ಬೆಂಗಳೂರು : ರಾಜ್ಯ ಸರ್ಕಾರ ಶಾಲೆಗಳಲ್ಲಿ ಹಿಜಾಬ್ ಗೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ಬಿಜೆಪಿ ಆಡಳಿತದಲ್ಲಿ ಇದ್ದಾಗ ಮಾಡಿದ ನಿಷೇಧವನ್ನು ರಾಜ್ಯ ಸರ್ಕಾರ ವಾಪಸ್ ಪಡೆದಿದೆ. ಯಾವುದೇ ಸಾಂಪ್ರದಾಯಿಕ ಸಂಕೇತವನ್ನು ಧರಿಸಬಹುದು. ಅದು ಪೇಟ ಆಗಿರಲಿ, ಟರ್ಬನ್ ಆಗಿರಲಿ, ಜನಿವಾರ ಆಗಿರಲಿ, ಪವಿತ್ರದಾರ, ಶಿವಧಾರ, ರುದ್ರಾಕ್ಷಿ ಅಥವಾ ಹಿಜಾಬ್ ಅನ್ನು ಧರಿಸಿ ಬರುವುದಕ್ಕೆ ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದೆ. ಇದಕ್ಕೆ ಇದೀಗ ವಿಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
ಇನ್ನು ಈ ವಿಚಾರವಾಗಿ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯೆ ನೀಡಿದ್ದು, ಮಕ್ಕಳ ಹಿತ ದೃಷ್ಟಿಯಿಂದ ಈ ಆದೇಶವನ್ನು ಹಿಂಪಡೆದಿದ್ದೇವೆ . ಪದೇ ಪದೇ ಯಾಕೆ ಹಿಜಾಬ್ ವಿಚಾರವಾಗಿ ಮಾತನಾಡುತ್ತೀರಿ? ಬಿಜೆಪಿಯವರು ಮಕ್ಕಳ ವಿದ್ಯಾಭ್ಯಾಸಕ್ಕೆ ಕೈ ಹಾಕಬಾರದು. ಜನಿವಾರ ಕಟ್ ಮಾಡಿದಾಗ ನಿಮಗೆ ಕಾಣಿಸಲಿಲ್ಲವೇ? ಏಕೆ ಪದೇ ಪದೇ ಹಿಜಾಬ್ ಬಗ್ಗೆ ಮಾತನಾಡುತ್ತೀರಿ?
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿರುವ ಬಗ್ಗೆ ಯಾಕೆ ಮಾತನಾಡುತ್ತಿಲ್ಲ?ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನಿಯಕ್ಕೆ ಮಾತನಾಡುತ್ತಿಲ್ಲ? ಶಿಕ್ಷಣವೇ ಧರ್ಮ ಅದಕ್ಕೆ ಕೈ ಹಾಕಬೇಡಿ. ಗ್ಯಾರಂಟಿಗಳನ್ನು ವಿರೋಧಿಸಿದ್ದ ಬಿಜೆಪಿ ಈಗ ಎಲ್ಲೆಡೆ ಗ್ಯಾರಂಟಿ ಯೋಜನೆ ಜಾರಿ ಮಾಡುತ್ತಿದೆ ಎಂದು ಬೆಂಗಳೂರಿನಲ್ಲಿ ಸಚಿವ ಮಧು ಬಂಗಾರಪ್ಪ ತಿಳಿಸಿದರು.








