ಬಿಗ್ ಶಾಕ್ : ಪೆಟ್ರೋಲ್ ಜೊತೆ ಅಡುಗೆ ಎಣ್ಣೆ, ಅಕ್ಕಿ ಬೆಲೆಯೂ ಏರಿಕೆ | Rice Cooking oil prices Hike

ರಾಜ್ಯದ SC, ST ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: ಬೆಂಗಳೂರಿನಲ್ಲಿ ಉಚಿತ ವಿಶೇಷ ತರಬೇತಿಗೆ ಅರ್ಜಿ ಆಹ್ವಾನ

GOOD NEWS : ಪ್ರಧಾನಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ: ಸೌರಶಕ್ತಿ ಅಳವಡಿಸಿ, ಮಾಸಿಕ `ಕರೆಂಟ್ ಬಿಲ್’ ನಿಂದ ಮುಕ್ತಿ ಪಡೆಯಿರಿ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.