ಆಧುನಿಕ ಜೀವನಶೈಲಿಯಲ್ಲಿ ಸ್ನೇಹದ ವ್ಯಾಖ್ಯಾನ ಬದಲಾಗುತ್ತಿದೆ. ಕೇವಲ ಫೋನ್ ಕರೆ ಅಥವಾ ಮೆಸೇಜ್‌ಗಳಿಗೆ ಸೀಮಿತವಾಗಿದ್ದ ಸಂಬಂಧಗಳ ನಡುವೆ ಈಗ ‘ಡೋರ್‌ಬೆಲ್ ಫ್ರೆಂಡ್’ ಎಂಬ ಹೊಸ ಸಾಮಾಜಿಕ ಟ್ರೆಂಡ್ ಮುನ್ನೆಲೆಗೆ ಬಂದಿದೆ. ನೈಜ ಸ್ನೇಹದ ಆಳವನ್ನು ಅಳೆಯುವ ಈ ಹೊಸ ಮಾನದಂಡ ಈಗ ಜಾಗತಿಕವಾಗಿ ಚರ್ಚೆಯ ವಿಷಯವಾಗಿದೆ.
ಸಾಮಾನ್ಯವಾಗಿ ನಾವು ಯಾರದ್ದಾದರೂ ಮನೆಗೆ ಹೋಗಬೇಕಾದರೆ ಮೊದಲು ಫೋನ್ ಮಾಡಿ, ಸಮಯ ಕೇಳಿ, ಸಿದ್ಧರಾಗಿ ಹೋಗುತ್ತೇವೆ. ಆದರೆ ‘ಡೋರ್‌ಬೆಲ್ ಫ್ರೆಂಡ್’ ಅಂದರೆ:ಯಾವುದೇ ಮುನ್ಸೂಚನೆ ಅಥವಾ ಫೋನ್ ಕರೆ ಇಲ್ಲದೆ ನೇರವಾಗಿ ಮನೆಗೆ ಬಂದು ಬೆಲ್ ಮಾಡಬಲ್ಲಷ್ಟು ಆಪ್ತವಾಗಿರುವ ಗೆಳೆಯ/ಗೆಳತಿ.
”ನಾನು ನಿನ್ನ ಮನೆ ಹತ್ತಿರ ಇದ್ದೇನೆ, ಮನೆಗೆ ಬರುತ್ತಿದ್ದೇನೆ” ಎಂದು ಹಕ್ಕು ಚಲಾಯಿಸಬಲ್ಲ ಆತ್ಮೀಯರು.
ಇವರ ಭೇಟಿಗೆ ಯಾವುದೇ ಫಾರ್ಮ್ಯಾಲಿಟಿ ಅಥವಾ ವಿಶೇಷ ತಯಾರಿಗಳ (Formal Invitations) ಅಗತ್ಯವಿರುವುದಿಲ್ಲ.
ಈ ಟ್ರೆಂಡ್ ಏಕೆ ಜನಪ್ರಿಯವಾಗುತ್ತಿದೆ?
ಸಹಜತೆ (Authenticity): ಇಂದಿನ ‘ಪರ್ಫೆಕ್ಟ್’ ಜಗತ್ತಿನಲ್ಲಿ, ಮನೆ ಅಸ್ತವ್ಯಸ್ತವಾಗಿದ್ದರೂ ಅಥವಾ ನಾವು ಸಾಧಾರಣ ಉಡುಪಿನಲ್ಲಿದ್ದರೂ ನಮ್ಮನ್ನು ಭೇಟಿ ಮಾಡಬಲ್ಲ ಗೆಳೆಯರ ಅಗತ್ಯ ಎಲ್ಲರಿಗೂ ಇದೆ. ಡೋರ್‌ಬೆಲ್ ಫ್ರೆಂಡ್ಸ್ ಅಂತಹ ಸಹಜತೆಯನ್ನು ಗೌರವಿಸುತ್ತಾರೆ.
ಒಂಟಿತನಕ್ಕೆ ಮದ್ದು: ಡಿಜಿಟಲ್ ಲೋಕದ ಒಂಟಿತನದಿಂದ ಹೊರಬರಲು ಇಂತಹ ಅನಿರೀಕ್ಷಿತ ಭೇಟಿಗಳು ಮನಸ್ಸಿಗೆ ನೆಮ್ಮದಿ ನೀಡುತ್ತವೆ.
ನಂಬಿಕೆಯ ಸಂಕೇತ: ಒಬ್ಬ ವ್ಯಕ್ತಿ ನಿಮ್ಮ ಮನೆಗೆ ಪರ್ಮಿಷನ್ ಇಲ್ಲದೆ ಬರಬಲ್ಲ ಎಂದರೆ, ಅದು ನಿಮ್ಮ ನಡುವೆ ಇರುವ ಗಟ್ಟಿಯಾದ ನಂಬಿಕೆ ಮತ್ತು ಸಲಿಗೆಯನ್ನು ತೋರಿಸುತ್ತದೆ.








