ಬೆಂಗಳೂರು: ರಾಜ್ಯ ಸರ್ಕಾರದ 6ನೇ ಗ್ಯಾರಂಟಿ ಎಂದೇ ಬಿಂಬಿತವಾಗಿರುವ ‘ಭೂ ಗ್ಯಾರಂಟಿ’ ಯೋಜನೆಯಡಿ, ಬೆಂಗಳೂರಿನ ನಾಗರಿಕರ ಆಸ್ತಿ ದಾಖಲೆಗಳ ಗೊಂದಲ ನಿವಾರಿಸಲು ಬಿಬಿಎಂಪಿ ಇಂದಿನಿಂದ (ಶನಿವಾರ) ‘ನನ್ನ ಇ-ಖಾತಾ, ನನ್ನ ಹಕ್ಕು’ ಎಂಬ ವಿಶೇಷ ಅಭಿಯಾನವನ್ನು ಕೈಗೊಂಡಿದೆ.
ಮುಂದಿನ 3 ತಿಂಗಳುಗಳ ಕಾಲ ಪ್ರತಿ ಶನಿವಾರ ಈ ಅಭಿಯಾನ ನಡೆಯಲಿದ್ದು, ಸಾರ್ವಜನಿಕರು ತಮ್ಮ ಆಸ್ತಿಗಳಿಗೆ ಸಂಬಂಧಿಸಿದ ಇ-ಖಾತಾ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಿಕೊಳ್ಳಲು ಇದೊಂದು ಉತ್ತಮ ಅವಕಾಶವಾಗಿದೆ.
ಸಮಯ ಮತ್ತು ಸ್ಥಳ: ಪ್ರತಿ ಶನಿವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಬಿಬಿಎಂಪಿಯ 52 ಸಹಾಯಕ ಕಂದಾಯ ಅಧಿಕಾರಿಗಳ (ARO) ಕಚೇರಿಗಳಲ್ಲಿ ಈ ಶಿಬಿರಗಳು ನಡೆಯಲಿವೆ.
ಶುಲ್ಕದಲ್ಲಿ ಭಾರಿ ಕಡಿತ: ಈ ಹಿಂದೆ ಬಿ-ಖಾತಾದಿಂದ ಎ-ಖಾತಾಕ್ಕೆ ಪರಿವರ್ತಿಸಲು ನಿಗದಿಪಡಿಸಲಾಗಿದ್ದ ಶುಲ್ಕವನ್ನು ಶೇ.5 ರಿಂದ ಕೇವಲ ಶೇ.2 ಕ್ಕೆ ಇಳಿಸಲಾಗಿದೆ. ಇದು ನಾಗರಿಕರಿಗೆ ಆರ್ಥಿಕವಾಗಿ ದೊಡ್ಡ ಮಟ್ಟದ ಉಳಿತಾಯ ತರಲಿದೆ.
ಯಾರು ಭಾಗವಹಿಸಬಹುದು?: ಖಾತಾ ವರ್ಗಾವಣೆ, ಹೊಸ ಇ-ಖಾತಾ ಪಡೆಯುವವರು, ಬಾಕಿ ಇರುವ ಅರ್ಜಿಗಳ ವಿಲೇವಾರಿ ಹಾಗೂ ಮೊದಲ ಬಾರಿಗೆ ಅರ್ಜಿ ಸಲ್ಲಿಸುವವರು ಈ ಶಿಬಿರದ ಪ್ರಯೋಜನ ಪಡೆಯಬಹುದು.
ಸಿಗಲಿರುವ ಸೇವೆಗಳು:
ಇ-ಖಾತಾ ವಿತರಣೆ: ಹೊಸ ಇ-ಖಾತಾ ಮತ್ತು ಬಿ-ಖಾತಾದಿಂದ ಎ-ಖಾತಾ ಪರಿವರ್ತನೆಗೆ ನೆರವು.
ತಿದ್ದುಪಡಿಗಳು: ಹಳೆಯ ದಾಖಲೆಗಳಲ್ಲಿರುವ ತಪ್ಪುಗಳ ತಿದ್ದುಪಡಿಗೆ ಅವಕಾಶ.
ತಾಂತ್ರಿಕ ಮಾರ್ಗದರ್ಶನ: ಮೊದಲ ಬಾರಿಗೆ ಅರ್ಜಿ ಸಲ್ಲಿಸುವವರಿಗೆ ಹಂತ ಹಂತವಾಗಿ ಮಾಹಿತಿ ನೀಡಲು ಸಿಬ್ಬಂದಿ ಲಭ್ಯವಿರುತ್ತಾರೆ.
ಸಾರ್ವಜನಿಕರಿಗೆ ಸೂಚನೆ:
ನಾಗರಿಕರು ತಮ್ಮ ಆಸ್ತಿಗೆ ಸಂಬಂಧಿಸಿದ ಮೂಲ ದಾಖಲೆಗಳು, ಗುರುತಿನ ಚೀಟಿ ಮತ್ತು ಆಸ್ತಿ ತೆರಿಗೆ ಪಾವತಿಸಿದ ರಸೀದಿಗಳೊಂದಿಗೆ ಸಮೀಪದ ಎಆರ್ಓ ಕಚೇರಿಗೆ ಭೇಟಿ ನೀಡುವಂತೆ ಬಿಬಿಎಂಪಿ ಮನವಿ ಮಾಡಿದೆ. ಪ್ರತಿ ಕೇಂದ್ರದಲ್ಲಿ ದಿನಕ್ಕೆ ಅಂದಾಜು 100 ರಿಂದ 200 ನಾಗರಿಕರಿಗೆ ಸೇವೆ ನೀಡಲು ಗುರಿ ಹೊಂದಲಾಗಿದ್ದು, ಹೆಚ್ಚಿನ ಜನದಟ್ಟಣೆ ಕಂಡುಬಂದಲ್ಲಿ ಟೋಕನ್ ವ್ಯವಸ್ಥೆ ಮಾಡಲಾಗುವುದು.
ನಿಮ್ಮ ಆಸ್ತಿಯ ಸುರಕ್ಷತೆಗಾಗಿ ʼಎʼ ಖಾತಾ ಪಡೆಯಿರಿ
• ‘ಎʼ ಖಾತಾ ಇದ್ದಲ್ಲಿ ಕಟ್ಟಡ ನಕ್ಷೆ ಅನುಮೋದನೆ ಪಡೆಯುವುದು ಇನ್ನೂ ಸುಲಭ
• ಬ್ಯಾಂಕ್ನಿಂದ ಸಾಲ ಸೌಲಭ್ಯ ಪಡೆಯಲು ಉಪಯುಕ್ತ
• ಸರಿಯಾದ ದಾಖಲಾತಿಯೊಂದಿಗೆ ನಿಮ್ಮ ಆಸ್ತಿಗೆ ಹೆಚ್ಚಿನ ಮೌಲ್ಯ ಮತ್ತು ಇನ್ನಷ್ಟು ಸುರಕ್ಷಿತ#BhooGuarantee pic.twitter.com/4XKo5WpPZK— DIPR Karnataka (@KarnatakaVarthe) May 15, 2026
ಬೆಂಗಳೂರಿಗರಿಗೆ 6ನೇ ಗ್ಯಾರಂಟಿ
ಭೂ ಗ್ಯಾರಂಟಿ
ʼಬಿʼ ಖಾತಾದಿಂದ ʼಎʼ ಖಾತಾ ಪರಿವರ್ತನಾ ಯೋಜನೆಯಡಿ 7 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಸಿಗಲಿದೆ ನೇರ ಸೌಲಭ್ಯ#BhooGuarantee pic.twitter.com/ie6Dsxbe0R
— DIPR Karnataka (@KarnatakaVarthe) May 15, 2026
ಕಡಿಮೆ ಶುಲ್ಕ ; ಹೆಚ್ಚು ಲಾಭ
100 ದಿನಗಳ ಒಳಗಾಗಿ ಅರ್ಜಿ ಸಲ್ಲಿಸಿ ಮತ್ತು ಮಾರ್ಗಸೂಚಿ ಬೆಲೆಯ ಶೇ.5ರ ಬದಲಿಗೆ ಶೇ.2ರಷ್ಟು ಶುಲ್ಕ ಪಾವತಿಸಿ, ನಿಮ್ಮ ʼಬಿʼ ಖಾತೆಯನ್ನು ʼಎʼ ಖಾತೆಗೆ ಪರಿವರ್ತಿಸಿಕೊಳ್ಳಿ.#BhooGuarantee pic.twitter.com/SHp28HibgU
— DIPR Karnataka (@KarnatakaVarthe) May 15, 2026








